ತಮ್ಮ ಪ್ರೀತಿಯ ನಟ-ನಟಿಯರ ಮೇಲೆ ಅಪಾರವಾದ ಅಭಿಮಾನ ಇಟ್ಕೊಂಡಿರೋ ಅಭಿಮಾನಿಗಳು ಈ ಅಭಿಮಾನಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ. ನೆಚ್ಚಿನ ನಟ-ನಟಿಯರಿಗೆ ತಮ್ಮ ಅಭಿಮಾನ ತೋರಿಸೋಕೆ ಸಿದ್ಧವಾಗಿರ್ತಾರೆ. ಇಂತಹುದೇ ಅಭಿಮಾನಿಯೊಬ್ಬರು ಈಗ ಸದ್ದು ಮಾಡಿ ಸುದ್ದಿಯಾಗಿದ್ದಾರೆ. ತಮ್ಮ ನೆಚ್ಚಿನ ನಟಿ ನೀಲಿಚಿತ್ರಗಳ ರಾಣಿ ಸನ್ನಿ ಲಿಯೋನ್ (Sunny Leon) ಗಾಗಿ ಇವರು ತಮ್ಮ ಶಾಪ್ ನಲ್ಲಿ ಶೇಕಡಾ 10 ರಷ್ಟು ರಿಯಾಯ್ತಿ ಕೊಟ್ಟು ಸುದ್ದಿಯಾಗಿದ್ದಾರೆ.

ಮಂಡ್ಯ ನಗರದ ಕರ್ನಾಟಕ ಬಾರ್ ವೃತ್ತದಲ್ಲಿ ಚಿಕನ್ ಅಂಗಡಿ ಇಟ್ಕೊಂಡಿರೋ ಪ್ರಸಾದ್ ಸನ್ನಿ ಲಿಯಾನ್ ಅಭಿಮಾನಿ.ತನ್ನ ನೆಚ್ಚಿನ ನಟಿ ಮೇಲೆ ಅಪಾರ ಪ್ರೀತ ಇಟ್ಕೊಂಡಿರೋ ಪ್ರಸಾದ್ ತನ್ನಂತೆ ಸನ್ನಿ ಲಿಯೋನ್ ಇಷ್ಟಪಡೋರಿಗಾಗಿ ಭರ್ಜರಿ ಆಫರ್ ವೊಂದನ್ನು ನೀಡಿದ್ದಾರೆ. ತಮ್ಮ ಚಿಕನ್ ಶಾಪ್ ನಲ್ಲಿ ಸನ್ನಿ ಲಿಯೋನ್ ಪೋಟೋದ ಜೊತೆಗೆ ಸ್ಪೆಶಲ್ ಡಿಸ್ಕೌಂಟ್ ಘೋಷಿಸಿದ್ದಾರೆ ಪ್ರಸಾದ್. ಪ್ರಸಾದ್ ಅಂಗಡಿಯಲ್ಲಿ ಚಿಕನ್ ಖರೀದಿಸುವ ಸನ್ನಿ ಲಿಯೋನ್ (Sunny Leon) ಅಭಿಮಾನಿಗಳಿಗೆ ಪ್ರಸಾದ್ 10 ಪರ್ಸೆಂಟ್ ಡಿಸ್ಕೌಂಟ್ ಘೋಷಿಸಿದ್ದಾರೆ.

ಅದು ಕೇವಲ ಘೋಷಣೆ ಮಾತ್ರವಲ್ಲ ಪ್ರಸಾದ್ ಅಂಗಡಿಗೆ ಬರೋರಿಗೆ 10 ಪರ್ಸೆಂಟ್ ಡಿಸ್ಕೌಂಟ್ ನಲ್ಲಿ ಚಿಕನ್ ಕೂಡ ವಿತರಿಸಿ ನುಡಿದಂತೆ ನಡೆದಿದ್ದಾರೆ. ಆದರೆ ಪ್ರಸಾದ್ ಅಂಗಡಿ ಯಲ್ಲಿ ನೀವು 10 ಪರ್ಸೆಂಟ್ ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯೋಕೆ ಕೇವಲ ಸನ್ನಿ ಲಿಯೋನ್ ಅಭಿಮಾನಿಯಾಗಿದ್ದರೇ ಸಾಲೋದಿಲ್ಲ. ಬದಲಾಗಿ ಪ್ರಸಾದ್ ಹಾಕಿರೋ ಮೂರು ಷರತ್ತುಗಳನ್ನು ಪೂರೈಸಿರಬೇಕು. ಅದ್ಯಾವ ಷರತ್ತು ಅಂದ್ರಾ, ಸನ್ನಿ ಲಿಯೋನ್ ನಟಿಸಿದ ಕನಿಷ್ಠ 10 ಸಿನಿಮಾವನ್ನು ನೀವು ನೋಡಿರಬೇಕು.

ನಿಮ್ಮ ಬಳಿ ಸನ್ನಿ ಲಿಯೋನ್ ರ ಕನಿಷ್ಠ 10. ಆದರೂ ಪೋಟೋಗಳಿರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ನೀವು ಸನ್ನಿ ಲಿಯೋನ್ (Sunny Leon) ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ಪಾಲೋ ಮಾಡ್ತಿರಬೇಕು. ಟ್ವೀಟರ್, ಇನ್ ಸ್ಟಾಗ್ರಾಂ ಸೇರಿದಂತೆ ಎಲ್ಲೆಡೆ ನೀವು ಸನ್ನಿ ಲಿಯೋನ್ ರನ್ನು ಪಾಲೋ ಮಾಡ್ತಿರಬೇಕು. ಇಂತಹ ಷರತ್ತುಗಳನ್ನು ಪೊರೈಸಿದ್ರೇ ನೀವು ಟೆನ್ ಪರ್ಸೆಂಟ್ ಡಿಸ್ಕೌಂಟ್ ನಲ್ಲಿ ಪ್ರಸಾದ್ ಅಂಗಡಿಯ ಚಿಕನ್ ಖರೀದಿಸಬಹುದು.

ಸನ್ನಿ ಲಿಯೋನ್ (Sunny Leon) ಬಗ್ಗೆ ಪ್ರಸಾದ್ ಗಿರೋ ಈ ಅಭಿಮಾನದ ಸಂಗತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ಬಾಗಲಕೋಟೆ ಯ ಯುವಕರು ಊರ ಜಾತ್ರೆಯಲ್ಲಿ ಸನ್ನಿ ಲಿಯೋನ್ ಅಭಿಮಾನಿ ಬಳಗದಿಂದ ಸ್ವಾಗತ ಬಯಸಿ ಸದ್ದು ಮಾಡಿದ್ದರು.
ಇದನ್ನೂ ಓದಿ : ವಿಶ್ವದಾದ್ಯಂತ ರಾಕಿ ಬಾಯ್ ಆರ್ಭಟ : ಕೆಜಿಎಫ್ 2 ಸಿನಿಮಾ ನೋಡಿ ಫ್ಯಾನ್ಸ್ ಪುಲ್ ಫಿದಾ
ಇದನ್ನೂ ಓದಿ : ಯಶ್! ರಾಜಮೌಳಿ ಅವರ ಸಿನಿಮಾಕ್ಕೆ ನಾನು ಫಿಟ್ ಅನಿಸಿದರೆ, ಆ ಅವಕಾಶ ಮಿಸ್ ಮಾಡಿಕೊಳ್ಳಲ್ಲ
Special offer for Sunny Leone Fans at Chicken Shop