Spandana Vijay Raghavendra : ಸ್ಪಂದನಾ ಪಾರ್ಥಿವ ಶರೀರ ಇಂದೇ ತಾಯ್ನಾಡಿಗೆ

ಸ್ಯಾಂಡಲ್ ವುಡ್‌ ಖ್ಯಾತ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್‌ (Spandana Vijay Raghavendra) ಹೃದಯಾಘಾತದಿಂದ (ಆಗಸ್ಟ್‌ 7) ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಈಗಾಗಲೇ ಥಾಯ್ಲೆಂಡ್‌ನ ಆಸ್ಪತ್ರೆಯಲ್ಲಿ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆಯನ್ನು ಮುಗಿಸಲಾಗಿದ್ದು, ಇಂದು ರಾತ್ರಿ 11ರ ಹೊತ್ತಿಗೆ ತಾಯ್ನಾಡಿಗೆ ಬರಲಿದೆ. ಅಲ್ಲದೇ ಬೆಂಗಳೂರಿನಲ್ಲಿಯೇ ಅಂತ್ಯಕ್ರೀಯೆ ನಡೆಸಲು ಸಿದ್ದೆತೆಗಳನ್ನು ಮಾಡಿಕೊಳ್ಳಲಾಗಿದೆ.

ಪ್ರವಾಸಕ್ಕೆ ತೆರಳಿದ ವೇಳೆಯಲ್ಲಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈಗಾಗಲೇ ಮರಣೋತ್ತರ ಕಾರ್ಯವನ್ನು ಮುಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಇನ್ನಷ್ಟೇ ಕೈ ಸೇರಬೇಕಾಗಿದೆ. ಅಲ್ಲದೇ ಪಾರ್ಥಿವ ಶರೀರವನ್ನು ಭಾರತಕ್ಕೆ ಕೆರೆತರಲು ಕಸ್ಟಮ್ಸ್‌ ನಿಂದ ನಿರಪೇಕ್ಷಣಾ ಪತ್ರ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನಿನ ತೊಡಕು ನಿವಾರಣೆಯ ಕುರಿತು ಕಾರ್ಯಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಭಾರತೀಯ ರಾಯಭಾರ ಕಚೇರಿ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ.

ಚಿಕ್ಕಪ್ಪ ಬಿ,ಕೆ ಹರಿಪ್ರಸಾದ್‌ ಅವರು ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದದು, “ಬ್ಯಾಂಕಾಕ್‌ನಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದೆ. ರಾತ್ರಿ 11 ಗಂಟೆಯ ಹೊತ್ತಿಗೆ ಸ್ಪಂದನಾ ಮೃತದೇಹ ಬೆಂಗಳೂರಿಗೆ ಬರಲಿದೆ. ರಾತ್ರಿಯಿಂದ ನಾಳೆ (ಆಗಸ್ಟ್‌ 9) ಮಧ್ಯಾಹ್ನದವರೆಗೂ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿ.ಕೆ. ಶಿವರಾಂ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮಧ್ಯಾಹ್ನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದರು. ಇದನ್ನೂ ಓದಿ : Jailer movie : ಸೂಪರ್ ಸ್ಟಾರ್‌ ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾ ರಿಲೀಸ್‌ ಡೇಟ್‌ ಫಿಕ್ಸ್‌ : ಖಾಸಗಿ ಕಂಪನಿ ರಜೆ ಘೋಷಣೆ

ಸ್ಪಂದನಾ ಹಾಗೂ ವಿಜಯ್‌ ರಾಘವೇಂದ್ರ ಅವರು ಸಾಕಷ್ಟು ಅನ್ಯೋನ್ಯವಾಗಿದ್ದರು. ಹಿರಿಯ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ನಟ ವಿಜಯ್‌ ರಾಘವೇಂದ್ರ ಅವರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಸ್ಪಂದನಾ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಥಾಯ್ಲಂಡ್‌, ಹಾಕಾಂಗ್‌ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆಯಲ್ಲಿಯೇ ಹೃದಯಾಘಾತದಿಂದ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

Spandana Vijay Raghavendra : Spandana’s mortal body has returned to the motherland today

Comments are closed.