ಜಾರಿಯಾಗಲಿದೆ ಲಾಕ್ ಡೌನ್ 5.0 : 13 ನಗರಗಳಲ್ಲಿ ಜೂ.1ರಿಂದ ಕಟ್ಟುನಿಟ್ಟಿನ ಲಾಕ್ ಡೌನ್ !

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ 4.0 ಜಾರಿಯಲ್ಲಿದೆ. ಲಾಕ್ ಡೌನ್ 4.0 ಆದೇಶ ನಾಳೆಗೆ ಕೊನೆಗೊಳ್ಳಲಿದ್ದು, 5ನೇ ಹಂತದ ಲಾಕ್ ಡೌನ್ ಜಾರಿಯಾಗುವುದು ಬಹುತೇಕ ಖಚಿತವಾಗಿದೆ. ಅದ್ರಲ್ಲೂ ಕೊರೊನಾ ಸೋಂಕು ಹೆಚ್ಚುತ್ತಿರುವ ದೇಶದ 13 ನಗರಗಳಲ್ಲಿ ಕೇಂದ್ರ ಸರಕಾರ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಜಾರಿಗೊಳಿಸಲು ಮುಂದಾಗಿದೆ.

ಲಾಕ್ ಡೌನ್ 4.0 ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. 4ನೇ ಹಂತದ ಲಾಕ್ ಡೌನ್ ವೇಳೆಯಲ್ಲಿ ಒಂದಿಷ್ಟು ಸೇವೆಗಳಿಗೆ ಸಡಿಲಿಕೆಯನ್ನು ನೀಡಲಾಗಿತ್ತು. ಆದ್ರೆ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಅದ್ರಲ್ಲೂ ಮುಂಬೈ, ದೆಹಲಿ, ಅಹಮದಾಬಾದ್, ಕೊಲ್ಕತ್ತಾ, ಚೆನೈ, ಜೈಪುರ, ಚೆಂಗಾಲಪಟ್ಟು, ತಿರುವಳ್ಳೂರು, ಇಂದೋರ್, ಜೋದ್ ಪುರ, ಹೈದ್ರಾಬಾದ್, ಥಾಣೆ ಹಾಗೂ ಜೈಪುರ ನಗರಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತರಲುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಿದ್ದತೆ ನಡೆಸಿದೆ.

ಕೇಂದ್ರ ಗೃಹ ಇಲಾಖೆಯ ಮಾಹಿತಿಯ ಮೇರೆಗೆ ಈ 13 ನಗರಗಳಲ್ಲಿ ಕನಿಷ್ಟ ಎರಡುವಾರಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಆದೇಶ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಲಾಕ್ ಡೌನ್ 5.0 ಘೋಷಣೆ ಮಾಡುವುದು ಖಚಿತವಾಗಿದೆ.

Leave A Reply

Your email address will not be published.