Honda Cars : ಹೊಂಡಾ ಕಾರು ಖರೀದಿಸುವವರಿಗೆ ಸಿಹಿ ಸುದ್ದಿ; 72,340 ರೂ.ಗಳ ವರಗೆ ಭಾರಿ ಡಿಸ್ಕೌಂಟ್‌ ಘೋಷಣೆ

ಹೊಂಡಾ (Honda) ದ ಹೊಸ ಕಾರು ಖರೀದಿಸಬೇಕೆಂದು ಕಾಯುತ್ತಿರುವವರಿಗೆ ಈಗ ಸರಿಯಾದ ಸಮಯ ಬಂದಿದೆ. ಏಕೆಂದರೆ ಜಪಾನಿನ ಕಾರು ತಯಾರಿಕಾ ಕಂಪನಿ ಹೊಂಡಾ (Honda Cars), ಡಿಸೆಂಬರ್‌ 2022ಗೆ ಭಾರಿ ಡಿಸ್ಕೌಂಟ್‌ಅನ್ನು ಘೋಷಿಸಿದೆ. ಇದು ಕಾರಿನ ಆವೃತ್ತಿ, ಗ್ರೇಡ್‌ ಮತ್ತು ಸ್ಥಳದ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ಗ್ರಾಹಕರು ತಮ್ಮ ಹತ್ತಿರದ ಹೊಂಡಾ ಡೀಲರ್‌ಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ. ಹೊಸ ಕೊಡುಗೆ ಮತ್ತು ಪ್ರಯೋಜನಗಳು ಡಿಸೆಂಬರ್‌ 31, 2022 ರವರೆಗೆ ಅನ್ವಯಿಸುತ್ತದೆ.

ಹೊಂಡಾ ಸಿಟಿ (ಫಿಫ್ತ್‌ ಜನರೇಷನ್‌):
ಹೊಂಡಾ ಸಿಟಿಯ ಇತ್ತೀಚಿನ ಆವೃತ್ತಿಗೂ ಡಿಸ್ಕಾಂಟ್‌ ನೀಡಲಾಗಿದೆ. ಅಂದರೆ, ಡಿಸೆಂಬರ್‌ 2022 ಗೆ ಇದು 72,145 ರೂ.ಗಳ ವರಗೆ ಡಿಸ್ಕೌಂಟ್‌ ನೀಡಲಾಗಿದೆ. ಪೆಟ್ರೋಲ್‌ ಮಾನ್ಯುಲ್‌ ಟ್ರಾನ್ಸಿಮಿಷನ್‌ ರೂಪಾಂತರಕ್ಕೆ 30,000 ರೂ. ಗಳ ವರೆಗೆ ನಗದು ರಿಯಾಯಿತಿ ಅಥವಾ 32,145 ರೂ. ವರೆಗಿನ ಫ್ರೀ–ಆಫ್‌–ಕಾಸ್ಟ್‌ ಪರಿಕರಗಳನ್ನು ನೀಡಲಿದೆ. ಇದಲ್ಲದೇ ಕಾರಿನ ಎಕ್ಸಚೇಂಜ್‌ಗೆ 20,000 ರೂ. ರಿಯಾಯಿತಿ ಸಹ ಪಡೆಯಬಹುದಾಗಿದೆ. ಇದರೆ ಜೊತೆಗೆ ನೀವು ಹೊಂಡಾ ಗ್ರಾಹಕರಾಗಿದ್ದರೆ 5,000 ರೂ.ಗಳ ರಾಯಲ್ಟಿ ಬೋನಸ್‌ ಪಡೆಯಬಹುದಾಗಿದೆ. ಇದಲ್ಲದೆ, ಕಂಪನಿಯು 7,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 8,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.

ಇದೇ ಪೆಟ್ರೋಲ್‌ CVTರೂಪಾಂತರದ ಕಾರುಗಳಿಗೆ 20,000 ರೂ. ವರೆಗೆ ನಗದು ರಿಯಾಯಿತಿ ಅಥವಾ 22,642 ರೂ. ಮೌಲ್ಯದ ಫ್ರೀ –ಆಫ್‌–ಕಾಸ್ಟ್‌ ಪರಿಕರಗಳನ್ನು ನೀಡುತ್ತದೆ. ಉಳಿದ ರಿಯಾಯಿತಿಗಳು ಪೆಟ್ರೋಲ್‌ ಮ್ಯಾನ್ಯುಲ್‌ ಟ್ರಾನ್ಸ್‌ಮಿಷನ್‌ನಂತೆಯೇ ಇರುತ್ತದೆ.

