compassionate employment: ದತ್ತು ಮಕ್ಕಳು ಕೂಡಾ ಅನುಕಂಪದ ನೌಕರಿ ಪಡೆಯಬಹುದು; ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: compassionate employment: ದತ್ತು ಮಕ್ಕಳು (Adopted children) ಕೂಡಾ ಸರ್ಕಾರದಿಂದ ಅನುಕಂಪದ ಆಧಾರದ ಮೇಲೆ ನೀಡಲಾಗುವ ನೌಕರಿಯನ್ನು ಪಡೆಯಬಹುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ (High Court) ಮಹತ್ವದ ಆದೇಶ ಹೊರಡಿಸಿದೆ. ಸ್ವಂತ ಮಕ್ಕಳು ಹಾಗೂ ದತ್ತು ಮಕ್ಕಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಒಂದು ವೇಳೆ ವ್ಯತ್ಯಾಸ ಮಾಡಿದ್ದೇ ಆದಲ್ಲಿ ದತ್ತು ತೆಗೆದುಕೊಳ್ಳುವ ಉದ್ದೇಶವೇ ನಿರರ್ಥಕ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: Mangaluru blast FSL Report: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಬೆಚ್ಚಿಬೀಳಿಸಿದ ಎಫ್‌ಎಸ್‌ಎಲ್‌ ವರದಿ

ಅಭಿಯೋಜನೆ ವಿಭಾಗದಲ್ಲಿ ದಲಾಯತ್ ಆಗಿದ್ದ ವಿನಾಯಕ್ ಮುತ್ತತ್ತಿ ಎಂಬುವವರು 2010ರಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆ ಅನುಕಂಪದ ನೌಕರಿಗೆ ಅವರ ದತ್ತು ಪುತ್ರ ಗಿರೀಶ್ ಅರ್ಜಿ ಹಾಕಿದ್ದರು. ಆದರೆ ಗಿರೀಶ್ ಅವರು ವಿನಾಯಕ್ ಅವರ ದತ್ತುಪುತ್ರನೆಂಬ ಕಾರಣಕ್ಕೆ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗಿರೀಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ತನಗೆ ಅನುಕಂಪದಡಿ ನೌಕರಿ ನೀಡುವಂತೆ ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಸೂರಜ್ ಗೋವಿಂದರಾಜ್, ನ್ಯಾ.ಜಿ.ಬಸವರಾಜ್ ಅವರಿದ್ದ ವಿಭಾಗೀಯ ಪೀಠ 12 ವಾರದಲ್ಲಿ ಅನುಕಂಪದ ಹುದ್ದೆ ಕೋರಿದ್ದ ಅರ್ಜಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: Mangalore blast: ಫ್ರಾನ್ಸ್‌ ಸ್ಪೂರ್ತಿ… ಮಂಗಳೂರಿನಲ್ಲಿ ಟ್ರಯಲ್‌..!

ತಂದೆ ಮೃತಪಟ್ಟಾಗ ಅನುಕಂಪದ ಆಧಾರದ ಮೇಲೆ ತನಗೆ ಉದ್ಯೋಗ ನೀಡಬೇಕು ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ಗಿರೀಶ್ ಅರ್ಜಿ ಸಲ್ಲಿಸಿದ್ದರು. ಆದರೆ ದತ್ತು ಮಕ್ಕಳಿಗೆ ಅನುಕಂಪದಲ್ಲಿ ನೇಮಕಾತಿ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಕಾರಣ ನೀಡಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಅರ್ಜಿ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಗಿರೀಶ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಇದನ್ನೂ ಓದಿ: NIMHANS Recruitment 2022 : ನಿಮ್ಹಾನ್ಸ್‌ನ ಕೌನ್ಸಿಲರ್ ಹಾಗೂ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

compassionate employment: Adopted children can also get compassionate employment; says High Court

Comments are closed.