Temple Bell Sound : ದೇವಸ್ಥಾನದಲ್ಲಿ ಗಂಟೆ ಬಾರಿಸಿದ್ರೆ ಬೀಳುತ್ತೆ ಕೇಸ್ : ದೊಡ್ಡ ಗಣಪತಿ ಸೇರಿ ಹಲವು ದೇವಾಲಯಗಳಿಗೆ ಪೊಲೀಸ್‌ ನೋಟಿಸ್

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಕೋಮು ಸೂಕ್ಷ್ಮ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, ಜೋರಾಗಿ ಗಂಟೆ ಶಬ್ದ ( Temple Bell Sound ) ಕೇಳಿಸುತ್ತೆ ಎಂಬ ಕಾರಣಕ್ಕೆ ದೇವಾಲಯಕ್ಕೆ ಪೊಲೀಸ್ ರಿಂದ ನೊಟೀಸ್ ಜಾರಿಯಾಗಿದೆ. ದೇವಾಲಯದಲ್ಲಿ ಬಾರಿಸೋ ಗಂಟೆಯ ಶಬ್ದ ನಿಗದಿತ ಪ್ರಮಾಣವನ್ನು ಮೀರುವಂತಿಲ್ಲ ಎಂದು ನಿರ್ಬಂಧ ಹೇರಿರೋದು ಈಗ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ದೇವಸ್ಥಾನದಲ್ಲಿ ಪೂಜಾ ಸಮಯದಲ್ಲಿ ಹಾಗೂ ಭಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಜೋರಾಗಿ ಗಂಟೆ ಬಾರಿಸೋದು ವಾಡಿಕೆ ಹಾಗೂ ಧಾರ್ಮಿಕ ನಡುವಳಿಕೆ. ಆದರೆ ಈಗ ಇಂತಹದೊಂದು ಧಾರ್ಮಿಕ ನಡುವಳಿಕೆಯ ಕಾರಣಕ್ಕೆ ದೇವಸ್ಥಾನ ವೊಂದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಿಗದಿತ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಬಳಸುತ್ತಿರುವುದಕ್ಕೆ ಪೊಲೀಸ್ ನೋಟೀಸ್ ನೀಡಿದ್ದು, ಶಬ್ದಮಾಲಿನ್ಯ ಉಂಟು ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.

ಕೈಗಾರಿಕಾ ಪ್ರದೇಶ, ವಾಣಿಜ್ಯ ಪ್ರದೇಶ,ಜನವಸತಿ ಪ್ರದೇಶ ಹಾಗೂ ಶಾಂತ ಸ್ಥಳಗಳಲ್ಲಿ ಹಗಲು ವೇಳೆಯಲ್ಲಿ ಎಷ್ಟು ಹಾಗೂ ರಾತ್ರಿ ವೇಳೆಯಲ್ಲಿ ಎಷ್ಟು ಪ್ರಮಾಣದ ಶಬ್ದ ಮಾಡಬಹುದೆಂದ ಸ್ಪಷ್ಟ ಸೂಚನೆಯಿದೆ. ಆದರೆ ಇದೇ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ದೊಡ್ಡ ಗಣಪತಿ ದೇವಸ್ಥಾನ ಸಮೂಹಕ್ಕೆ ನೋಟೀಸ್ ಬಸವನಗುಡಿ ಪೊಲೀಸ್ ರಿಂದ ನೊಟೀಸ್ ಜಾರಿಯಾಗಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಂಟೆ ಶಬ್ದ ಬಂದ್ರೇ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್ ನಲ್ಲಿ ಪೊಲೀಸ್ ಇಲಾಖೆ ಎಚ್ಚರಿಸಿದೆ. ಈ ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ಹೆಚ್ಚಿನ ಶಬ್ದದ ಗಂಟೆ ಹೊಡೆಯದಂತೆ ಬಸವನಗುಡಿಯ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿ ಸೂಚನೆ ದೇವಾಲಯದ ಭಕ್ತಾದಿಗಳಿಗೆ ಸೂಚನೆ ನೀಡಿದ್ದಾರೆ.

ಕೇವಲ ಗಂಟಾನಾದ ಮಾತ್ರವಲ್ಲ, ಡಮರು,ಶಂಖ ಸೇರಿದಂತೆ ಯಾವುದೇ ವಾದ್ಯಗಳನ್ನು ನಿಗದಿ ಪಡಿಸಿದ ಶಬ್ದ ಪ್ರಮಾಣಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸದ್ದು ಬರದಂತೆ ಬಾರಿಸು ವಂತೆ ದೇವಾಲಯಕ್ಕೆ ನೊಟೀಸ್ ನೀಡಲಾಗಿದೆ. ಒಂದೊಮ್ಮೆ ಸೂಚನೆ ಬಳಿಕವೂ ಶಬ್ದ ಬಂದಲ್ಲಿ Noise Pollution (regulation and control rules amended 2000 farmed under the Environment Pollution act 1986 ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡಿದೆ‌. ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ಬಿಬಿಎಂಪಿ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು‌ಮಾಜಿ ಕಾರ್ಪೋರೇಟರ್ ಗಳು ದೇವಸ್ಥಾನಕ್ಕೆ ಬಂದವರನ್ನು ಇಷ್ಟೇ ಪ್ರಮಾಣದಲ್ಲಿ ಶಬ್ದ ಬರುವಂತೆ ಗಂಟೆ ಬಾರಿಸಿ ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಈ ಆದೇಶ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾರಿಗೂ ಇಲ್ಲದ ಆದೇಶ ಹಿಂದೂ ಸಮಾಜಕ್ಕೆ ಮಾತ್ರ ಯಾಕೆ ಎಂದು ಪ್ರಶ್ನಿಸಲಾಗುತ್ತಿದೆ.

ಇದನ್ನೂ ಓದಿ : Best Fitness Tracker: 5 ಸಾವಿರಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಫಿಟ್ನೆಸ್ ಬ್ಯಾಂಡ್‌ಗಳಿವು

ಇದನ್ನೂ ಓದಿ : ಹಿಜಾಬ್ ಪ್ರಕರಣದಲ್ಲಿ ಅಚ್ಚರಿಯ ಬೆಳವಣಿಗೆ : ವಿಚಾರಣೆ ಮುಂದೂಡಲು ಹೈಕೋರ್ಟ್ ಗೆ ವಿದ್ಯಾರ್ಥಿನಿಯರ ಮನವಿ

(Temple bell sound Bangalore Police Notice to Dodda Ganapathi and Other Temples)

Comments are closed.