Sonu Gowda Real Life : ಸದಾ ತಮ್ಮ ಹಾಟ್ ಹಾಟ್ ಆಟಿಟ್ಯೂಡ್ ಗಳಿಂದಲೇಸದ್ದು ಮಾಡಿದ ಹುಡುಗಿ ಸೋನುಶ್ರೀನಿವಾಸ್ ಗೌಡ (Sonu Srinivas Gowda). ಕನ್ನಡದ ಊರ್ಫಿ ಅಥವಾ ಕನ್ನಡದ ಸನ್ನಿಲಿಯೋನ್ (Kannada Sunny Leone ) ಎಂದೇ ಖ್ಯಾತಿ ಪಡೆದಿರೋ ಸೋನುಗೌಡ ಸಿನಿಮಾ, ಧಾರಾವಾಹಿಯಿಂದಲ್ಲ ಬದಲಾಗಿ ಕೇವಲ ಟಿಕ್ ಟಾಕ್ ಅಥವಾ ಸೋಷಿಯಲ್ ಮೀಡಿಯಾದಿಂದಲೇ ಸ್ಟಾರ್ (Social Media Star) ಪಟ್ಟಕ್ಕೇರಿದವರು.

ಪಬ್ಲಿಕ್ ನಲ್ಲಿ ಸೋನು ವಿಡಿಯೋ ಓಫನ್ ಮಾಡಲು ಮುಜುಗರವಾಗುವಷ್ಟು ಮಾಡರ್ನ್ ಆಗಿರೋ ಸೋನು ಮುಟ್ಟಿದ್ದೆಲ್ಲ ವಿವಾದ, ಮಾಡೋದೆಲ್ಲ ಎಡವಟ್ಟು. ಹಾಗಿದ್ದರೇ ಈ ಸೋನು ಎಂಬ ಸುಂದರಿಯ ಹಿನ್ನೆಲೆ ಏನು ? ಆಕೆ ಮಾಡಿದ್ದಾದರೂ ಏನು ? ಅನ್ನೋ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಇದನ್ನೂ ಓದಿ : ಕಾಟೇರ ಸಕ್ಸಸ್ : ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಬೆನ್ನಲ್ಲೇ ಚಿತ್ರರಂಗಕ್ಕೆ ಶುತ್ರಿ ಪುತ್ರಿ ಗೌರಿ
ಮೂಲತಃ ಟಿಕ್ ಟಾಕ್ ಸ್ಟಾರ್ ಆಗಿತೋ ಸೋನು ಗೌಡ, ಬಿಗ್ ಬಾಸ್ ಪ್ರವೇಶಿಸುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು. ರೀಲ್ಸ್ ಮಾಡುತ್ತಲೇ ಲಕ್ಷಾಂತರ ಫಾಲೋವರ್ಸ್ ಪಡೆದಿದ್ದ ಸೋನು ಗೌಡ ಬಿಗ್ ಬಾಸ್ ಮೆಟ್ಟಿಲೇರುತ್ತಲೇ ಕನ್ನಡಿಗರಿಗೆ ಪರಿಚಯವಾಗಿದ್ದರು. ಅದೇ ಪಬ್ಲಿಸಿಟಿಯನ್ನು ಬಳಸಿಕೊಂಡು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಸೋನು ಗೌಡ, ತಮ್ಮದೇ ಬಾಯ್ ಪ್ರೆಂಡ್ ಜೊತೆ ಬೆತ್ತಲಾದ ವಿಡಿಯೋವನ್ನು ವೈರಲ್ ಮಾಡಿಕೊಂಡು ಮತ್ತಷ್ಟು ಅಟೆನ್ಸೆನ್ಸ್ ಪಡೆಯೋ ಸರ್ಕಸ್ ಕೂಡ ಮಾಡಿದ್ದರು.

ಇದಾದ ಮೇಲೆ ತಮ್ಮ ಬಿಡುವಿನ ವೇಳೆಯಲ್ಲಿ ಮಾಲ್ಢಿವ್ದ್ ಪ್ರವಾಸಕ್ಕೆ ಹೋದ ಸೋನು ಗೌಡ ಇದ್ದಕ್ಕಿದ್ದಂತೆ ಜಗಜ್ಜಾಹೀರಾಗಿ ಬಿಟ್ಟರು. ಪ್ರತಿಯೊಬ್ಬ ಪಡ್ಡೆ ಹೈಕಳು ಗುಟ್ಟು ಗುಟ್ಟಾಗಿ ಸೋನು ಗೌಡ ವಿಡಿಯೋ ನೋಡುವಂತೆ ತಮ್ಮದೇ ದೇಹಸಿರಿಯನ್ನು ತಾನೇ ಧಾರಾಳವಾಗಿ ಪ್ರದರ್ಶನಕ್ಕಿಟ್ಟರು ಸೋನು ಗೌಡ.
