Siddhant Veer Suryavanshi : ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ಸಾವು

ನವದೆಹಲಿ : ಜನಪ್ರಿಯ ಹಿಂದಿ ಕಿರುತೆರೆ ನಟ ಸಿದ್ದಾಂತ್ ವೀರ್ ಸೂರ್ಯವಂಶಿ (Siddhant Veer Suryavanshi)ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ನಟ ಸಿದ್ದಾಂತ್ ಸೂರ್ಯವಂಶಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ನಟ ಸಿದ್ದಾಂತ್ ಸೂರ್ಯವಂಶಿ ತಮ್ಮ ನಿಧನದಿಂದ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ನಟ ಸಿದ್ದಾಂತ್ ಸೂರ್ಯವಂಶಿ ‘ಕ್ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಖ್ಯಾತ ಛಾಯಾಗ್ರಾಹಕ ವಿರಲ್ ಭಯಾನಿ ಅವರ ಹಠಾತ್ ನಿಧನದ ಸುದ್ದಿಯನ್ನು ಹಂಚಿಕೊಂಡಿದ್ದಾರೆ, “ಈ ಹಿಂದೆ ಆನಂದ್ ಸೂರ್ಯವಂಶಿ ಎಂದು ಕರೆಯಲ್ಪಡುವ ನಟ ಸಿದ್ದಾಂತ ಸೂರ್ಯವಂಶಿ ಅವರ ಬಗ್ಗೆ ಆಘಾತಕಾರಿ ಸುದ್ದಿ. ಅವರ ಪತ್ನಿ ಅಲೆಸಿಯಾ ಕುಟುಂಬಕ್ಕೆ ಸಂತಾಪ. OM ಶಾಂತಿ.” ಎಂದಿದ್ದಾರೆ


ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುತ್ತಾರೆ. ನಟ ಸಿದ್ದಾಂತ್ ಯಾವಾಗಲೂ ತುಂಬಾ ಫಿಟ್ ಆಗಿದ್ದರು. ಸಿದ್ಧಾಂತ್ ಇತ್ತೀಚೆಗೆ ತನ್ನ ಹೆಸರನ್ನು ಆನಂದ್‌ನಿಂದ ಸಿದ್ಧಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು. ಸಿದ್ದಾಂತ್ ಸೂರ್ಯವಂಶಿ ‘ಸುಫಿಯಾನಾ ಇಷ್ಕ್ ಮೇರಾ’, ‘ಜಿದ್ದಿ ದಿಲ್ ಮಾನೆ ನಾ’, ‘ವಾರಿಸ್’, ‘ಸಾತ್ ಫೆರೆ: ಸಲೋನಿ ಕಾ ಸಫರ್’, ‘ಕಸೌತಿ ಜಿಂದಗಿ ಕೇ’ ಸೇರಿದಂತೆ ಇತರ ಹಲವಾರು ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದರು. ಅವರು ಕೊನೆಯದಾಗಿ Zee TV ಶೋ ‘ಕ್ಯು ರಿಶ್ಟನ್ ಮೇ ಕಟ್ಟಿ ಬತ್ತಿ’ ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ : Vasuki Vaibhav Movie Song release: ‘ದೂರದರ್ಶನ’ದಲ್ಲಿ ವಾಸುಕಿ ವೈಭವ್ ಚಿತ್ರಗೀತೆ : ‘ಕಣ್ಣು ಕಣ್ಣು ಕಾದಾಡುತ ಇರಲಿ’ ಸಾಂಗ್ ರಿಲೀಸ್

ಇದನ್ನೂ ಓದಿ : Manas Joshi gives birth to a baby girl : ಹೆಣ್ಣು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಮಾನಸ ಜೋಶಿ

ಇದನ್ನೂ ಓದಿ : Mata Trailer Release : ನವೆಂಬರ್ 18ಕ್ಕೆ ರವೀಂದ್ರ ವೆಂಶಿ ನಿರ್ದೇಶನದ “ಮಠ” ಟ್ರೇಲರ್ ರಿಲೀಸ್

ಜಿಮ್ ಮಾಡುವಾಗ ಕುಸಿದು ಬೀಳುವ ಮತ್ತು ಸಾವಿನ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಚಿತ್ರರಂಗದ ಅನೇಕರು ಈ ರೀತಿ ಸಾವನ್ನಪ್ಪಿದ್ದಾರೆ. ಇದೀಗ ಹಿಂದಿ ಕಿರುತೆರೆ ನಟ ಸಿದ್ದಾಂತ್ ವೀರ್ ಸೂರ್ಯವಂಶಿ ಅಕಾಲಿಕ ನಿಧನರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಕಿರುತೆರೆ ಮತ್ತು ಹಿರಿತೆರೆಯಿಂದ ಅನೇಕರು ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. ಸಿನಿಮಾರಂಗದಲ್ಲಿ ಅಕಾಲಿಕ ಮರಣ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

Siddhant Veer Suryavanshi: Famous TV actor dies after collapsing while working out at gym

Comments are closed.