ಬೆಂಗಳೂರು: Shivanna in Tamil Movie: ವೇದ ಸಿನಿಮಾದ ರಿಲೀಸ್ ಡೇಟ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ. ತಾವು ಕಾಲಿವುಡ್ ಗೆ ಕಾಲಿಡುತ್ತಿರುವುದಾಗಿ ಪೋಸ್ಟರ್ ಮೂಲಕ ತಿಳಿಸಿದ್ದಾರೆ.
ಕನ್ನಡಿಗರ ಪಾಲಿನ ನೆಚ್ಚಿನ ಶಿವಣ್ಣ ಕಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ನಟ ಧನುಷ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಧನುಷ್ ಅಣ್ಣನ ಪಾತ್ರದಲ್ಲಿ ಶಿವಣ್ಣ ಮಿಂಚಲಿದ್ದಾರೆ.
Happy to be a part of #CaptainMiller with the immensely talented @dhanushkraja & the legendary @SathyaJyothi films. Looking forward to work with the team. @sundeepkishan @priyankaamohan @gvprakash pic.twitter.com/JlZZvNsoqI
— DrShivaRajkumar (@NimmaShivanna) December 8, 2022
ಇದನ್ನೂ ಓದಿ: BCCI postmortem Meeting : ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು, ಬಿಸಿಸಿಐ ಮೀಟಿಂಗ್’ನಲ್ಲಿ ಹೊರ ಬೀಳಲಿದೆ ಮಹತ್ವದ ನಿರ್ಧಾರ
ಈ ಕುರಿತು ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ಶಿವರಾಜ್ ಕುಮಾರ್ ಮಾಹಿತಿ ನೀಡಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಸಿನಿಮಾಗೆ ಸತ್ಯಜ್ಯೋತಿ ಫಿಲ್ಮ್ ಬಂಡವಾಳ ಹೂಡಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ. ಸಂದೀಪ್ ಕಿಶನ್, ಪ್ರಿಯಾಂಕಾ ಅರುಲ್ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಸಿನಿಮಾದ ಹೆಸರೇ ಸೂಚಿಸುವಂತೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾ 1930-40ರ ದಶಕದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಹಿನ್ನೆಲೆಯ ಕಥಾ ಹಂದರ ಹೊಂದಿದೆ. ಉಳಿದಂತೆ ಯಾವ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣ, ನಾಗೂರನ್ ಅವರ ಸಂಕಲನ ಹಾಗೂ ಜಿ.ವಿ.ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಮದನ್ ಕರ್ಕಿ ಸಂಭಾಷಣೆ, ರಾಷ್ಟ್ರಪ್ರಶಸ್ತಿ ವಿಜೇತೆ ಪೂರ್ಣಿಮಾ ರಾಮಸ್ವಾಮಿ ಮತ್ತು ಕಾವ್ಯ ಶ್ರೀರಾಮ್ ವಸ್ತ್ರವಿನ್ಯಾಸ ಮಾಡಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ನ ಸೆಂದಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ನಿರ್ಮಾಣದ ಕ್ಯಾಪ್ಟನ್ ಮಿಲ್ಲರ್ ಸಿನಿಮಾ 2023ರಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ: India Vs Bangladesh 3rd ODI: ಕ್ಲೀನ್ ಸ್ವೀಪ್ ಭೀತಿಯಲ್ಲಿ ಭಾರತ, ಕನ್ನಡಿಗ ಕೆ.ಎಲ್ ರಾಹಲ್ ಮುಂದೆ ಬಿಗ್ ಚಾಲೆಂಜ್
ಸದ್ಯ ಈ ಸಿನಿಮಾಗೂ ಮುನ್ನ ಕನ್ನಡದ ಬಹುನಿರೀಕ್ಷಿತ ವೇದ ಸಿನಿಮಾ ಡಿ.23ರಂದು ರಿಲೀಸ್ ಆಗಲಿದ್ದು, ಶಿವಣ್ಣರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.
Shivanna in Tamil Movie: Kannada actor ShivRajkumar to play a Brother role of Dhanush in Tamil Captain Miller movie