ಕೊರೊನಾ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಬಾಲಿವುಡ್ ಖ್ಯಾತ ನಟ ಸೋನು ಸೂದ್ ನೆರವಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಆದ್ರೀಗ ಸೋನು ಸೂದ್ ರಿಂದ ಸಹಾಯವನ್ನು ಪಡೆದಿದ್ದ ಬಿಹಾರ ಮೂಲದ ವಲಸೆ ಕಾರ್ಮಿಕ ಮಹಿಳೆ ತನ್ನ ಗಂಡುಮಗುವಿಗೆ ಸೋನು ಸೂದ್ ಅವರ ಹೆಸರನ್ನೇ ಇಟ್ಟಿದ್ದಾರೆ. ಹೀಗಂತ ಸೋನು ಸೂದ್ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.

ಕೊರೊನಾ ಲಾಕ್ ಡೌನ್ ಹಿನ್ನೆಲಯಲ್ಲಿ ಮುಂಬೈನಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಸೋನು ಸೂದ್ ನೆರವಿನ ಹಸ್ತವನ್ನು ಚಾಚಿದ್ದರು. ಸ್ವತಃ ಖರ್ಚಿನಿಂದ ಕಾರ್ಮಿಕರನ್ನು ವಿವಿಧ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದರು. ಹೀಗೆ ಮುಂಬೈನಿಂದ ವಲಸೆ ಕಾರ್ಮಿಕರನ್ನು ಬಿಹಾರಕ್ಕೆ ಕಳುಹಿಸಿಕೊಡುವಾಗ ಗರ್ಭಿಣಿ ಮಹಿಳೆಯೋರ್ವರನ್ನು ಸೋನು ಸೂದ್ ಕಳುಹಿಸಿದ್ದರು.

ಈ ವೇಳೆಯಲ್ಲಿ ನಟನ ಕಾರ್ಯಕ್ಕೆ ಬಾರೀ ಜನಮೆಚ್ಚುಗೆ ವ್ಯಕ್ತವಾಗಿತ್ತು. ಸೋನು ಸೂದ್ ಮಹಿಳೆಯ ಆರೋಗ್ಯ ವಿಚಾರಿಸೋದಕ್ಕೆ ಕರೆ ಮಾಡಿದ್ದರು. ಈ ವೇಳೆ ಮಹಿಳೆ ತನಗೆ ಗಂಡುಮಗುವಾಗಿರುವ ವಿಚಾರವನ್ನು ಸೋನು ಸೂದ್ ಅವರಿಗೆ ತಿಳಿಸಿದ್ದಾರೆ. ಸೋನು ಸೂದ್ ಈ ವೇಳೆ ಮಗುವಿಗೆ ಸೋನು ಶ್ರೀವಾಸ್ತವ್ ಅಂತಾ ಹೆಸರಿಡುವಂತೆ ತಮಾಷೆಗೆ ಹೇಳಿದ್ದರು.

ಆದ್ರೆ ಮಹಿಳೆ ತಾನು ತನ್ನ ಮಗುವಿಗೆ ಈಗಾಗಲೇ ಸೋನು ಸೂದ್ ಶ್ರೀವಾಸ್ತವ್ ಅಂತಾ ನಾಮಕರಣ ಮಾಡಿರುವುದಾಗಿ ಹೇಳಿದ್ದಾಳೆ. ಈ ಮಾತನ್ನು ಕೇಳಿದ ಬಾಲಿವುಡ್ ನಟ ಸೋನು ಸೂದ್ ಹೃದಯ ತುಂಬಿಬಂದಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.