ಶಿವಮೊಗ್ಗ ಶಿಲ್ಪಿ ಕೈಯಲ್ಲಿ ಅರಳಿದ ಅಪ್ಪು ಪ್ರತಿಮೆ : ಗಣಿನಾಡಿನಲ್ಲಿ ಲೋಕಾರ್ಪಣೆ

ದೊಡ್ಮನೆ ಕುಡಿ ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ವರ್ಷ ಕಳೆದರೂ ಅವರ ನೆನಪು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಕಡಿಮೆ ಆಗಿಲ್ಲ. ಇದೀಗ ಮಲೆನಾಡಿನ ಶಿವಮೊಗ್ಗದ ಉತ್ಸಾಹಿ ಯುವಕರ ಗುಂಪುವೊಂದು ರಾಜ್ಯದಲ್ಲೇ ಅತಿದೊಡ್ಡ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಪುತ್ಥಳಿಯನ್ನು (POwer star Puneeth Rajkumar statue) ನಿರ್ಮಿಸಿ, ಗಣಿನಾಡು ಬಳ್ಳಾರಿಗೆ (Sri Ramulu )ಕಳುಹಿಸಿದ್ದಾರೆ.

ಶಿವಮೊಗ್ಗದ ನಿದಿಗೆಯಲ್ಲಿ ಆಕಾಶದೆತ್ತರಕ್ಕೆ ನಿಂತಿರುವ ಅಪ್ಪು ಪ್ರತಿಮೆಯನ್ನು ನೋಡಿದವರು ತಮ್ಮ ಮೆಚ್ಚಿನ ನಟನನ್ನು ಸ್ಮರಿಸಿಕೊಂಡಿದ್ದಾರೆ. ತಲೆ ಎತ್ತಿ ನೋಡಬೇಕಾದ 23 ಅಡಿ ಎತ್ತರದ ಪ್ರತಿಮೆ, ಮೂರು ಟನ್‌ ತೂಕದ ನಗುಮೊಗದ ಸರದಾರನ ಪ್ರತಿಮೆ ಜನರನ್ನು ಆಕರ್ಷಿಸುತ್ತಿದೆ. ಇದೇ ಬರುವ ಜನವರಿ 21ರಂದು ಬಳ್ಳಾರಿಯಲ್ಲಿ ನಡೆಯುವ “ಬಳ್ಳಾರಿ ಉತ್ಸವ”ದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ನಟ ಪುನೀತ್‌ ಅವರ ಈ ಆಕರ್ಷಕ ಪ್ರತಿಮೆಯನ್ನು ಶಿವಮೊಗ್ಗದ ಪ್ರಖ್ಯಾತ ಶಿಲ್ಪಿ ಜೀವನ್‌ ಮತ್ತು ತಂಡದವರು ನಿರ್ಮಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಜೀವನ್‌ ಶಿಲ್ಪಿ ಮತ್ತು ತಂಡದವರು ಆರಂಭಿಸಿದ ನಟ ಪುನೀತ್‌ ಅವರ ಪ್ರತಿಮೆ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಗಣಿನಾಡು ಬಳ್ಳಾರಿಗೆ ಪ್ರಯಾಣ ಬೆಳೆಸಿದೆ. ಈ ಪ್ರತಿಮೆ ಕಾರ್ಯವನ್ನು ಸಚಿವ ಶ್ರೀರಾಮುಲು ಅವರು ಈ ತಂಡಕ್ಕೆ ವಹಿಸಿದ್ದಾರೆ. ಹೀಗಾಗಿ ಸಚಿವ ಶ್ರೀರಾಮುಲು ಆವರಿಗೆ ನಾವು ಆಭಾರಿಯಾಗಿದ್ದೇವೆ ಎಂದು ಜೀವನ್‌ ಶಿಲ್ಪಿ ಮತ್ತು ತಂಡದವರು ಹೇಳಿದರು. ಹಾಗೆ ಈ ಪ್ರತಿಮೆ ಅನಾವರಣವನ್ನು ಎದುರು ನೋಡಿತ್ತಿದ್ದೇವೆ ಎಂದು ಸಹ ಹೇಳಿದರು.

