ಸೋಮವಾರ, ಏಪ್ರಿಲ್ 28, 2025
HomeCinemaಲವ್ ಸ್ಟೋರಿ ಮೂಲಕ ಸುದ್ದಿಯಾದ ಸ್ಟಾರ್ ಪುತ್ರಿ…! ಅಪ್ಪನ ಫಿಟ್ನೆಸ್ ಕೋಚ್ ಜೊತೆ ಮಗಳ ಲವ್ವಿಡವ್ವಿ…!!

ಲವ್ ಸ್ಟೋರಿ ಮೂಲಕ ಸುದ್ದಿಯಾದ ಸ್ಟಾರ್ ಪುತ್ರಿ…! ಅಪ್ಪನ ಫಿಟ್ನೆಸ್ ಕೋಚ್ ಜೊತೆ ಮಗಳ ಲವ್ವಿಡವ್ವಿ…!!

- Advertisement -

ಮುಂಬೈ: ಇತ್ತೀಚಿಗಷ್ಟೇ ತಮ್ಮ ಮೇಲೆ ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯ ನಡೆದಿತ್ತು ಎನ್ನೋ ಮೂಲಕ ಬಾಲಿವುಡ್ ಗೆ ಶಾಕ್ ನೀಡಿದ್ದ ಮಿಸ್ಟರ್ ಫರ್ಫೆಕ್ಟ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಈಗ ತಮ್ಮ ಲವ್ವಿ-ಡವ್ವಿಯಿಂದ ಸಂಚಲನ ಮೂಡಿಸಿದ್ದಾರೆ. ಇಷ್ಟಕ್ಕೂ ಇರಾ ಖಾನ್ ಲವ್ ಮಾಡ್ತಿರೋದು ಅಷ್ಟು ದೊಡ್ಡ ವಿಚಾರನಾ ಅಂತ ನೀವು ಕೇಳಬಹುದು…ಲವ್ ಮಾಡ್ತಿರೋದು ದೊಡ್ಡ ವಿಚಾರ ಅಲ್ಲ ಆದರೇ ಇರಾ ಖಾನ್ ಗೆ ಲವ್ವಾಗಿರೋದು ಅಪ್ಪನ ಫಿಟ್ನೆಸ್ ಕೋಚ್ ಮೇಲೆ.

ಅಮೀರ್ ಖಾನ್ ಫಿಟ್ನೆಸ್ ಕೋಚ್ ನೂಪುರ್ ಶಿಖಾರೆ ಜೊತೆ ಇರಾ ಖಾನ್ ಪ್ರೀತಿಯಲ್ಲಿ ಬಿದ್ದಿದ್ದು ಮೂಲಗಳ ಪ್ರಕಾರ ಇಬ್ಬರೂ ಇರಾ ಖಾನ್ ಗೆ ಸೇರಿದ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರಂತೆ. ನೂಪುರ್ ಶಿಕಾರೆ ಬಾಲಿವುಡ್ ನ ಹೆಸರಾಂತ ಫಿಟ್ನೆಸ್ ಕೋಚ್ ಸ್ವತಃ ಇರಾ ಖಾನ್ ಕೂಡ ನೂಪರ್ ಶಿಖಾರೆ ಬಳಿಯೇ ಜಿಮ್ ಟ್ರೈನಿಂಗ್ ಪಡೆಯುತ್ತಿದ್ದರು.

ಮಾತ್ರವಲ್ಲ ಅಮೀರ್ ಖಾನ್, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಗೂ ನೂಪುರ್ ಶಿಖಾರೆ ದೇಹ ದಂಡನೆಯ ಪಾಠ ಹೇಳಿದವರು. ಸದ್ಯ ನಿರ್ದೇಶನ ಹಾಗೂ ರಂಗಭೂಮಿಯಲ್ಲಿ ಬ್ಯುಸಿಯಾಗಿರೋ ಇರಾ ಖಾನ್ ಕೊರೋನಾ ಲಾಕ್ ಡೌನ್ ಆರಂಭವಾದಾಗಿನಿಂದ ನೂಪುರ್ ಶಿಖಾರೆ ಜೊತೆ ಕಾಣಿಸಿಕೊಳ್ಳಲಾರಂಭಿಸಿದ್ದು, ಇವರಿಬ್ಬರ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿದೆ.

ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರ ಪೋಟೋ ಗೆ ಮತ್ತೊಬ್ಬರು ಕಮೆಂಟ್ ಮಾಡೋದು ಮೆಚ್ಚುಗೆ ವ್ಯಕ್ತಪಡಿಸೋದು, ಒಟ್ಟೊಟ್ಟಿಗೆ ಕಾಣಿಸಿಕೊಳ್ಳೋದು ಜೋರಾಗಿದ್ದು ಬಾಲಿವುಡ್ ನಲ್ಲಿ ಈ ಲವ್ ಸ್ಟೋರಿ ಸಖತ್ ಸದ್ದು ಮಾಡಲಾರಂಭಿಸಿದೆ.

ದೀಪಾವಳಿಯನ್ನು ಈ ಜೋಡಿ ಒಟ್ಟಿಗೆ ಆಚರಿಸಿದ್ದು ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಸಾಂಪ್ರದಾಯಿಕ ಉಡುಗೆಯ ಪೋಟೋವನ್ನು ಹಂಚಿಕೊಂಡಿದ್ದಾರೆ. ಈ ಲವ್ ಸ್ಟೋರಿ ಅಮೀರ್ ಖಾನ್ ಹಾಗೂ ಅವರ ಮಾಜಿ ಪತ್ನಿ ರೀನಾ ದತ್ತಾ ಹಾಗೂ ನೂಪುರ್ ಶಿಖಾರೆ ಪೋಷಕರಿಗೆ ತಿಳಿದಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಮತ್ತೊಂದು ಲವ್ ಸ್ಟೋರಿ ಸದ್ದು ಮಾಡಲಾರಂಭಿಸಿದ್ದು, ಮಿಸ್ಟರ್ ಪರ್ಫೆಕ್ಟ್ ಫಿಟ್ನೆಸ್ ಕೋಚ್ ರನ್ನು ಅಳಿಯನಾಗಿ ಸ್ವೀಕರಿಸಲು ಸಿದ್ಧವಾಗೋ ಕಾಲ ಸನ್ನಿಹಿತವಾದಂತಿದೆ.

RELATED ARTICLES

Most Popular