ಕಾಟೇರ ಸಕ್ಸಸ್‌ : ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಬೆನ್ನಲ್ಲೇ ಚಿತ್ರರಂಗಕ್ಕೆ ಶುತ್ರಿ ಪುತ್ರಿ ಗೌರಿ

Gowri Shruthi  : ಕಾಟೇರ ಸಿನಿಮಾದ ಮೂಲಕ ಶೃತಿಯ ಮತ್ತೊಂದು ಪಾತ್ರವನ್ನು ನೋಡುವ ಸಂಭ್ರಮಿಸುವ ಅವಕಾಶ ಕನ್ನಡಿಗರಿಗೆ ಸಿಕ್ಕಿದೆ. ಅದರ ಜೊತೆ ಜೊತೆಗೆ ಮಾಲಾಶ್ರೀ ಮಗಳನ್ನು ಹಿರೋಯಿನ್ ಸ್ಥಾನದಲ್ಲಿ ನೋಡಿದ ಕನ್ನಡಿಗರು ಈಗ ಶೃತಿ ಮನೆಯತ್ತ ದೃಷ್ಟಿ ನೆಟ್ಟಿದ್ದು, ಕುತೂಹಲದಿಂದ ಕಾಯ್ತಿದ್ದಾರೆ.

Gowri Shruthi  : ನಟಿ ಶೃತಿ ಎಲ್ಲ ಕಾಲಕ್ಕೂ ಸಲ್ಲುವ ನಟಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಾಯಕಿ ನಟಿಯಾಗಿ ಸಿನಿಮಾ ರಂಗಕ್ಕೆ ಬಂದ ಅಳುಬುರುಕಿ ಶೃತಿ ಒಂದಿಷ್ಟು ಕಾಲವನ್ನು ಅಕ್ಷರಶಃ ಚಿತ್ರರಂಗವನ್ನು ಆಳಿದವರು. ಸದ್ಯ ನಟ ದರ್ಶನ್‌ ತೂಗುದೀಪ್‌ ನಟನೆಯ ಕಾಟೇರ ಸಿನಿಮಾದ ಮೂಲಕ ಶೃತಿಯ ಮತ್ತೊಂದು ಪಾತ್ರವನ್ನು ನೋಡುವ ಸಂಭ್ರಮಿಸುವ ಅವಕಾಶ ಕನ್ನಡಿಗರಿಗೆ ಸಿಕ್ಕಿದೆ. ಅದರ ಜೊತೆ ಜೊತೆಗೆ ಮಾಲಾಶ್ರೀ ಮಗಳು ಆರಾಧನಾ ರಾಮ್‌ ಅವರನ್ನು ಹಿರೋಯಿನ್ ಸ್ಥಾನದಲ್ಲಿ ನೋಡಿದ ಕನ್ನಡಿಗರು ಈಗ ಶೃತಿ ಮನೆಯತ್ತ ದೃಷ್ಟಿ ನೆಟ್ಟಿದ್ದು, ಕುತೂಹಲದಿಂದ ಕಾಯ್ತಿದ್ದಾರೆ.

Katera Success Actress Malashree daughter Aradhana Ram after enter Shruthi's daughter Gowri Shruthi in the film industry
ನಟ ದರ್ಶನ್‌ ತೂಗುದೀಪ್‌ ಜೊತೆ ನಟಿ ಶುತ್ರಿ ಪುತ್ರಿ ಗೌರಿ Image Credit : Gowri Shruthi Instagram

ನಟನೆಯನ್ನೇ ರಕ್ತದಲ್ಲಿ ಹೊತ್ತು ಬಂದ ನಟಿ ಶೃತಿ ಗಂಭೀರ ಹಾಗೂ ಹಾಸ್ಯ ಎರಡೂ ಪ್ರಕಾರದ ಪಾತ್ರದಲ್ಲೂ ಮಿಂಚಬಲ್ಲ ಕಲಾವಿದೆ. ಶೃತಿಯ ಹಾಗೂ ಮಾಲಾಶ್ರೀ ಇಬ್ಬರೂ ಸಮಕಾಲೀನ ನಟಿಯರು. ಮಾಲಾಶ್ರೀ ಮಗಳು ಈಗಾಗಲೇ ಕಾಟೇರಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದಾರೆ. ಹೀಗಾಗಿ ಇದರ ಬೆನ್ನಲ್ಲೇ ಶೃತಿ ಮಗಳು ಗೌರಿ ಶ್ರುತಿ (Gowri Shruthi) ಸ್ಯಾಂಡಲ್ ವುಡ್ ಗೆ ಬರ್ತಾರಾ ಅನ್ನೋ ಚರ್ಚೆ ಆರಂಭವಾಗಿದೆ.

