Srikanth Meka: ಸೆಲೆಬ್ರಿಟಿಗಳು ಯಾವತ್ತೂ ವೈಯಕ್ತಿಕ ವಿಷಯದಿಂದಲೇ ಸುದ್ದಿಯಾಗುತ್ತಾರೆ. ಮದುವೆ, ಅಫೇರ್, ಡೇಟಿಂಗ್, ವಿಚ್ಛೇದನ ಮೊದಲಾದ ವಿಷಯಗಳಲ್ಲಿ ಸೆಲೆಬ್ರಿಟಿಗಳು ಚರ್ಚೆಗೆ ಒಳಗಾಗುತ್ತಾರೆ. ಇದೀಗ ಈ ಸಾಲಿನಲ್ಲಿ ತೆಲುಗು ಖ್ಯಾತ ನಟ ಶ್ರೀಕಾಂತ್ ಮೇಕಾ ಅವರ ಹೆಸರು ಕೇಳಿಬಂದಿದೆ. ತಮ್ಮ 25 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ನಟ ವದಂತಿಯನ್ನು ತಳ್ಳಿಹಾಕಿದ್ದಾರೆ.
ನಟ ಶ್ರೀಕಾಂತ್ ಮೇಕಾ ಹಾಗೂ ಊಹಾ ದಂಪತಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಹೀಗಾಗಿ ಜೋಡಿ ಶೀಘ್ರದಲ್ಲೇ ವಿಚ್ಛೇದನ ಪಡೆಯಲು ತೀರ್ಮಾನಿಸಿದೆ ಎಂಬ ವದಂತಿಗಳು ಕೇಳಿಬರುತ್ತಿವೆ. ಈ ಹಿನ್ನೆಲೆ ಶ್ರೀಕಾಂತ್ ಮೇಕಾ ಪ್ರತಿಕ್ರಿಯೆ ನೀಡಿದ್ದಾರೆ. ತೆಲುಗಿನ ಖಾಸಗಿ ವಾಹಿನಿ ಜೊತೆ ಮಾತನಾಡಿದ ಅವರು, ನನ್ನ ವೈಯಕ್ತಿಕ ಜೀವನದ ಬಗ್ಗೆ ಇಂಥ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಇದು ಮೊದಲನೆ ಬಾರಿ ಅಲ್ಲ. ಈ ಹಿಂದೆಯೂ ಯಾರೋ ನನ್ನ ಸಾವಿನ ಕುರಿತಾಗಿ ಸುಳ್ಳು ಸುದ್ದಿ ಹರಡಿದ್ದರು. ಇದರಿಂದ ನನ್ನ ಇಡೀ ಕುಟುಂಬ ಆತಂಕಕ್ಕೊಳಗಾಗಿತ್ತು ಎಂದಿದ್ದಾರೆ.
ಈ ಬಾರಿ ಆರ್ಥಿಕ ತೊಂದರೆಯಿಂದಾಗಿ ನಾನು ಪತ್ನಿಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಸುದ್ದಿ ಹರಡಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಆತಂಕಗೊಂಡಿದ್ದಾಳೆ. ಅವಳ ಮೊಬೈಲ್ ಗೆ ಬಂದ ಮೆಸೇಜ್ ಗಳನ್ನು ನನಗೆ ತೋರಿಸಿದ್ದಾಳೆ. ಅದನ್ನೆಲ್ಲಾ ಗಂಭೀರವಾಗಿ ಪರಿಗಣಿಸದಂತೆ ಅವಳಿಗೆ ಸಮಾಧಾನ ಮಾಡಿದ್ದೇನೆ ಎಂದು ಶ್ರೀಕಾಂತ್ ಮೇಕಾ ಹೇಳಿದ್ದಾರೆ.
ಅಂದಹಾಗೆ ಮೂಲತಃ ಕರ್ನಾಟಕದವರಾದ ಶ್ರೀಕಾಂತ್ ಅವರಿಗೆ ವೃತ್ತಿ ಜೀವನಕ್ಕೆ ಅಡಿಪಾಯ ನೀಡಿದ್ದು ತೆಲುಗು ಇಂಡಸ್ಟ್ರಿ. ಕಳೆದ 3 ದಶಕಗಳಿಂದ ಅವರು ತೆಲುಗಿನಲ್ಲಿ ಮಾತ್ರವಲ್ಲದೇ ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ದಿ ವಿಲನ್, ಯುಗಾದಿ, ಜೇಮ್ಸ್ ಚಿತ್ರದಲ್ಲಿ ಇವರು ನಟಿಸಿದ್ದಾರೆ.
ಇದನ್ನೂ ಓದಿ: compassionate employment: ದತ್ತು ಮಕ್ಕಳು ಕೂಡಾ ಅನುಕಂಪದ ನೌಕರಿ ಪಡೆಯಬಹುದು; ಹೈಕೋರ್ಟ್ ಮಹತ್ವದ ಆದೇಶ
1997ರಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ಶ್ರೀಕಾಂತ್ ಅವರಿಗೆ ರೋಷನ್, ರೋಹನ್, ಮೇಧಾ ಎಂಬ ಹೆಸರಿನ ಮೂವರು ಮಕ್ಕಳಿದ್ದಾರೆ. ರೋಷನ್ ಈಗಾಗಲೇ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ನಿರ್ದೇಶಕಿ ಗೌರಿ ರೋಣಂಕಿ ಅವರ ಪೆಳ್ಳಿ ಸಂದಡಿ ಸಿನಿಮಾದಲ್ಲಿ ರೋಷನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Srikanth Meka: Telugu actor Srikanth Meka reacts to his divorce speculations