film chamber election 2022 : ಫಿಲ್ಮ್‌ ಚೇಂಬರ್ ಗೆ ಇಂದು ಚುನಾವಣೆ: ಸಾ.ರಾ.ಗೋವಿಂದ್ ಹಾಗೂ ಭಾಮಾ ಹರೀಶ್ ಬಣದ ನಡುವೆ ಪೈಪೋಟಿ

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಮನೆಯಂತಿರೋ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಚಟುವಟಿಕೆಗಳ ಗೂಡಾಗಿದೆ. ಶನಿವಾರ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ (film chamber election 2022) ನಡೆಯಲಿದ್ದು, ಈಗಾಗಲೇ ವಾಣಿಜ್ಯ ಮಂಡಳಿ ಚುನಾವಣೆಗೆ ಸಿದ್ಧವಾಗಿದೆ. ಇದು ಚಲನಚಿತ್ರ ವಾಣಿಜ್ಯ ಮಂಡಳಿಯ 64ನೇ ಚುನಾವಣೆಯಾಗಿದ್ದು, ಕೊರೋನಾ ಕಾರಣದಿಂದ 3 ವರ್ಷಗಳ ನಂತರ ಈ ಚುನಾವಣೆ ನಡೆಯುತ್ತಿದೆ.

ಮೂರು ವರ್ಷಗಳ ಬಳಿಕ ನಡೆಯುತ್ತಿರುವ ಈ ಚುನಾವಣೆ (film chamber election 2022) ಸಾಕಷ್ಟು ಕುತೂಹಲ ಮೂಡಿಸಿದ್ದು, ಈ ಬಾರಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಯಾರಾಗಬಹುದು ಅನ್ನೋ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಮನೆ ಮಾಡಿದೆ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿರೋ ಸಾ.ರಾ.ಗೋವಿಂದ್ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸಾ.ರಾ.ಗೋವಿಂದ್ ಹಾಗೂ ಭಾ.ಮ.ಹರೀಶ್ ನಡುವೆ ಭಾರಿ ಪೈಪೋಟಿ ನಡೆದಿದೆ. ಸ್ಯಾಂಡಲ್ ವುಡ್ ಚಲನಚಿತ್ರ ವಾಣಿಜ್ಯ ಮಂಡಳಿಯ ಈ ಎಲೆಕ್ಷನ್ ಗೆ ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕರ ವಲಯಗಳಿಂದ ಮತದಾನ. ನಡೆಯಲಿದ್ದು, 1800ಕ್ಕೂ ಹೆಚ್ಚು ಮತದಾರರು ಸ್ಥಾನಾಕಾಂಕ್ಷಿಗಳ ಭವಿಷ್ಯ ನಿರ್ಧಾರವಾಗಲಿದೆ.

ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ ತನಕ ವಾರ್ಷಿಕ ಸಭೆ ಹಾಗೂ ಚಿತ್ರೋದ್ಯಮದ ಪರಿಸ್ಥಿತಿಯ ಚರ್ಚೆ ನಡೆಯಲಿದ್ದು, ಮಧ್ಯಾಹ್ನ 2ರಿಂದ 6 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ರಾತ್ರಿ 7 ಗಂಟೆಗೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಫಿಲ್ಮ್ ಚೇಂಬರ್ ನ ಪಕ್ಕ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಸಿದ್ಧತೆ ನಡೆದಿದೆ.

ಈ ಮಧ್ಯೆ ಫಿಲ್ಮ್ ಚೇಂಬರ್ ನಲ್ಲಿ  ಸಾರಾ ಗೋವಿಂದು ಬಣ ಅಕ್ರಮ ಎಸಗಿದೆ ಎಂದು ಭಾಮಾ ಹರೀಶ್ ಬಣ ಆರೋಪಿಸಿದ್ದು, ಇದಕ್ಕೆ ಸಾರಾಗೋವಿಂದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬಣ್ಣದ ಲೋಕದ ಈ ಚುನಾವಣೆಗೂ ರಾಜಕೀಯದ ನಂಟು ಬೆಸೆದುಕೊಂಡಿದ್ದು, ಚೇಂಬರ್ ಚುನಾವಣೆಯಲ್ಲಿ ಬಾ ಮಾ ಹರೀಶ್ ಪರ ಸಚಿವ ವಿ.ಸೋಮಣ್ಣ ಮತಯಾಚನೆ ಮಾಡಿದ್ದಾರೆ.

ಈ ಮಧ್ಯೆ ಸಾ.ರಾ.ಗೋವಿಂದ್ ಆಪ್ತರು ಸಹ ಈ ಭಾರಿ ಭಾಮಾಹರೀಶ್ ತಂಡಕ್ಕೆ ಬೆಂಬಲ ನೀಡುತ್ತಿದ್ದು, ಹೀಗಾಗಿ ಈ ಭಾರಿ ಸಾ.ರಾ.ಗೋವಿಂದ್ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಮ್ಮ ಹಿಡಿತ ಕಳೆದುಕೊಳ್ಳಲಿದ್ದಾರಾ ಎಂಬ ಸಂದೇಹ ಕೂಡ ಮೂಡಿದೆ. ಒಟ್ಟಿನಲ್ಲಿ ಶನಿವಾರ ಚಲನಚಿತ್ರ ವಾಣಿಜ್ಯ ಮಂಡಳಿ ಪಾಲಿಗೆ ಮಹತ್ವದ ದಿನವಾಗಿದೆ.

ಇದನ್ನೂ ಓದಿ : lavanya of dasapurandara fame : ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ರಾಜಾ – ರಾಣಿ’ ಖ್ಯಾತಿಯ ಶಶಿ ಹೆಗ್ಡೆ, ಲಾವಣ್ಯ

ಇದನ್ನೂ ಓದಿ : Jersey Film Trends on Netflix : ಶಾಹಿದ್ ಕಪೂರ್ ನಟನೆಯ “ಜರ್ಸಿ ” ನೆಟ್ಫ್ಲಿಕ್ಸ್ ನಲ್ಲಿ ಈಗ ಟಾಪ್ ಟ್ರೆಂಡಿಂಗ್ ಸಿನಿಮಾ!

film chamber election 2022 sara Govind vs Bama Harish Team

Comments are closed.