Parenting Tips: ನಿಮ್ಮ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆ? ಹಾಗಾದರೆ ಈ ಟಿಪ್ಸ್‌ ಅನುಸರಿಸಿ

ಇಂದಿನ ವಿದ್ಯಮಾನದಲ್ಲಿ ಸ್ವಾವಲಂಬಿಗಳಾಗುವುದು ಬಹಳ ಅವಶ್ಯ. ಇಂದು ಪ್ರತಿ ಪೋಷಕರು(Parenting Tips) ತಮ್ಮ ಮಕ್ಕಳು ಆದಷ್ಟು ಬೇಗ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಆಶಿಸುತ್ತಾರೆ. ಆದರೂ ಪೋಷಕರು ತಮ್ಮ ಮಕ್ಕಳನ್ನು ಅತಿಯಾಗಿ ಮುದ್ದಿಸುವುದು, ಅವರನ್ನು ಅವಲಂಬಿತರನ್ನಾಗಿ ಮಾಡಿಬಿಡುತ್ತದೆ. ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಬಹಳ ಬೇಗ ಕಲಿಯುತ್ತಾರೆ. ಅದನ್ನೇ ಪೋಷಕರು ಅರ್ಥಮಾಡಿಕೊಂಡು ತಮ್ಮ ಮಗುವಿಗೆ ಸ್ವಾವಲಂಬನೆಯ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ.

ಇಲ್ಲಿ ಹೇಳಿರುವ ಕೆಲವು ಟಿಪ್‌ಗಳನ್ನು ಗಮನಿಸಿ, ನಿಮ್ಮ ಮಕ್ಕಳು ಸ್ವತಂತ್ರರಾಗಲು ಮತ್ತು ವಿಜಯಶಾಲಿಗಳಾಗಲು ಸಹಾಯ ಮಾಡಿ.