ನಟ ಅಪ್ಪು ಅವರ ಪ್ರತಿಮೆಯನ್ನು ಕಬ್ಬಿಣ ಮತ್ತು ಫೈಬರ್‌, ಲಿಕ್ವಿಡ್‌ನಿಂದ ಮಾಡಿದ್ದು, ಸುಮಾರು ಮೂರು ಸಾವಿರ ಕೆಜಿ ಟನ್‌ನಷ್ಟು ಭಾರವಿದೆ. ಈ ಪ್ರತಿಮೆಯಲ್ಲಿ ಕಬ್ಬಿಣ ಒಂದು ಟನ್‌ನಷ್ಟು ಇರುತ್ತದೆ. ಶಿವಮೊಗ್ಗದ ನಿದಿಗೆ ಬಳಿ ಜೀವನ್‌ ಕಲಾ ಸನ್ನಿಧಿಯ ಜೀವನ್‌ ಮತ್ತು ಅವರ 15 ಶಿಲ್ಪಿಗಳು ಈ ಪ್ರತಿಮೆಯನ್ನು ಪೂರ್ಣಗೊಳಿಸಿದ್ದಾರೆ. ಮೊದಲಿಗೆ ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡ್‌ ನಿರ್ಮಿಸಿಕೊಂಡು ಅನಂತರದಲ್ಲಿ ಪ್ರತಿಮೆ ಮಾಡಲಾಗಿದೆ. ಅದಕ್ಕಾಗಿ 15 ಜನರ ತಂಡ ದಿನದ 24 ಗಂಟೆಗಳ ಕಾಲ ಹಗಲು ರಾತ್ರಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : ತಮಿಳು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ

ಇದನ್ನೂ ಓದಿ : “ಐ ವಾಂಟ್‌ ಟು ಗೋ ಬ್ಯಾಕ್‌” ಅಂದಿದ್ಯಾಕೆ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : KL Rahul Athiya Shetty marriage : ಕೆ.ಎಲ್ ರಾಹುಲ್-ಆತಿಯಾ ಶೆಟ್ಟಿ ಮದುವೆಗೆ ಬಾಲಿವುಡ್ ಸ್ಟಾರ್ಸ್‌ಗೆ ಆಹ್ವಾನ ಇಲ್ಲ!

ಸುಮಾರು ಮೂರು ತಿಂಗಳ ಕಾಲದಲ್ಲಿ ಅಪ್ಪು ಪ್ರತಿಮೆ ನಿರ್ಮಾಣವಾಗಿದೆ. ಈ ಪ್ರತಿಮೆಯನ್ನು ಸಾಗಿಸಲು 40 ಅಡಿ ಉದ್ದದ ಹಾಗೂ 20 ಚಕ್ರದ ಲಾರಿ ಆಗಮಿಸಿದ್ದು, ಬೃಹತ್‌ ಕ್ರೇನ್‌ಗಳನ್ನು ಬಳಸಿ ಲಾರಿಗೆ ಪ್ರತಿಮೆಯನ್ನು ಇರಿಸಿ ತೆಗೆದುಕೊಂಡು ಹೋಗಲಾಗಿದೆ.ಬಳ್ಳಾರಿ ಜಿಲ್ಲೆಯ ಅಭಿಮಾನಿಗಳ ಕೋರಿಕೆಗೆ ಸಚಿವ ಶ್ರೀರಾಮುಲು ಈ ಪ್ರತಿಮೆಯನ್ನು ನಿರ್ಮಿಸಲು ಸೂಚಿಸಿದ್ದಾರೆ. ಈಗಾಗಲೇ ಪ್ರತಿಮೆ ನಿರ್ಮಾಣಗೊಂಡಿದ್ದು, ಸದ್ಯ ಇರುವ ಅಪ್ಪು ಪ್ರತಿಮೆಗಳಿಗಿಂತ ದೊಡ್ಡ ಪ್ರತಿಮೆ ಇದಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಭಾಗವಹಿಸುವ ನಿರೀಕ್ಷೆಯಿದೆ.

Sri Ramulu : Shimoga Sculptor’s Power star Puneeth Rajkumar statue in bloom: Lokarpana in Ganinadu Bellary

Comments are closed.