KGF Chapter 2 Piracy Leak: ಕೆಜಿಎಫ್​ 2ಗೆ ಪೈರಸಿ ಶಾಕ್​: ಮೊದಲ ದಿನವೇ ಲೀಕ್​ ಆದ ಸಿನೆಮಾ

KGF Chapter 2 Piracy Leak: ಕೆಜಿಎಫ್​ ಸಿನಿಮಾದ ಬಳಿಕ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದ ಒಂದೇ ಒಂದು ಪ್ರಶ್ನೆ ಅಂದರೆ ಕೆಜಿಎಫ್​ 2 ಸಿನಿಮಾ ನೋಡೋ ಭಾಗ್ಯ ಯಾವಾಗ ಸಿಗುತ್ತೆ ಅನ್ನೋದು. ಸಾಕಷ್ಟು ಅಡೆ ತಡೆಗಳನ್ನು ದಾಟಿ ಕೊನೆಗೂ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಪ್ರೇಕ್ಷಕರ ಎದುರು ಬರುವಲ್ಲಿ ಯಶಸ್ವಿಯಾಗಿದೆ. ದೇಶ – ವಿದೇಶಗಳಲ್ಲಿ ಇಂದು ಸಿನಿಮಾ ತೆರೆಕಂಡಿದ್ದು ಬಾಕ್ಸಾಫೀಸಿನಲ್ಲಿ ಮೊದಲೇ ದಿನವೇ ಅನೇಕ ದಾಖಲೆಗಳನ್ನು ರಚಿಸುವಲ್ಲಿ ಕೆಜಿಎಫ್​ 2 ಯಶಸ್ವಿಯಾಗಿದೆ. ಸಿನಿಮಾ ನೋಡಿ ಬಂದ ಅಭಿಮಾನಿಗಳು ಕೂಡ ಕೆಜಿಎಫ್​ 2 ಸಿನಿಮಾ ನೋಡೋದು ಕಣ್ಣಿಗೆ ಹಬ್ಬ ಅಂತ ವರ್ಣನೆ ಮಾಡ್ತಿದ್ದಾರೆ.


ಆದರೆ ಈ ಎಲ್ಲ ಸಂಭ್ರಮಗಳ ನಡುವೆ ಕೆಜಿಎಫ್​ 2 ಚಿತ್ರತಂಡಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದೆ. ಸಿನಿಮಾ ಬಿಡುಗಡೆಯಾಗಿ ಇನ್ನೂ ಒಂದು ದಿನ ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಈ ಸಿನಿಮಾ ಪೈರಸಿ ಕಾಟಕ್ಕೆ ಗುರಿಯಾಗಿದೆ. ಟೊರೆಂಟ್​​ ಸೈಟ್​​ಗಳಲ್ಲಿ ಕೆಜಿಎಫ್​ 2 ಹೆಚ್​​ಡಿ ಗುಣ ಮಟ್ಟದ ಸಿನಿಮಾ ಸ್ಟ್ರೀಮಿಂಗ್​ ಆಗಿದೆ.


ಸಿನಿಮಾದ ನಿರ್ದೇಶಕ ಪ್ರಶಾಂತ್​ ನೀಲ್​ ಕೆಜಿಎಫ್​ 2ವೀಕ್ಷಿಸಿದವರಲ್ಲಿ ಯಾವುದೇ ಕಾರಣಕ್ಕೂ ಸಿನಿಮಾದ ವಿಡಿಯೋ ತುಣುಕು ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್​ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಇದರ ಜೊತೆಯಲ್ಲಿ ಪೈರಸಿ ವಿರುದ್ಧ ನಾವೆಲ್ಲರೂ ಹೋರಾಡುವ ಸಮಯ ಬಂದಿದೆ ಎಂದೂ ಬರೆದುಕೊಂಡಿದ್ದಾರೆ.

ಕೆಜಿಎಫ್​ 2 ಸಿನೆಮಾ ದೇಶದಲ್ಲಿ ಮಾತ್ರವಲ್ಲದೇ 75 ದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣೂತ್ತಿದೆ. ಅಮೆರಿಕಾ, ಯುರೋಪ್​ ರಾಷ್ಟ್ರಗಳು, ಯುಎಇ, ಸ್ವಿಡ್ಜರ್​ಲ್ಯಾಂಡ್​​, ಕುವೈತ್​, ರಷ್ಯಾ, ಗ್ರೀಸ್​ ಸೇರಿದಂತೆ ವಿವಿಧ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇಷ್ಟೊಂದು ದೇಶಗಳಲ್ಲಿ ಪ್ರದರ್ಶನ ಮೊದಲ ಸಿನಿಮಾ ಇದಾಗಿದೆ.

ಇದನ್ನು ಓದಿ : KGF Chapter 2 Release : ವಿಶ್ವದಾದ್ಯಂತ ರಾಕಿ ಬಾಯ್‌ ಆರ್ಭಟ : ಕೆಜಿಎಫ್‌ 2 ಸಿನಿಮಾ ನೋಡಿ ಫ್ಯಾನ್ಸ್‌ ಪುಲ್‌ ಫಿದಾ

ಇದನ್ನೂ ಓದಿ : KGF Prashant Neel: ಕೆಜಿಎಫ್ ಬಿಡುಗಡೆ ಸಮಯದಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಗೆ ಭಯ ಏಕೆ ಗೊತ್ತೇ?

kgf chapter 2 piracy Leak in online platforms full hd video available in torrents

Comments are closed.