KSP exam date: 70 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ: ಡಿ.18ರಂದು ನಡೆಯಲಿದೆ ಲಿಖಿತ ಪರೀಕ್ಷೆ

ಬೆಂಗಳೂರು: KSP exam date: ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ(KSRP) ಹಾಗೂ ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB)ವಿಭಾಗಗಳಲ್ಲಿ ಖಾಲಿ ಇರುವ 70 ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಹಿನ್ನೆಲೆ ಲಿಖಿತ ಪರೀಕ್ಷೆಗೆ (written exam) ದಿನಾಂಕ ಪ್ರಕಟಿಸಲಾಗಿದ್ದು, ಡಿನೆಂಬರ್ 18ರಂದು ಪರೀಕ್ಷೆ ನಡೆಯಲಿದೆ.

ಕರ್ನಾಟಕ ಪೊಲೀಸ್ ಇಲಾಖೆಯು ಲಿಖಿತ ಪರೀಕ್ಷೆಯ ದಿನಾಂಕವನ್ನು ಪತ್ರಿಕಾ ಟಿಪ್ಪಣಿಯಲ್ಲಿ ಬಿಡುಗಡೆ ಮಾಡಿದೆ. 70 ವಿಶೇಷ ಮೀಸಲು ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಡಿ.18ರಂದು ಪರೀಕ್ಷೆ ದಿನಾಂಕ ನಿಗದಿಪಡಿಸಲಾಗಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಪೇಪರ್-1 ಹಾಗೂ ಮಧ್ಯಾಹ್ನ 2ರಿಂದ 3.30ರವರೆಗೆ ಪೇಪರ್- 2 ಈ ಸಮಯದಲ್ಲಿ ಪರೀಕ್ಷೆ ನಡೆಯಲಿದೆ. ಬೆಂಗಳೂರಿನ 12 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಇದನ್ನೂ ಓದಿ:  10th 12th practical exams 2023: CBSE 10, 12ನೇ ತರಗತಿ ಪ್ರಾಯೋಗಿಕ ಪರೀಕ್ಷೆಗಳ 2023ರ ಮಾರ್ಗಸೂಚಿ ಬಿಡುಗಡೆ

ಡಿಜಿಪಿ ಪ್ರವೀಣ್ ಸೂದ್ ಅವರು ಟ್ವಿಟರ್ ನಲ್ಲಿ ಪ್ರೆಸ್ ನೋಟ್ ಹಂಚಿಕೊಂಡಿದ್ದಾರೆ. ಪರೀಕ್ಷಾ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ https://ksp-recruitment.in/ ನಿಂದ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು (Hall ticket) ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಪ್ರೆಸ್ ನೋಟ್ ನಲ್ಲಿ ಸೂಚಿಸಲಾಗಿದೆ.

ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ.

srsi21.ksp-recruitment.in ವೆಬ್ ಸೈಟ್ ಗೆ ಹೋಗಿ ನನ್ನ ಅಪ್ಲಿಕೇಶನ್ (My appilcation) ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಪುಟವು (New tab) ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರುಜುವಾತುಗಳನ್ನು ನಮೂದಿಸಬೇಕು. ಜೊತೆಗೆ ಅಪ್ಲಿಕೇಶನ್ ನಂಬರ್ (Appilcation number) ಹಾಗೂ ಜನ್ಮದಿನಾಂಕವನ್ನೂ (Date of Birth) ನಮೂದಿಸಬೇಕು. ಬಳಿಕ ಸಲ್ಲಿಸು (Apply) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಪ್ರವೇಶ ಪತ್ರ ಡೌನ್ ಲೋಡ್ ಆಗುತ್ತದೆ.

ಇದನ್ನೂ ಓದಿ: PM Kisan Yojana 13th Installment : ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಬಿಗ್‌ ಶಾಕ್‌ : 2 ಕೋಟಿ ರೈತರಿಗೆ ಹಣ ಸಿಗಲ್ಲ

KSP exam date: Recruitment for 70 Sub Inspector posts: Written exam will be held on December 18th

Comments are closed.