ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಸೈಮಾ ಅವಾರ್ಡ್ (SIIMA Awards 2023 ) ಘೋಷಣೆಯಾಗಿದೆ. ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕೆಜಿಎಫ್ ನಟ ಯಶ್ (KGF Yash), ಕಾಂತಾರ ರಿಷಬ್ ಶೆಟ್ಟಿ(Kantara Rishab Shetty), ಚಾರ್ಲಿ 777 ರಕ್ಷಿತ್ ಶೆಟ್ಟಿ (Rakshith Shetty Charli 777) ಪ್ರಶಸ್ತಿ ಬಾಚಿಕೊಂಡಿದ್ದಾರೆ.
ತೆಲಗು ಚಿತ್ರರಂಗದ ಖ್ಯಾತನಟ ಜೂನಿಯರ್ ಎನ್‌ಟಿಆರ್ (Junior NTR) ಅತ್ಯುತ್ತಮ ನಟ ಪ್ರಶಸ್ತಿಗೆ (SIIMA Best Actor Award) ಆಯ್ಕೆಯಾಗಿದ್ದಾರೆ. ಜೊತೆ ಕನ್ನಡ ಖ್ಯಾತ ನಟರಾದ ಯಶ್, ಕನ್ನಡದ 777 ಚಾರ್ಲಿ ಅತ್ಯುತ್ತಮ ಸಿನಿಮಾ ಖ್ಯಾತಿಗೆ ಪಾತ್ರವಾಗಿದ್ದರೆ, ಕೆಜಿಎಫ್ ಖ್ಯಾತಿಯ ಅಚ್ಯುತ ರಾವ್ ಕೂಡ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸೈಮಾ ಅವಾರ್ಡ್ಸ್ (SIIMA 2023 )ಗೆ ಆಗಸ್ಟ್ 1ರಂದು ನಾಮ ನಿರ್ದೇಶಿತರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಸೆಪ್ಟೆಂಬರ್ 15 ರಂದು SIIMA 2023 ಪ್ರಶಸ್ತಿಯನ್ನು ವಿತರಿಸಲಾಗಿದೆ. ಇಂದು ಕೂಡ ಪ್ರಶಸ್ತಿ ಪ್ರಧಾನ ಸಮಾರಂಭ ಮುಂದುವರಿಯಲಿದೆ. 11 ನೇ ಆವೃತ್ತಿಯ ಸೈಮಾ ಅವಾರ್ಡ್ಸ್ ವಿತರಣೆ ಮಾಡಲಾಗುತ್ತಿದೆ. ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (SIIMA) ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನ ಚಿತ್ರೋದ್ಯಮಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ : ತೆರೆಗೆ ಬರಲ್ವಾ ಪುಷ್ಪ-2 ? ಸಿನಿಮಾ ವಿಳಂಬವಾಗ್ತಿರೋದ್ಯಾಕೆ ? ಇಲ್ಲಿದೆ ಅಸಲಿ ಸತ್ಯ
ಕನ್ನಡ ಚಿತ್ರರಂಗಕ್ಕೆ ಧಕ್ಕಿದ ಸೈಮಾ ಅವಾರ್ಡ್ಸ್ (SIIMA 2023 Kannada Awards) :
ಅತ್ಯುತ್ತಮ ನಟ ಪ್ರಶಸ್ತಿ : ಯಶ್ (ಕೆಜಿಎಫ್ ಚಾಪ್ಟರ್ -2), ಅತ್ಯುತ್ತಮ ನಟಿ ಪ್ರಶಸ್ತಿ ಶ್ರೀನಿಧಿ ಶೆಟ್ಟಿ (ಕೆಜಿಎಫ್ ಚಾಪ್ಟರ್ -2), ಅತ್ಯುತ್ತಮ ನಟ ಪ್ರಶಸ್ತಿ (ಕ್ರಿಟಿಕ್ಸ್) ರಿಷಬ್ ಶೆಟ್ಟಿ ( ಕಾಂತಾರಾ), ಅತ್ಯುತ್ತಮ ಸಿನಿಮಾ ಪ್ರಶಸ್ತಿ : 777 ಚಾರ್ಲಿ ( ನಿರ್ದೇಶಕ ಕಿರಣ್ ರಾಜ್), ಅತ್ಯುತ್ತಮ ಸಂಗೀತ ಪ್ರಶಸ್ತಿ : ಅಜನೀಶ್ ಲೋಕನಾಥ್ ( ಕಾಂತಾರ), ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ : ಪ್ರಕಾಶ್ ತುಮ್ಮಿನಾಡು (ಕಾಂತಾರ) ಪ್ರಶಸ್ತಿ ಪಡೆದುಕೊಂಡಿದ್ದಾರೆ.