  • ಅವರ ಮಾತು ಕೇಳಿಸಿಕೊಳ್ಳಿ :
    ಮಕ್ಕಳು ಎಲ್ಲಾ ವಿಷಗಳಲ್ಲಿ ಹೆಚ್ಚಾಗಿ ಪೋಷಕರನ್ನೇ ಅನುಸರಿಸುತ್ತಾರೆ. ಅವರು ದಿನನಿತ್ಯದ ಪೋಷಕರ ಅಭ್ಯಾಸಗಳನ್ನೇ ಕಾಪಿ ಮಾಡುತ್ತಾರೆ ಮತ್ತು ಅವರಂತೆಯೇ ಕಲಿಯುತ್ತಾರೆ. ಆದಕಾರಣ ಪೋಷಕರೇ ಸುಧಾರಿತ ಭಾಷೆ ಅಂದರೆ ಒಳ್ಳೆಯ ಮಾತು ಮತ್ತು ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಮತ್ತೊಬ್ಬರನ್ನು ಹಳಿಯುವುದನ್ನು ಬಿಟ್ಟು ಅವರ ಒಳ್ಳೆಯ ಗುಣಗಳನ್ನು ಪ್ರೋತ್ಸಾಹಿಸಿ. ಇದು ನಿಮ್ಮ ಮಕ್ಕಳ ಮೇಲೆ ಧನಾತ್ಮಕ ಚಿಂತನೆ ಹೆಚ್ಚಿಸಲು ನೆರವಾಗುತ್ತದೆ. ಅದೇ ರೀತಿ ತಪ್ಪುಗಳನ್ನು ಮಾಡಿದಾಗ ಪ್ರೀತಿಯಿಂದ ತಿಳಿಹೇಳಿ ಬದಲಿಗೆ ಅವರ ಮೇಲೆ ಕೂಗಾಡಬೇಡಿ.
  • ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಸಿ :
    ಮಕ್ಕಳು ಬೆಳೆಯುತ್ತಿದ್ದಂತೆ ಸರಿಯಾದ ನಿರ್ಧಾರ ಸ್ವತಃ ತೆಗೆದುಕೊಳ್ಳ ಬೇಕಾಗುತ್ತದೆ. ಅದನ್ನು ಚಿಕ್ಕ ವಯಸ್ಸಿನಲ್ಲೇ ನಿರ್ಧಾರ ತೆಗೆದುಕೊಳ್ಳುವ ಹವ್ಯಾಸ ಬೆಳೆಸಿ. ಚಿಕ್ಕ ಮಕ್ಕಳ ನಿರ್ಧಾರಗಳನ್ನು ಪ್ರೋತ್ಸಾಹಿಸಿ. ಅವರ ನೆಚ್ಚಿನ ಆಟ, ತಿಂಡಿ, ಊಟ, ಸಿನಿಮಾ, ಪ್ರವಾಸಿ ತಾಣ ಇವೆಲ್ಲವುಗಳಲ್ಲಿ ಅವರ ನಿರ್ಧಾರಗಳನ್ನು ಪ್ರೋತ್ಸಾಹಿಸುವುದರಿಂದ ಅವರ ಆತ್ಮ ವಿಶ್ವಾಸ ಹೆಚ್ಚಲು ಸಹಾಯ ಮಾಡಿದಂತಾಗುತ್ತದೆ.
  • ಜವಾಬ್ದಾರಿ ತಿಳಿಸಿಕೊಡಿ:
    ನಿಮ್ಮ ಮಕ್ಕಳು ಅವರ ಚಿಕ್ಕ ಚಿಕ್ಕ ಕೆಲಸಗಳನ್ನು ಅವರೇ ಪೂರ್ಣಗೊಳಿಸಬೇಕೆಂಬುದನ್ನು ಕಲಿಸಿ. ಇದು ಅವರಿಗೆ ವಿಶ್ವಾಸ ಮತ್ತು ಜವಾಬ್ದಾರಿಯನ್ನು ತಿಳಿಸಲು ಸಹಾಯಮಾಡುತ್ತದೆ. ಬಟ್ಟೆ ಹಾಕಿಕೊಳ್ಳುವುದು ಮತ್ತು ತೆಗೆಯುವುದು, ಉಗುರುಗಳನ್ನು ಕತ್ತರಿಸವುದು, ಅವರ ಊಟದ ತಟ್ಟೆ, ಹಾಲಿನ ಕಪ್‌ ಗಳನ್ನು ತೊಳೆಯುವುದು ಮತ್ತು ಅದನ್ನು ಸರಿಯಾದ ಜಾಗದಲ್ಲಿರಿಸುವುದು, ಶಾಲೆಗೆ ಬೇಕಾದ ವಸ್ತುಗಳಾದ ಪುಸ್ತಕಗಳು, ಪೆನ್‌, ಪೆನ್ಸಿಲ್‌, ಐ ಕಾರ್ಡ್, ಯುನಿಫಾರ್ಮ್‌ ಮತ್ತು ಶೂ ಜೋಡಿಸಿಕೊಳ್ಳುವುದು ಇವೆಲ್ಲವುಗಳು ಅವರ ಚಿಕ್ಕ ಪುಟ್ಟ ಕೆಲಸಗಳಲ್ಲಿ ಬರುವುದು. ಇವುಗಳನ್ನು ಮಾಡಲು ಪ್ರೋತ್ಸಾಹಿಸಿ.
  • ಕಲಿಕೆಯನ್ನು ಪ್ರೋತ್ಸಾಹಿಸಿ:
    ಪರಿಸರದಿಂದ ಕಲಿಯುವುದು ಬೇಕಾದಷ್ಟಿದೆ. ಮಕ್ಕಳು ಅವುಗಳನ್ನು ನೋಡಿ ಕಲಿಯುವಂತೆ ಯಾವಾಗಲೂ ಪ್ರೋತ್ಸಾಹಿಸಿ. ಇದು ಅವರನ್ನು ಮುಕ್ತ ಮನಸ್ಸಿನವರಾಗಲು ಸಹಾಯ ಮಾಡುತ್ತದೆ. ನಮ್ಮ ಪರಿಸರದ ಕುತೂಹಲ ಸತ್ಯ ಸಂಗತಿಗಳನ್ನು ಹೇಳುತ್ತಿರಿ. ಅವುಗಳು ನಿಮ್ಮ ಮಕ್ಕಳು ದೈರ್ಯಶಾಲಿಗಳಾಗಲು ಮತ್ತು ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡುತ್ತದೆ.
  • ಮಕ್ಕಳೊಂದಿಗೆ ಸಮಯ ಕಳೆಯಿರಿ :
    ನೀವು ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದು ಅತೀ ಮುಖ್ಯ. ಅವರಿಗೆ ಹೊಸ ಹೊಸ ವಿಚಾರಗಳನ್ನು ತಿಳಿಯಪಡಿಸಿ. ಅವರ ಆಸಕ್ತಿಯ ವಿಷಯಗಳಲ್ಲಿ ಭಾಗವಹಿಸುವಂತೆ ಮಾಡಿ. ಇದು ನಿಸ್ಸಂದೇಹವಾಗಿ ಅವರ ಜೀವನದ ಸ್ವಾವಲಂಬನೆ ದಾರಿಯ ಮೊದಲ ಹೆಜ್ಜೆಯಾಗಬಲ್ಲದು.

ಇದನ್ನೂ ಓದಿ :CBSE Class 10 12 : ಕೊನೆಯ 15 ದಿನಗಳಲ್ಲಿ ಹೀಗಿರಲಿ ನಿಮ್ಮ ಪರೀಕ್ಷಾ ತಯಾರಿ

ಇದನ್ನೂ ಓದಿ :CBSE Term 2 Exams : ಸಿಬಿಎಸ್​ಇ ಟರ್ಮ್ 2 ಪರೀಕ್ಷೆಗಳ ಮಾರ್ಗಸೂಚಿ ಇಲ್ಲಿದೆ ನೋಡಿ

(Parenting Tips help your child become self reliant and confident at an early age with these tips)

Comments are closed.