ಬಹು ಭಾಷೆಗಳಲ್ಲಿ ತೆರೆಗೆ ಬರ್ತಿರೋ ಬಿಗ್ ಬಜೆಟ್ ಹಾಗೂ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ ರಾಧೇ ಶ್ಯಾಮ್ ( Radhe Shyam). ಬರೋಬ್ಬರಿ 350 ಕೋಟಿ ಬಜೆಟ್ ನಲ್ಲಿ ಸಿದ್ಧಗೊಂಡಿರೋ ಈ ಸಿನಿಮಾ ನೋಡೋಕೆ ಲಕ್ಷಾಂತರ ಸಿನಿಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸಿನಿಮಾ ಟ್ರೇಲರ್, ಟೀಸರ್, ಫರ್ಸ್ಟ್ ಲುಕ್ ಸೇರಿದಂತೆ ನೊರೆಂಟು ಕಾರಣಕ್ಕೆ ಸುದ್ದಿಯಾಗಿರೋ ರಾಧೇ ಶ್ಯಾಮ್ ಈಗ ಸ್ಯಾಂಡಲ್ ವುಡ್ ನೊಂದಿಗೂ ಬೆಸೆದುಕೊಂಡಿದ್ದು ಸದ್ದು ಮಾಡಿದೆ.
ರಾಧೇ ಶ್ಯಾಮ್ ಸಿನಿಮಾದ ಗೆಲುವಿಗಾಗಿ ಚಿತ್ರತಂಡ ಸಖತ್ ಟ್ರೆಂಡಿ ಟ್ರಿಕ್ಸ್ ಗಳನ್ನು ಅನುಸರಿಸುತ್ತಿದೆ. ಇತ್ತೀಚಿಗಷ್ಟೇ ಸಿನಿಮಾ ತಂಡ ವಾಯ್ಸ್ ಓವರ್ ಗಾಗಿ ಬಿಗ್ ಬೀ ಅಮಿತಾಭ್ ಬಚ್ಚನ್ ರನ್ನು ಸಂಪರ್ಕಿಸಿದ್ದು ಸುದ್ದಿಯಾಗಿತ್ತು. ಈಗ ರಾದೇ ಶ್ಯಾಮ್ (Radhe Shyam) ಚಿತ್ರತಂಡ ಕನ್ನಡಿಗರು ಹಾಗೂ ಮಲೆಯಾಳಂ ಚಿತ್ರರಂಗ ಹೀಗೆ ಎಲ್ಲರನ್ನು ಸೆಳೆಯುವ ಪ್ರಯತ್ನ ಮಾಡಿರೋ ಸಂಗತಿ ಬಯಲಾಗಿದೆ.
ಹೌದು, ರಾದೇ ಶ್ಯಾಮ್ (Radhe Shyam) ತಂಡ, ಸಿನಿಮಾದ ನಿರೂಪಣೆಗಾಗಿ ಬಿಗ್ ಬೀ ಅಮಿತಾಬ್ ಬಚ್ಚನ್, ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಮಲೆಯಾಳಂ ಸ್ಟಾರ್ ನಟ ಪ್ರಥ್ವಿರಾಜ್ ಮೊರೆ ಹೋಗಿದೆ ಚಿತ್ರತಂಡ. ಇದೇನು ಇಷ್ಟೊಂದು ನಟರು ಸಿನಿಮಾದ ಪ್ರಮೋಶನ್ ಗಾಗಿ ದುಡಿಯುತ್ತಾರಾ ಎಂದ್ರಾ ಹೌದು. ಬಹುಭಾಷೆಗಳಲ್ಲಿ ರಿಲೀಸ್ ಆಗ್ತಿರೋ ಸಿನಿಮಾ ಗಾಗಿ ಬಹುಭಾಷೆಯ ಸ್ಟಾರ್‌ನಟರನ್ನು ಚಿತ್ರತಂಡ ಒಂದುಗೂಡಿಸಿದೆ. ಚಿತ್ರದ ಹಿಂದಿ ನಿರೂಪಣೆಯನ್ನು ಅಮಿತಾಬ್ ಬಚ್ಚನ್ ಮಾಡಿದ್ದರೇ, ಕನ್ನಡಕ್ಕಾಗಿ ನಟ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಇನ್ನು ಟಾಲಿವುಡ್ ನ ಸ್ಟಾರ್ ನಿರ್ದೇಶಕ ರಾಜಮೌಳಿ ಹಾಗೂ ಮಲೆಯಾಳಂ ಪ್ರಥ್ವಿರಾಜ್ ಕಂಠದಾನಮಾಡಿದ್ದಾರೆ. ಇದರಿಂದ ಶಿವಣ್ಣ ಸೇರಿದಂತೆ ರಾಜಮೌಳಿ ಹಾಗೂ ನಟ ಪ್ರಥ್ವಿರಾಜ್ ಅಭಿಮಾನಿಗಳನ್ನು ಚಿತ್ರಮಂದಿರದತ್ತ ಸೆಳೆಯೋದು ರಾಧೇ ಶ್ಯಾಮ್ (Radhe Shyam) ಸಿನಿಮಾದ ಪ್ಲ್ಯಾನ್.
ಈ ವಿಚಾರವನ್ನು ಸ್ವತಃ ರಾದೇ ಶ್ಯಾಮ್ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ರಾಜ್ ಮೌಳಿ, ಅಮಿತಾಬ್ ಬಚ್ಚನ್ ಹಾಗೂ ಶಿವರಾಜ್ ಕುಮಾರ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ಇನ್ನು ಇದೇ ಮಾರ್ಚ್ 11 ರಂದು ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ರಾದೇ ಶ್ಯಾಮ್ ರಿಲೀಸ್ ಆಗಲಿದ್ದು ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿದ್ದಾರೆ.
ಇದನ್ನೂ ಓದಿ : ಶಾಹಿದ್ ಸಹೋದರ ಸನಾ ಅದ್ದೂರಿ ಶಾದಿಗೆ ಸಾಕ್ಷಿಯಾದ ಬಾಲಿವುಡ್
ಇದನ್ನೂ ಓದಿ : ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಕ್ತು ಸಿಹಿಸುದ್ದಿ: ವಿಕ್ರಾಂತ್ ರೋಣಾ ಮೂವಿ ಬಿಗ್ ಅಪ್ಡೇಟ್
(Shivaraj Kumar in Radhe Shyam Cinema )