Our critics can't stop raving about @shetty_rishab, the deserving winner of the Best Actor in a Leading Role – Critics (Kannada) award for his incredible performance in Kantara!#NEXASIIMA #DanubeProperties #A23Rummy #HonerSignatis #Flipkart #ParleHideAndSeek #LotMobiles… pic.twitter.com/aMOVJ6MwvB
— SIIMA (@siima) September 15, 2023
ಇನ್ನು ಅತ್ಯುತ್ತಮ ಗಾಯಕ ಪ್ರಶಸ್ತಿ : ವಿಜಯ ಪ್ರಕಾಶ್ ( ಸಿಂಗಾರ ಸಿರಿಯೇ -ಕಾಂತಾರ), ಅತ್ಯುತ್ತಮ ಖಳನಟ ಪ್ರಶಸ್ತಿ : ಅಚ್ಯುತ್ ಕುಮಾರ್ ( ಕಾಂತಾರ), ಅತ್ಯುತ್ತಮ ಪೋಷಕ ನಟ ಪ್ರಶಸ್ತಿ : ದಿಗಂತ್ ಮಚಾಲೆ ( ಗಾಳಿಪಟ-2), ಅತ್ಯುತಮ ಗಾಯಕಿ ಪ್ರಶಸ್ತಿ : ಸುನಿಧಿ ಚೌಹಾಣ್ ( ರಾರಾ ರುಕ್ಕಮ್ಮ), ಅತ್ಯುತ್ತಮ ಹೊಸ ನಟ ಪ್ರಶಸ್ತಿ : ಪ್ರಥ್ವಿ ಶ್ಯಾಮನೂರು (ಪದವಿಪೂರ್ವ).

ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ : ಭುವನ್ ಗೌಡ ( ಕೆಜಿಎಫ್ ಚಾಪ್ಟರ್ 2), ಅತ್ಯುತ್ತಮ ನಟಿ ಪ್ರಶಸ್ತಿ (ಕ್ರಟಿಕ್ಸ್ ) : ಸಪ್ತಮಿ ಗೌಡ ( ಕಾಂತಾರ), ಅತ್ಯುತ್ತಮ ನಟ ಪ್ರಶಸ್ತಿ : ರಕ್ಷಿತ್ ಶೆಟ್ಟಿ ( 777 ಚಾರ್ಲಿ), ಅತ್ಯುತ್ತಮ ಹೊಸ ನಟಿ ಪ್ರಶಸ್ತಿ : ನೀತಾ ಅಶೋಕ್ ( ವಿಕ್ರಾಂತ್ ರೋಣಾ), ಅತ್ಯುತ್ತಮ ಹೊಸ ನಿರ್ಮಾಣ ಪ್ರಶಸ್ತಿ : ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ ( ಡೊಳ್ಳು )ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ : ಶೂಭಾ ರಕ್ಷಾ ( ಹೋಮ್ ಮಿನಿಸ್ಟರ್) ಪ್ರಶಸ್ತಿ ಪಡೆದುಕೊಂಡಿದ್ದಾರೆ.
Achyuth Kumar's powerful portrayal in Kantara left us all speechless. He is indeed the Best Actor in a Negative Role (Kannada) this year. Congratulations!#NEXASIIMA #DanubeProperties #A23Rummy #HonerSignatis #Flipkart #ParleHideAndSeek #LotMobiles #SouthIndiaShoppingMall… pic.twitter.com/NdgDpVD0bg
— SIIMA (@siima) September 15, 2023
ಇದನ್ನೂ ಓದಿ : ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ ಮಾರ್ಟಿನ್ ಚೆಲುವೆ
SIIMA ಪ್ರಶಸ್ತಿಗಳು 2023 : ತೆಲುಗು ವಿಜೇತರ ಪಟ್ಟಿ
ಅತ್ಯುತ್ತಮ ನಟ ಪ್ರಶಸ್ತಿ : ಜೂನಿಯರ್ ಎನ್‌ಟಿಆರ್, ಮೃಣಾಲ್ ಠಾಕೂರ್
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ : RRR ಗಾಗಿ ಜೂನಿಯರ್ NTR
ಅತ್ಯುತ್ತಮ ನಿರ್ದೇಶಕ : ಆರ್‌ಆರ್‌ಆರ್‌ಗಾಗಿ ಎಸ್‌ಎಸ್ ರಾಜಮೌಳಿ
ಅತ್ಯುತ್ತಮ ಚಿತ್ರ : ಸೀತಾ ರಾಮಂ
ಅತ್ಯುತ್ತಮ ಚೊಚ್ಚಲ ನಟಿ : ಸೀತಾ ರಾಮಂ ಚಿತ್ರಕ್ಕಾಗಿ ಮೃಣಾಲ್ ಠಾಕೂರ್
ಫ್ಲಿಪ್‌ಕಾರ್ಟ್ ಫ್ಯಾಶನ್ ಯೂತ್ ಐಕಾನ್ : ಶ್ರುತಿ ಹಾಸನ್
ಅತ್ಯುತ್ತಮ ಚೊಚ್ಚಲ ನಿರ್ಮಾಪಕರು : ಮೇಜರ್ ಚಿತ್ರಕ್ಕಾಗಿ ಶರತ್-ಅನುರಾಗ್
ಭರವಸೆಯ ಹೊಸಬರವಸೆ : ಬೆಲ್ಲಂಕೊಂಡ ಗಣೇಶ್
ಅತ್ಯುತ್ತಮ ನಟ (ವಿಮರ್ಶಕರು): ಅಡಿವಿ ಶೇಶ್
ಅತ್ಯುತ್ತಮ ನಟಿ : ( ಧಮಾಕಾ ) ಶ್ರೀಲೀಲಾ
ಅತ್ಯುತ್ತಮ ನಟಿ (ವಿಮರ್ಶಕರು) : (ಸೀತಾ ರಾಮಂ) ಮೃಣಾಲ್ ಠಾಕೂರ್
SIIMA Awards 2023 full winners list Jr NTR Yash Rishab Shetty Rakshit Shetty Award