Katera Success Actress Malashree daughter Aradhana Ram after enter Shruthi's daughter Gowri Shruthi in the film industry
Image Credit : Gowri Shruthi Instagram

ನಟಿ ಶೃತಿಯಂತೆ ಅವರ ಪುತ್ರಿ ಗೌರಿ ಕೂಡ ಅಪಾರ ಪ್ರತಿಭಾವಂತೆ. ಪೋಟೋಗ್ರಫಿ, ನೃತ್ಯ ಹಾಗೂ ಹಾಡುಗಾರಿಕೆಯಲ್ಲಿ ಪ್ರತಿಭೆ ಹೊಂದಿರೋ ಗೌರಿ ಯಾವ ಹಿರೋಯಿನ್ ಗೂ ಕಮ್ಮಿಯಿಲ್ಲದಂತ ಸೌಂದರ್ಯವಂತೆ. ಉದ್ದನೆಯ ಕೂದಲು, ಜೀವಂತಿಕೆ ಹೊರಸೂಸುವ ಕಣ್ಣು, ನೀಳಕಾಯ್ ಸೌಂದರ್ಯ ಗೌರಿಯನ್ನು ಸುಂದರಿಯರ ಸಾಲಿಗೆ ಸೇರುವಂತೆ ಮಾಡಿದೆ. ಈಗಾಗಲೇ ವಿದ್ಯಾಭ್ಯಾಸ ಮುಗಿಸಿರೋ ಶೃತಿ ತಾಯಿಯ ಕೃಷಿ ಸೇರಿದಂತೆ ಎಲ್ಲ ಕೆಲಸದಲ್ಲೂ ಕೈ ಜೋಡಿಸುತ್ತ ಹಾಯಾಗಿ ಮನೆಯಲ್ಲಿದ್ದಾರೆ.

Katera Success Actress Malashree daughter Aradhana Ram after enter Shruthi's daughter Gowri Shruthi in the film industry
Image Credit : Gowri Shruthi Instagram

ಇದನ್ನೂ ಓದಿ : ಬಂಗಾಳಿ ಬ್ಯೂಟಿ ನಟಿ ಐಂದ್ರಿತಾ ರೈ ಹೊಸ ಪೋಟೋಶೂಟ್ 

ಸೋಷಿಯಲ್ ಮೀಡಿಯಾದಲ್ಲಿ ಗೌರಿ ಅಕೌಂಟ್ ಹೊಂದಿದ್ದು ಎಲ್ಲ ಸ್ಪೆಶಲ್ ಮೂಮೆಂಟ್ ಗಳನ್ನು ಗೌರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಪ್ರವಾಸ, ರ್ಯಾಂಪ್ ವಾಕ್ ಎಲ್ಲವನ್ನು ಇಷ್ಟಪಡುವ ಗೌರಿ ಟ್ರೆಡಿಶನಲ್ ಹಾಗೂ ಕ್ಲಾಸಿ ಲುಕ್ ನಲ್ಲಿ ಶೇರ್ ಮಾಡೋ ಪೋಟೋಗಳು ಅಭಿಮಾನಿಗಳ ಮನಗೆದ್ದಿವೆ.

Katera Success Actress Malashree daughter Aradhana Ram after enter Shruthi's daughter Gowri Shruthi in the film industry
Image Credit : Gowri Shruthi Instagram

ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಜನರು ಲಕ್ಷಾಂತರ ಭಾರಿ ನೀವು ಸಿನಿಮಾಕ್ಕೆ ಬರೋದಿಲ್ಲವೇ ಎಂದು ಪ್ರಶ್ಬಿಸುತ್ತಲೇ ಇರುತ್ತಾರೆ. ಆದರೆ ಇದುವರೆಗೂ ಗೌರಿ‌ ಇಂತಹ ಯಾವುದೇ ಪ್ರಶ್ನೆಗೆ ಉತ್ತರ ನೀಡಿಲ್ಲ. ಸ್ಯಾಂಡಲ್ ವುಡ್ ಜೊತೆಗೆ ಆತ್ಮೀಯವಾದ ಬಾಂಧವ್ಯ ಹೊಂದಿರೋ ಗೌರಿ ಶೃತಿ ಡಿ ಬಾಸ್ ಜೊತೆಗಂತೂ ಫಾರೆಸ್ಟ್ ಪೋಟೋಗ್ರಫಿಗೂ ಕೂಡ ಹೋಗ್ತಾರೆ. ತಾಯಿ ಗೌರಿ ಜೊತೆ ಗದ್ದೆ ಉಳುಮೆ ಸೇರಿದಂತೆ ಕೃಷಿ ಕಾರ್ಯಕ್ಕೂ ಕೈ ಜೋಡಿಸುತ್ತಾರೆ.

ಇದನ್ನೂ ಓದಿ : ಕ್ರಿಸ್ಮಸ್ ಗಾಗಿ ಕೈಯಾರೆ ಕೇಕ್ ಸಿದ್ಧಪಡಿಸಿದ ಮೇಘನಾ ರಾಜ್ : ರಾಯನ್‌ ರಾಜ್ ಸರ್ಜಾಗೆ ಗೂಗಲ್ ಮಮ್ಮಿ ಸ್ಪೆಶಲ್ ಗಿಫ್ಟ್

ಆದರೆ ಗೌರಿ ಮನೆಯಂಗಳದಿಂದ ಸಿಹಿಸುದ್ದಿಯೊಂದು ಹೊರಬೀಳೋ ಸಾಧ್ಯತೆ ಇದೆ. ಮಾಲಾಶ್ರೀ ಪುತ್ರಿ ಆರಾಧನಾ ಬೆನ್ನಲ್ಲೇ ನಟ ಶೃತಿ ಪುತ್ರಿ ಗೌರಿ ಕೂಡ ಸಿನಿಮಾದಲ್ಲಿ ನಟಿಸಲು ಮನಸ್ಸು ಮಾಡಿದ್ದಾರಂತೆ. ಸಿನಿಮಾದಲ್ಲಿ ನಟಿಸುವ ನಿರ್ಧಾರಕ್ಕೆ ಬಂದಿರೋ ಗೌರಿ ತಮಗೆ ಸಿಕ್ಕಿರೋ ಅವಕಾಶಗಳನ್ನು ಅಳೆದು ಸುರಿದು ತೂಗಿ ಅಯ್ಕೆ ಮಾಡಿಕೊಳ್ಳಲು ಮುಂದಾಗಿದ್ದು ಇದಕ್ಕಾಗಿ ತಾಯಿ ಶೃತಿ ಜೊತೆ ಸಿನಿಮಾದ ಸ್ಟೋರಿಗಳನ್ನು ಕೇಳುತ್ತಿದ್ದಾರಂತೆ.

Katera Success Actress Malashree daughter Aradhana Ram after enter Shruthi's daughter Gowri Shruthi in the film industry
ನಟ ದರ್ಶನ್‌ ತೂಗುದೀಪ್‌ ಜೊತೆ ನಟಿ ಶುತ್ರಿ ಹಾಗೂ ಪುತ್ರಿ ಗೌರಿ ಶ್ರುತಿ Image Credit : Gowri Shruthi Instagram

ತಮಗೆ ಸರಿಹೊಂದುವ ಕತೆ ಸಿಕ್ಕರೇ ತಾಯಿ ಹಾಗೂ ಸೋದರ ಮಾವ ನಟ ಶರಣ ಅಭಿಪ್ರಾಯ ಪಡೆದು ಚಂದನವನಲ್ಲಿ ಬಣ್ಣ ಹಚ್ಚಿ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರಂತೆ. ಈ ಬಗ್ಗೆ ಶೃತಿಯವರನ್ನು ಕೇಳಿದಾಗ ಶೃತಿ ತಮ್ಮ ಮಗಳ ಸಿನಿಮಾ ರಂಗ ಪ್ರವೇಶದ ಬಗ್ಗೆ ಸ್ಪಷ್ಟ ಮಾಹಿತಿ ಕೊಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ : All The Best ಅಂದ್ರು ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ : ದರ್ಶನ್‌ ತೂಗುದೀಪ್‌ ನಟನೆಯ ಕಾಟೇರಾಗೆ ಸಿಕ್ತು ಸ್ಪೆಶಲ್ ವಿಶ್

ನನ್ನ ಮಗಳು ಸಿನಿಮಾ ಕ್ಷೇತ್ರಕ್ಕೆ ಬರ್ತಾರಾ ಇಲ್ವ ಅನ್ನೋದನ್ನು ಇನ್ನೊಮ್ಮೆ ಮಾತಾಡಿ ಮಾಹಿತಿ ಕೊಡ್ತೆನೆ. ಈಗ ಆ ವಿಚಾರ ಬೇಡ. ಈಗ ನಮ್ಮ ಮದ್ದಿನ ಮಗಳು ನಟಿ ಮಾಲಾಶ್ರೀ ಪುತ್ರಿ ಆರಾಧನಾ ಸ್ಕ್ರಿನ್ ಗೆ ಬಂದಿದ್ದಾರೆ. ಅವರನ್ನು ಆಶೀರ್ವದಿಸಿ ಎಂದಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಇನ್ಮುಂದೆ ಮೂರನೇ ಜನರೇಶನ್ ಹವಾ ಸೃಷ್ಟಿಯಾಗೋದಂತು ಸತ್ಯ.

Katera Success Actress Malashree daughter Aradhana Ram after enter Shruthi’s daughter Gowri Shruthi in the film industry

Comments are closed.