Yuvraj Singh: ಯುವರಾಜ್ ಸಿಂಗ್ ಗೆ ‘ಬಂಗಲೆ’ ಸಂಕಷ್ಟ; ಡಿ.8ರಂದು ವಿಚಾರಣೆಗೆ ಹಾಜರಾಗುವಂತೆ ಗೋವಾ ಸರ್ಕಾರದಿಂದ ನೋಟಿಸ್

ಗೋವಾ: ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಗೋವಾ ಸರ್ಕಾರವು ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇದನ್ನೂ ಓದಿ: Srikanth Meka: ವಿಚ್ಛೇದನ ವದಂತಿ ತಳ್ಳಿಹಾಕಿದ ತೆಲುಗು ನಟ ಶ್ರೀಕಾಂತ್; ಸುಳ್ಳು ಸುದ್ದಿ ಹರಡಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಗೋವಾದ ನೆಮೊರ್ಜಿಮ್ ನಲ್ಲಿ ತಮ್ಮ ವಿಲ್ಲಾವನ್ನು ನೋಂದಾಯಿಸದೇ ಹೋಮ್ ಸ್ಟೇ ಆಗಿ ಪರಿವರ್ತಿಸಿರುವ ಹಿನ್ನೆಲೆ ಯುವರಾಜ್ ಸಿಂಗ್ ಗೆ ಗೋವಾ ಪ್ರವಾಸೋದ್ಯಮ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಗೋವಾ ಪ್ರವಾಸೋದ್ಯಮ ವ್ಯವಹಾರ ಕಾಯ್ದೆ 1982ರ ಅಡಿಯಲ್ಲಿ, ನೋಂದಣಿ ಮಾಡಿದ ಬಳಿಕವಷ್ಟೆ ರಾಜ್ಯದಲ್ಲಿ ಹೋಮ್ ಸ್ಟೇ ಕಾರ್ಯ ನಿರ್ವಹಿಸಬಹುದು ಎಂಬ ನಿಯಮವಿದೆ. ಉತ್ತರ ಗೋವಾದ ಮೊರ್ಜಿಮ್ ನಲ್ಲಿರುವ ಐಶಾರಾಮಿ ವಿಲ್ಲಾ ‘ಕಾಸಾ ಸಿಂಗ್’ ವಿಳಾಸಕ್ಕೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜೇಶ್ ಕಾಳೆ ಅವರು ನೋಟಿಸ್ ಕಳುಹಿಸಿದ್ದಾರೆ. ವೈಯಕ್ತಿಕ ವಿಚಾರಣೆಗಾಗಿ ಡಿಸೆಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಮುಂದೆ ಹಾಜರಾಗುವಂತೆ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ಪ್ರವಾಸೋದ್ಯಮ ವ್ಯಾಪಾರ ಕಾಯ್ದೆಯಡಿ ಆಸ್ತಿಯನ್ನು ನೋಂದಾಯಿಸದಿದ್ದ ಹಿನ್ನೆಲೆ ದಂಡನಾತ್ಮಕ ಕ್ರಮವೆಂದು (1 ಲಕ್ಷ ರೂ.ವರೆಗೆ ದಂಡ) ನೋಟಿಸ್ ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: compassionate employment: ದತ್ತು ಮಕ್ಕಳು ಕೂಡಾ ಅನುಕಂಪದ ನೌಕರಿ ಪಡೆಯಬಹುದು; ಹೈಕೋರ್ಟ್ ಮಹತ್ವದ ಆದೇಶ

ವರ್ಚೆವಾಡ, ಮೊರ್ಜಿಮ್, ಪೆರ್ನೆಮ್, ಗೋವಾದಲ್ಲಿ ನೆಲೆಗೊಂಡಿರುವ ನಿಮ್ಮ ವಸತಿ ಆವರಣವು ಹೋಮ್ ಸ್ಟೇಗಳಾಗಿ ಕಾರ್ಯನಿರ್ವಹಿಸುತ್ತಿವೆ. ಮತ್ತು ‘Airbnb’ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಬುಕಿಂಗ್ ಗೆ ಲಭ್ಯವಿರುವಂತೆ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ. ನಿಮ್ಮ ಗೋವಾ ನಿವಾಸದಲ್ಲಿ 6 ಜನರಿಗೆ ಆತಿಥ್ಯ ನೀಡುವುದಾಗಿ ಮತ್ತು ಅದರ ಬುಕಿಂಗ್ ‘Airbnb’ ನಲ್ಲಿ ಮಾತ್ರ ಎಂದು ಯುವರಾಜ್ ಮಾಡಿರುವ ಟ್ವೀಟ್ ನ್ನು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

Yuvraj Singh: Yuvraj Singh Gets Notice From Goa Government For Putting Up Villa For Homestay

Comments are closed.