ಸಾಮಾನ್ಯವಾಗಿ ನಟಿಮಣಿಯರು ಯಾವುದಾದರೂ ಒಂದು ವಿವಾದದಲ್ಲಿ ಸಿಲುಕಿಕೊಂಡ್ರೇ ಮತ್ತೆ ಅವರನ್ನು ಸಿನಿಮಾಕ್ಕೆ ಕರೆಯೋದಿರಲಿ, ಅವರತ್ತ ಯಾರು ದೃಷ್ಟಿಯು ಹರಿಸೋದಿಲ್ಲ. ಅಂತಹ ಸ್ಥಿತಿ ಸ್ಯಾಂಡಲ್ ವುಡ್ ನಲ್ಲಿದೆ. ಆದರೆ ಇಂಥ ಹೊತ್ತಲ್ಲೂ ಸ್ಯಾಂಡಲ್ ವುಡ್ ಗೆ ಮರಳಿದ ಲೂಸಿಯಾ ಬೆಡಗಿ ಶ್ರುತಿ ಹರಿಹರನ್ (Sruthi Hariharan ) ಕೈ ತುಂಬ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಹೌದು ಲೂಸಿಯಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಶ್ರುತಿ ಹರಿಹರನ್ (Sruthi Hariharan ) ತಮ್ಮ ಮೊದಲ ಸಿನಿಮಾದಲ್ಲೇ ಪ್ರತಿಭೆ ಸಾಬೀತುಪಡಿಸಿದ್ರು. ನಾನ್ ಗ್ಲ್ಯಾಮರ್ ಪಾತ್ರದಲ್ಲೂ ಅಭಿನಯದ ಮೂಲಕ ಗೆದ್ದ ಶ್ರುತಿ ಹರಿಹರನ್ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮನೆಮಾತಾಗಿದ್ರು. ಬಹುಭಾಷೆ ತಾರೆಯಾಗಿ ಬದಲಾದ ಶ್ರುತಿ ಕನ್ನಡ ಮತ್ತು ಪರ ಭಾಷೆಯಲ್ಲೂ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಬಹುಭಾಷಾ ನಟ ಅರ್ಜುನ್ ಸರ್ಜಾ ಜೊತೆ ನಟಿಸಿದ ಸಿನಿಮಾದ ಬಳಿಕ ಶ್ರುತಿ ವಿವಾದಕ್ಕೆ ಸಿಲುಕಿದ್ರು.

ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ಶ್ರುತಿ ಹರಿಹರನ್ ತೀವ್ರ ವಿವಾದಕ್ಕೆ ಗುರಿಯಾಗಿದ್ದರು. ಕೆಲವರು ಶ್ರುತಿ (Sruthi Hariharan ) ಪರ ನಿಂತರೇ, ಹಲವರು ಶ್ರುತಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ ಈ ಪ್ರಕರಣ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ವಜಾಗೊಂಡಿದ್ದು ಬಿ ರಿಪೋರ್ಟ್ ಕೂಡ ಸಲ್ಲಿಕೆಯಾಗಿದೆ. ಈ ವಿವಾದದ ಬಳಿಕ ಶ್ರುತಿ ಕೂಡ ತಮ್ಮ ವೈವಾಹಿಕ ಬದುಕಿಗೆ ಮರಳಿದ್ದು ತಾಯ್ತನಕ್ಕಾಗಿ ಬ್ರೇಕ್ ಪಡೆದುಕೊಂಡಿದ್ದಾರೆ.

ವಿವಾದ ಹಾಗೂ ತಾಯ್ತನದ ಬಳಿಕ ಸ್ಯಾಂಡಲ್ ವುಡ್ ಗೆ ಮರಳಿದ ಶ್ರುತಿಗೆ ಒಂದರ್ಥದಲ್ಲಿ ಗ್ರ್ಯಾಂಡ್ ವೆಲ್ ಕಮ್ ಸಿಕ್ಕಿದ್ದು, ನಟಿ ಶ್ರುತಿ ಹರಿಹರನ್ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಲುಗಾರ, ಸ್ಟ್ರಾಬೆರಿ ಸಿನಿಮಾದ ಜೊತೆಗೆ ಡಾಲಿ ಧನಂಜಯ್ ನಿರ್ಮಿಸಿ ನಟಿಸುತ್ತಿರುವ ಹೆಡ್ ಬುಷ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಮಾತ್ರವಲ್ಲ ಏಜೆಂಟ್ ಕನ್ನಾಯಿರಾಮ್ ಹಾಗೂ ಶಂಕರ್ ಎನ್ ಸೊಂಡೊರ್ ನಿರ್ದೇಶನದ ಸಿನಿಮಾಗೂ ಜೈ ಎಂದಿದ್ದಾರೆ.
ಹೀಗಾಗಿ ಬಹುತೇಕ ಮುಂದಿನ ವರ್ಷದಿಂದ ಸ್ಯಾಂಡಲ್ ವುಡ್ ಸೇರಿದಂತೆ ಚಿತ್ರರಂಗದಲ್ಲಿ ಶ್ರುತಿ ಮೇನಿಯಾ ಆರಂಭವಾದ್ರೂ ಅಚ್ಚರಿಯೇನಿಲ್ಲ. ಕೇವಲ ಸಿನಿಮಾ ಮಾತ್ರವಲ್ಲ ನಟಿ ಶ್ರುತಿ ಹರಿಹರನ್ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದು ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ.
ಇದನ್ನೂ ಓದಿ : Samantha and Vijay : ಸಾಹಸ ಚಿತ್ರೀಕರಣದ ವೇಳೆ ಗಾಯಗೊಂಡ ಸಮಂತಾ ಮತ್ತು ವಿಜಯ ದೇವರಕೊಂಡ
ಇದನ್ನೂ ಓದಿ : ಚೈತ್ರಾ ಹಳ್ಳಿಕೇರಿ 25 ಕೋಟಿ ಪರಿಹಾರಕ್ಕಾಗಿ ಸುಳ್ಳು ಆರೋಪ : ನಟಿ ಪತಿ ಬಾಲಾಜಿ ಪ್ರತ್ಯಾರೋಪ
Sruthi Hariharan Comeback Sandalwood