Kuldeep Sen life story : ಕ್ಷೌರಿಕನ ಮಗ ಭಾರತ ಪರ ಏಕದಿನ ಕ್ರಿಕೆಟ್ ಆಡಿದ ರೋಚಕ ಕಥೆ

ಬೆಂಗಳೂರು: ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ ಕುಲ್ದೀಪ್ ಸೇನ್ (Kuldeep Sen) ಬೆಂಕಿಯಲ್ಲಿ ಅರಳಿದ ಹೂವು. ಭಾರತ ಪರ 250ನೇ ಆಟಗಾರನಾಗಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಕುಲ್ದೀಪ್ ಸೇನ್, ಚೊಚ್ಚಲ ಪಂದ್ಯದಲ್ಲೇ 2 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಪದಾರ್ಪಣೆಯ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತ್ತು.

ಮಧ್ಯಪ್ರದೇಶದ ಬಲಗೈ ವೇಗದ ಬೌಲರ್ ಕುಲ್ದೀಪ್ ಸೇನ್, ಐಪಿಎಲ್’ನಿಂದ ಬೆಳಕಿಗೆ ಬಂದ ಪ್ರತಿಭೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ 7 ಪಂದ್ಯಗಳನ್ನಾಡಿದ್ದ ಕುಲ್ದೀಪ್ ಸೇನ್ 8 ವಿಕೆಟ್ ಪಡೆದು ಮಿಂಚಿದ್ದರು. 26 ವರ್ಷ ವಯಸ್ಸಿನ ಕುಲ್ದೀಪ್ ದೇಶೀಯ ಕ್ರಿಕೆಟ್’ನಲ್ಲಿ 17 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು 52 ವಿಕೆಟ್’ಗಳನ್ನು ಪಡೆದಿದ್ದಾರೆ. 14 ಲಿಸ್ಟ್ ಎ ಪಂದ್ಯಗಳಿಂದ 27 ವಿಕೆಟ್’ಗಳನ್ನು ಕಬಳಿಸಿರುವ ಕುಲ್ದೀಪ್ ಗಂಟೆಗೆ ಸತತವಾಗಿ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಪ್ರತಿಭಾವಂತ. 2018ರ ರಣಜಿ ಟ್ರೋಫಿ ಟೂರ್ನಿಯಲ್ಲಿ 8 ಪಂದ್ಯಗಳಿಂದ 25 ವಿಕೆಟ್ ಪಡೆದು ಮಿಂಚಿದ್ದ ಕುಲ್ದೀಪ್ ಮೊದಲ ಬಾರಿ ಲೈಮ್ ಲೈಟ್’ಗೆ ಬಂದಿದ್ದರು.

ಇದನ್ನೂ ಓದಿ : KL Rahul : ಕೆ.ಎಲ್ ರಾಹುಲ್ 5ನೇ ಕ್ರಮಾಂಕಕ್ಕೆ ಬೆಸ್ಟ್ ಪ್ಲೇಯರ್.. ಯಾಕೆ ಗೊತ್ತಾ..? ಇಲ್ಲಿದೆ ಉತ್ತರ

ಇದನ್ನೂ ಓದಿ : India vs Bangladesh 1st ODI: ಕನ್ನಡಿಗ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ

ಇದನ್ನೂ ಓದಿ : Mayank Agarwal – Manish Pandey : ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮೂಲ ಬೆಲೆ ರೂ. 1 ಕೋಟಿ

ಇದನ್ನೂ ಓದಿ : Pele health condition:ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸದ ಫುಟ್ಬಾಲ್ ದಿಗ್ಗಜ ಪೀಲೆ; ಪಾಲಿವೇಟಿವ್ ಕೇರ್ ಗೆ ಶಿಫ್ಟ್

ಕುಲ್ದೀಪ್ ಸೇನ್ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ತಂದೆ ಕ್ಷೌರಿಕ (Barber’s son). ಊರಲ್ಲೇ ಸಣ್ಣದೊಂದು ಸಲೂನ್ ನಡೆಸುತ್ತಿದ್ದಾರೆ. ಕುಲ್ದೀಪ್ ಅವರಿಗೆ ಒಟ್ಟು ನಾಲ್ಕು ಮಂದಿ ಅಣ್ಣ ತಮ್ಮಂದಿರಿದ್ದಾರೆ. ಬಾಲ್ಯದಿಂದಲೇ ವೇಗವಾಗಿ ಬೌಲಿಂಗ್ ಮಾಡುತ್ತಿದ್ದ ಕುಲ್ದೀಪ್ ಅವರನ್ನು ಮೊದಲು ಗುರುತಿಸಿದ ಕೋಚ್ ಆರಿಲ್ ಅಂಥೋನಿ. ಬಡ ಕುಟುಂಬದಿಂದ ಬಂದಿರುವ ಕುಲ್’ದೀಪ್ ಸೇನ್ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ಈಗ ಭಾರತ ಪರ ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಂದ ವಂಡೇ ಕ್ಯಾಪ್ ಪಡೆದ ಕುಲ್’ದೀಪ್ ಸೇನ್, ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ ಆಡಿದ 250ನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Kuldeep Sen : An exciting story of a barber’s son playing ODI cricket for India

Comments are closed.