ಹೊಂಡಾ WR-V :
ಡಿಸೆಂಬರ್‌ 2022ನ ಅತಿ ಹೆಚ್ಚು ಡಿಸ್ಕೌಂಟ್‌ ಅನ್ನು ಹೊಂಡಾದ WR-Vಗೆ ನೀಡಲಾಗಿದೆ. 72,340 ರೂ. ಗಳ ವರಗೆ ಭಾರಿ ಡಿಸ್ಕೌಂಟ್‌ ಅನ್ನು ಹೊಂಡಾ ನೀಡಿದೆ. ಇದು 30,000 ರೂ. ಗಳ ನಗದು ರಿಯಾಯಿತಿ ಅಥವಾ 35,340 ರೂ.ಗಳ ಫ್ರೀ–ಆಫ್‌–ಕಾಸ್ಟ್‌ ಪರಿಕರಗಳನ್ನು ನೀಡಿದೆ. ಇದರ ಜೊತೆಗೆ ಗ್ರಾಹಕರ ಹಳೆಯ ಕಾರಿನ ವಿನಿಮಯಕ್ಕೆ 20,000 ರೂ.ಗಳನ್ನು ನೀಡಿದೆ. ಇದಲ್ಲದೇ ಹೊಂಡಾ ಗ್ರಾಹಕರಿಗೆ 5,000 ರೂ. ಗಳ ಲಾಯಲ್ಟಿ ಬೋನಸ್‌ ನೀಡುತ್ತದೆ. ಇದಲ್ಲದೆ, ಕಂಪನಿಯು 7,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 5,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ.

ಹೊಂಡಾ ಅಮೇಜ್‌ :
ಹೊಂಡಾ ಅಮೇಜ್‌ ಕಾರು ವರ್ಷಾಂತ್ಯದ ರಿಯಾಯಿತಿಯನ್ನು43,144 ರೂ. ವರೆಗೆ ಪಡೆದುಕೊಂಡಿದೆ. ಇದು 10,000 ರೂ. ಗಳ ನಗದು ರಿಯಾಯಿತಿ ಅಥವಾ 12,144 ರೂ. ವರೆಗಿನ ಫ್ರೀ–ಆಫ್‌–ಕಾಸ್ಟ್‌ ಪರಿಕರಗಳನ್ನು ನೀಡಲಿದೆ. ಇದಲ್ಲದೆ, ಕಂಪನಿಯು 20,000 ರೂಪಾಯಿಗಳ ಕಾರ್ ಎಕ್ಸ್ಚೇಂಜ್ ರಿಯಾಯಿತಿಯನ್ನು ನೀಡುತ್ತದೆ. ಇದರ ಜೊತೆಗೆ 5,000 ರೂಪಾಯಿಗಳ ಗ್ರಾಹಕರ ಲಾಯಲ್ಟಿ ಬೋನಸ್ ಮತ್ತು 6,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತದೆ.

ಹೊಂಡಾ ಜಾಝ್‌ :
ಇದು ಹೊಂಡಾದ ಪ್ರೀಮಿಯಮ್‌ ಹ್ಯಾಚ್‌ಬ್ಯಾಕ್‌ ಕಾರಾಗಿದೆ. ಈ ಕಾರು 37,047 ರೂ.ಗಳ ವರಗೆ ಡಿಸ್ಕೌಂಟ್‌ ಪಡೆದಿದೆ. ಇದಕ್ಕೂ ಸಹ ಉಳಿದ ಕಾರುಗಳಂತೆಯೇ ಡಿಸ್ಕೌಂಟ್‌ ಘೋಷಿಸಿದೆ. ಅದೇನೆಂದರೆ, 10,000 ರೂ. ನಗದು ರಿಯಾಯಿತಿ ಅಥವಾ 12,047 ರೂ. ಮೌಲ್ಯದ ಫ್ರೀ–ಆಫ್–ಕಾಸ್ಟ್‌ ಪರಿಕರಗಳನ್ನು ನೀಡಲಿದೆ. ಗ್ರಾಹಕರು 10,000 ರೂಪಾಯಿಗಳ ಕಾರ್ ವಿನಿಮಯ ರಿಯಾಯಿತಿ ಮತ್ತು 3,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಕಂಪನಿಯು 5,000 ರೂಪಾಯಿಗಳ ಗ್ರಾಹಕರ ಲಾಯಲ್ಟಿ ಬೋನಸ್ ಮತ್ತು 7,000 ರೂಪಾಯಿಗಳ ಹೋಂಡಾ ಕಾರ್ ಎಕ್ಸ್ಚೇಂಜ್ ಪ್ರಯೋಜನವನ್ನು ಸಹ ನೀಡಲಿದೆ.

ಇದನ್ನೂ ಓದಿ : DigiYatra in 3 Airports : 3 ಏರ್‌ಪೋರ್ಟ್‌ಗಳಲ್ಲಿ ಡಿಜಿಯಾತ್ರಾ ಸೇವೆ ಆರಂಭ: ನೋಂದಣಿ ಮಾಡಿಕೊಳ್ಳುವುದು ಹೇಗೆ…

ಇದನ್ನೂ ಓದಿ : Bus facility for government school : ಶಾಲೆಗಳಿಗೆ ಸರಕಾರದಿಂದಲೇ ಬಸ್‌ ಸೌಲಭ್ಯ : ಸಿಎಂ ಬಸವರಾಜ್‌ ಬೊಮ್ಮಾಯಿ

(Honda Cars offers massive discounts on these cars for the month of December 2022)

Comments are closed.