ಮಂಗಳವಾರ, ಏಪ್ರಿಲ್ 29, 2025
HomeCinemaAjay Devgn : ಮತ್ತೆ ತೆರೆಗೆ ಬರುತ್ತಾ ಸಿಂಗಂ : ಅಜಯ್ ದೇವಗನ್ ಕೊಟ್ಟ ಸಿಹಿಸುದ್ದಿ...

Ajay Devgn : ಮತ್ತೆ ತೆರೆಗೆ ಬರುತ್ತಾ ಸಿಂಗಂ : ಅಜಯ್ ದೇವಗನ್ ಕೊಟ್ಟ ಸಿಹಿಸುದ್ದಿ ಏನು ಗೊತ್ತಾ?!

- Advertisement -

ಬಾಲಿವುಡ್ ನ ಸಖತ್ ಹಿಟ್ ಮೂವಿಗಳಲ್ಲಿ ಸಿಂಗಂ ಕೂಡಾ ಒಂದು.‌ ಖಡಕ್ ಖಾಕಿ ಖದರ್ ತೋರಿಸಿದ್ದ ಈ ಸಿನಿಮಾ ಚಿತ್ರಕಥೆ ಹಾಗೂ ಬಾಲಿವುಡ್ ರಿಯಲ್ ಹೀರೋ ಅಜಯ್ ದೇವಗನ್ (Ajay Devgn) ನಟನೆಯಿಂದಲೇ ಗೆದ್ದಿತ್ತು. ಅದಾಗ ಬಳಿಕ ಸಿನಿಮಾದ ಕತೆ ಬೇರೆ ಭಾಷೆಗಳಿಗೂ ಡಬ್ ಆಗಿತ್ತು. ಪೊಲೀಸ್ ಅಧಿಕಾರಿಗಳಿಗೆ ಹೊಸ ಇಮೇಜ್ ತಂದುಕೊಟ್ಟ ಸಿಂಗಂ ಮೂವಿಯಿಂದ ಭಾರತದ ಅದೇಷ್ಟೋ ಪೊಲೀಸ್ ಆಧಿಕಾರಿಗಳಿಗೆ ಸಿಂಗಂ ಎಂಬ ಹೆಗ್ಗಳಿಕೆಯೂ ಸಿಕ್ಕಿತ್ತು.

ಈಗ ಈ ಸಿಂಗಂ ಎಂಬ ಟೈಟಲ್ ಮತ್ತೊಮ್ಮೆ ತೆರೆಗೆ ಬರಲು ಸಿದ್ಧವಾಗಿದೆ. ಮತ್ತೊಮ್ಮೆ ಸಿಂಗಂ ಸಿಕ್ವೆನ್ಸ್ ಮೂಲಕ ತೆರೆಗೆ ಬರೋ ಮುನ್ಸೂಚನೆಯನ್ನು ಅಜಯ್ ದೇವಗನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ವಿಡಿಯೋದಲ್ಲಿ ಅಜಯ್ ದೇವಗನ್ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದು, ಕೊನೆಯಲ್ಲಿ Let Us Try Some Sequence ಎಂದಿದ್ದು ಕೈಯಲ್ಲಿ ಮೂರು ಎಂಬ ಸಂಕೇತ ಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳು ಇದು ಮತ್ತೊಂದು ಸಿಂಗಂ ಸಿಕ್ವೆನ್ಸ್ ಮುನ್ಸೂಚನೆ. ಮತ್ತೊಮ್ಮೆ ಅಜಯ್ ದೇವಗನ್ ಖಾಕಿ ತೊಟ್ಟು ಅಬ್ಬರಿಸೋದನ್ನು ನೋಡಬಹುದು ಎಂದು ಖುಷಿಯಾಗಿದ್ದಾರೆ.

ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರೋ ಅಜಯ್ ದೇವಗನ್ ತಮ್ಮ ಖಡಕ್ ಲುಕ್, ವಿಶಿಷ್ಟ ಮ್ಯಾನರಿಸಂ ಹಾಗೂ ಅದ್ಭುತ ನಟನೆಯಿಂದಲೇ ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಪೂಲ್ ಔರ್ ಕಾಂಟೇ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟ ಅಜಯ್ ದೇವಗನ್, ಜಿಗರ್, ದಿಲ್ ವಾಲೇ, ಗಂಗಾಜಲ್, ಓಂಕಾರ್, ಸಿಂಗಮ್ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.

ಸಿಂಗಂ ಸಿಕ್ವೆನ್ಸ್ ತ್ರೀ ತೆರೆಗೆ ತರಲು ಅಜಯ್ ದೇವಗನ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಸಿಂಗ್ಂ ಸಿನಿಮಾ ದಕ್ಷ ಪೊಲೀಸ್ ಅಧಿಕಾರಿ ಹಾಗೂ ರಾಜಕೀಯ ನಾಯಕರ ನಡುವಿನ ಸಂಘರ್ಷದ ಕತೆಯಾಗಿದ್ದು, ಇದರ ಕತೆ ಸಖತ್ ಹಿಟ್ ಆಗಿತ್ತು. ಈಗ ಮತ್ತೆ ಸಿಕ್ವೆನ್ಸ್ 3 ಮೂಲಕ ಮತ್ತೆ ಬಾಲಿವುಡ್ ನಲ್ಲಿ ಹಂಗಾಮಾ ಸೃಷ್ಟಿಸಲು ಸಿದ್ಧವಾಗಿದೆ. ಸಿಂಗಂ ಸಿನಿಮಾದ ಇನ್ನೊಂದು ಆಕರ್ಷಣೆ ನಟರ ಟೀಂ ಇತ್ತು. ಆದರೆ ಈ ಸಿನಿಮಾದಲ್ಲೂ ಎಲ್ಲಾ ನಟರು ಕಾಣಿಸಿಕೊಳ್ತಾರಾ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ : Aadhya Anand: ಕನ್ನಡತಿ ಆದ್ಯಾ ಆನಂದ್ ಆಗಿದ್ದಾರೆ ಪಡ್ಡೆ ಹುಡುಗರ ಹೊಸ ‘ಕ್ರಷ್’!

ಇದನ್ನೂ ಓದಿ : ದೇವಸ್ಥಾನದಲ್ಲಿ ಗಂಟೆ ಬಾರಿಸಿದ್ರೆ ಬೀಳುತ್ತೆ ಕೇಸ್ : ದೊಡ್ಡ ಗಣಪತಿ ಸೇರಿ ಹಲವು ದೇವಾಲಯಗಳಿಗೆ ಪೊಲೀಸ್‌ ನೋಟಿಸ್

( Singam coming back to the screen, Bollywood Star Ajay Devgn give Good News)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular