Tulsi leaves:”ತುಳಸಿ ಎಲೆ”ಯಿಂದ ಡ್ಯಾಂಡ್ರಫ್ ಸಮಸ್ಯೆ ನಿವಾರಣೆ

(Tulsi leaves)ಆಯುರ್ವೇದದಲ್ಲಿ ತುಳಸಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.ತುಳಸಿ ಗಿಡಗಳಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ ಪ್ರತಿನಿತ್ಯ ತುಳಸಿ ಎಲೆಯನ್ನು ಸೇವಿಸಿದರೆ ಆರೋಗ್ಯಕ್ಕೂ ಉತ್ತಮ. ಅಷ್ಟೇ ಅಲ್ಲದೆ ಇದರಿಂದ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ತುಳಸಿ ಎಲೆಯಿಂದ ತಯಾರಿಸಿದ ಲಿಕ್ವಿಡ್‌ ಅನ್ನು ತಲೆಗೆ ಹಚ್ಚುವುದರಿಂದ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ಲಿಕ್ವಿಡ್‌ ಮಾಡುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Tulsi leaves)ಬೇಕಾಗುವ ಸಾಮಾಗ್ರಿಗಳು:
ತುಳಸಿ ಎಲೆ
ಟೀ ಪೌಡರ್‌
ನೀರು

ಮಾಡುವ ವಿಧಾನ:
ಒಂದು ಪಾತ್ರೆಗೆ ಒಂದು ಬೌಲ್ ನಷ್ಟು ತುಳಸಿ ಎಲೆ, ನಾಲ್ಕು ಚಮಚ ಟಿ ಪೌಡರ್‌ ,ಎರಡು ಕಪ್‌ ನೀರನ್ನು ಹಾಕಿಕೊಂಡು ಕುದಿಸಿಕೊಳ್ಳಬೇಕು ನಂತರ ಅದನ್ನು ತಣ್ಣಗಾಗುವವರೆಗೆ ಬಿಡಬೇಕು. ಕುದಿಸಿಕೊಂಡ ಮಿಶ್ರಣ ತಣ್ಣಗಾದ ಮೇಲೆ ಒಂದು ಬಾಟಲ್ ನಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಲಿಕ್ವಿಡ್‌ ಅನ್ನು ಹಾಗೆಯೇ ತಲೆಯ ಭಾಗಕ್ಕೆ ಹಚ್ಚಬಹುದು ಇಲ್ಲವಾದಲ್ಲಿ ಎಣ್ಣೆಯ ಜೊತೆ ಮಿಕ್ಸ್‌ ಮಾಡಿಕೊಂಡು ತಲೆಗೆ ಹಚ್ಚುವುದರಿಂದ ಡ್ಯಾಂಡ್ರಫ್ ಸಮಸ್ಯೆ ಕಡಿಮೆ ಆಗುತ್ತದೆ.

ಟೀ ಪೌಡರ್‌
ಟೀ ಪೌಡರ್‌ ನಿಂದ ಹಲವಾರು ಉಪಯೋಗಗಳಿವೆ ಇದನ್ನು ಪೆಸ್‌ ಪ್ಯಾಕ್‌ ಮತ್ತು ಸ್ಕ್ರಬ್‌ ನ ರೀತಿಯಲ್ಲಿ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಲೆಗಳ ನಿವಾರಣೆಗೆ ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ನಮ್ಮ ಕೂದಲು ಉದುರದಂತೆ ನೋಡಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ:Dark Circles :ಡಾರ್ಕ್ ಸರ್ಕಲ್ಸ್ ನಿಂದ ಮುಕ್ತಿ ಪಡೆಯಬೇಕಾ : ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

ಇದನ್ನೂ ಓದಿ:Face Pack:ಟ್ಯಾನ್ ಆಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು‌ ಇಲ್ಲಿದೆ ಫೇಸ್ ಪ್ಯಾಕ್

ತುಳಸಿ ಎಲೆ
ತುಳಸಿಯ ಎಲೆಗಳಲ್ಲಿ ಔಷಧೀಯ ಗುಣ ಹೆಚ್ಚಿರುವುದರಿಂದ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ದೇಹದಲ್ಲಿ ಆಗುವಂತಹ ಗಾಯಗಳನ್ನು ಬಹಳ ಬೇಗನೆ ಗುಣಪಡಿಸುವಂತಹ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ತುಳಸಿ ತ್ವಚೆಯ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಕೂದಲಿನ ಸಮಸ್ಯೆಯನ್ನು ದೂರ ಮಾಡುತ್ತದೆ. ಇದರಿಂದ ತಯಾರಿಸಿದ ಔಷಧೀಯನ್ನು ತಲೆಗೆ ಹಚ್ಚುವುದರಿಂದ ಡ್ಯಾಂಡ್ರಫ್‌ ಮತ್ತು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆಮಾಡುತ್ತದೆ.

Dandruff problem relief with Tulsi leaves

Comments are closed.