ಮಾಲ್ಡೀವ್ಸ್‌ನ ತಿಳಿ ನೀಲಿಯ ಸಮುದ್ರ ತಟದಲ್ಲಿ ಎದೆಯ ಮೇಲಿನ ಶರ್ಟ್ ಬಟನ್ ಓಫನ್ ಮಾಡಿದ ಈ ಚೆಲುವೆ ಚಿಕ್ಕ ಚಿಕ್ಕ ಶಾರ್ಟ್ಸ್, ಡ್ರೆಸ್ ಗಳಲ್ಲಿ ಮುಚ್ಚಿಟ್ಟಿದ್ದಕ್ಕಿಂತ ಬಿಚ್ಚಿಟ್ಟಿದ್ದೇ ಹೆಚ್ಚು. ಹೀಗಾಗಿ ಇದ್ದಕ್ಕಿದ್ದಂತೆ ಸೋನು ಗೌಡ ಜನಪ್ರಿಯತೆ ಮುಗಿಲು ಮುಟ್ಟಿತು. ಪಡ್ಡೆಹೈಕಳ ಪಾಲಿಗಂತೂ ಸೋನು ಗೌಡ ಎದೆಬಡಿತ ಏರಿಸೋ ಹಾಟ್ ಚಾಕ್ಲೆಟ್ ನಂತಾದರು.
ಇದನ್ನೂ ಓದಿ : ಡಾಲಿ ಧನಂಜಯ ವಿದ್ಯಾಪತಿಗೆ ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸೂಪಾಲ್ ನಾಯಕಿ
ಬೆಂಗಳೂರು ಮೂಲದ ಅಪ್ಪಟ ಒಕ್ಕಲಿಗ ಕುಟುಂಬದ ಹುಡುಗಿ ಸೋನು ಶ್ರೀನಿವಾಸ ಗೌಡ. ಕೀರ್ತಿ ಧರ್ಮರಾಜ್ ಜೊತೆ ಒಂದು ಸಿನಿಮಾದಲ್ಲಿ ನಟಿಸಿದ ಸೋನು ಸಿನಿಮಾ ಗಿಂತ ಇನ್ ಸ್ಟಾಗ್ರಾಂನಲ್ಲಿ ಗಳಿಸಿದ ಜನಪ್ರಿಯತೆಯೇ ಹೆಚ್ಚು. ಸದ್ಯ ಸೋನು ಶ್ರೀನಿವಾಸ್ ಗೌಡ ಇನ್ ಸ್ಟಾಗ್ರಾಂನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ಸೀರೆ, ಶಾರ್ಟ್ಸ್, ಕುರ್ತಾ, ಸಿಮ್ಮಿಂಗ್ ಡ್ರೆಸ್ ಹೀಗೆ ತಮ್ಮ ಸೌಂದರ್ಯ ಅನಾವರಣಗೊಳಿಸೋ ಯಾವ ಬಟ್ಟೆಯನ್ನು ಬಿಡದೇ ಎಲ್ಲದರಲ್ಲೂ ಸೋನು ಮಿಂಚುತ್ತಾರೆ. ಅಷ್ಟೇ ಅಲ್ಲ ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಮಗುವೊಂದನ್ನು ಕಾನೂನು ಪ್ರಕಾರವಾಗಿ ದತ್ತು ಪಡೆಯದ ಆರೋಪದಡಿ ಸೋನು ಗೌಡ ಜೈಲು ಸೇರಿದ್ದಾರೆ. ಆದರೆ ಮೂಲಗಳ ಪ್ರಕಾರ ಸೋನು ಗೌಡ ಈ ಪ್ರಕರಣದಲ್ಲಿ ರೀಲ್ಸ್ ಕಾರಣಕ್ಕೆ ಸಿಲುಕಿಕೊಂಡಿದ್ದಾರಂತೆ.
ಇದನ್ನೂ ಓದಿ : ಮಾಲಿವುಡ್ ಗೆ ಮರಳಿದ ಮೇಘನಾ ರಾಜ್ ಸರ್ಜಾ: ಸದ್ಯದಲ್ಲೇ ಅನೌನ್ಸ್ ಆಗಲಿದೆ ಕುಟ್ಟಿಮಾ ಹೊಸ ಸಿನಿಮಾ
ಮಗುವನ್ನು ಓದಿಸುವುದಕ್ಕಾಗಿ ತಂದು ತನ್ನೊಂದಿಗೆ ಇಟ್ಟುಕೊಂಡಿದ್ದ ಸೋನು ಗೌಡ ಮಗುವಿನೊಂದಿಗೆ ರೀಲ್ಸ್ ಮಾಡಿದ್ದಳು. ಆದರೆ ಇದು ನಿಯಮ ಬಾಹಿರ ಎಂಬ ತಿಳುವಳಿಕೆ ಸೋನುಗಿರಲಿಲ್ಲ. ಅಧಿಕಾರಿಗಳು ಸೋನು ಗೌಡ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಸೋನುಗೌಡ ನಿರಾಕರಿಸಿದ್ದಾಳೆ.
ಇದರಿಂದ ಅಧಿಕಾರಿಗಳು ಆಕೆಯ ಚಿಕ್ಕ ತಪ್ಪನ್ನೆ ದೊಡ್ಡ ಕಾರಣ ಮಾಡಿಕೊಂಡು ದೂರು ದಾಖಲಿಸಿಕೊಂಡು ಕೃಷ್ಣಜನ್ಮಸ್ಥಾನಕ್ಕಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಟಿಕ್ ಟಾಕ್ ರೀಲ್ಸ್ ಮಾಡಿಕೊಂಡು ಹಾಯಾಗಿದ್ದ ಹುಡುಗಿ ಈಗ ಜೈಲಿನ ಕಂಬಿ ಎಣಿಸುವಂತಾಗಿದೆ.
Sonu Gowda Real Life, Who is Sonu Gowda? How Tik Tok Star Bigg Boss Sonu Gowda got into trouble? Here is the exclusive story