Virat Kohli should leave RCB: “ವಿರಾಟ್ ಕೊಹ್ಲಿಗೆ ಐಪಿಎಲ್ ಕಪ್ ಬೇಕೆಂದರೆ, ಆರ್’ಸಿಬಿ ತಂಡವನ್ನು ತೊರೆಯಬೇಕು

Virat Kohli  : ಬೆಂಗಳೂರು: “ಈ ಸಲ ಕಪ್ ನಮ್ದೇ” ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಘೋಷವಾಕ್ಯ ಈ ಬಾರಿಯೂ ಸುಳ್ಳಾಗಿದೆ. ಸತತ 17ನೇ ವರ್ಷವೂ ಆರ್’ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿದೆ.

Virat Kohli  : ಬೆಂಗಳೂರು: “ಈ ಸಲ ಕಪ್ ನಮ್ದೇ” ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಘೋಷವಾಕ್ಯ ಈ ಬಾರಿಯೂ ಸುಳ್ಳಾಗಿದೆ. ಸತತ 17ನೇ ವರ್ಷವೂ ಆರ್’ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಈ ಬಾರಿ (IPL 2024) ಸತತ ಆರು ಸೋಲುಗಳ ನಂತರ ಸತತ ಆರು ಗೆಲುವುಗಳೊಂದಿಗೆ ಪ್ಲೇ ಆಫ್ ಹಂತಕ್ಕೇರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಬುಧವಾರ ಅಹ್ಮದಾಬಾದ್’ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿತ್ತು. ಇದರೊಂದಿಗೆ ಐಪಿಎಲ್ ಕಪ್ ಗೆಲ್ಲುವ ಆರ್’ಸಿಬಿ ಕನಸು ಮತ್ತೊಮ್ಮೆ ನುಚ್ಚು ನೂರಾಗಿತ್ತು.

Virat Kohli wants IPL Cup, he has to leave RCB
Image Credit to Original Source

ಸತತ 17 ವರ್ಷಗಳಿಂದಲೂ ಆರ್’ಸಿಬಿ ಪರ ಆಡುತ್ತಿರುವ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರ ಕಪ್ ಗೆಲ್ಲುವ ಕನಸೂ ಕೂಡ ಭಗ್ನಗೊಂಡಿತ್ತು. 2008ರಿಂದಲೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದರೂ, ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿಯನ್ನು ಸ್ಪರ್ಶಿಸಬೇಕಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆಯಬೇಕೆಂದು ಇಂಗ್ಲೆಂಡ್’ನ ಮಾಜಿ ಕ್ರಿಕೆಟಿಗ, ಐಪಿಎಲ್’ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕೆವಿನ್ ಪೀಟರ್ಸನ್ (Kevin Pietersen) ಹೇಳಿದ್ದಾರೆ.

ಇದನ್ನೂ ಓದಿ : Hardik Pandya And Natasa Stankovic: ಹಾರ್ದಿಕ್ ಪಾಂಡ್ಯ ದಾಂಪತ್ಯದಲ್ಲಿ ಬಿರುಗಾಳಿ, ಪತಿಯಿಂದ ದೂರವಾದಳಾ ಸರ್ಬಿಯಾ ನಟಿ ನತಾಶಾ ಸ್ಟಾಂಕೋವಿಕ್ ?

“ನಾನು ಈ ಹಿಂದೆಯೂ ಇದನ್ನು ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಬೇರೆ ಕ್ರೀಡೆಗಳಲ್ಲಿ ದಿಗ್ಗಜರೆನಿಸಿಕೊಂಡವರು ತಮ್ಮ ತಂಡಗಳನ್ನು ಬಿಟ್ಟು ಬೇರೆ ತಂಡಗಳನ್ನು ಸೇರಿ ಕಪ್’ಗಳನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಸತತ ಪ್ರಯತ್ನ ಪಡುತ್ತಿದ್ದರೂ, ಮತ್ತೊಮ್ಮೆ ಆರೆಂಜ್ ಕ್ಯಾಪ್ ಗೆದ್ದರೂ, ತಂಡಕ್ಕಾಗಿ ಎಲ್ಲವನ್ನೂ ಮಾಡಿದರೂ, ಆ ಫ್ರಾಂಚೈಸಿ ಮಾತ್ರ ಮತ್ತೊಮ್ಮೆ ವಿಫಲವಾಗಿದೆ.

Virat Kohli wants IPL Cup, he has to leave RCB
Image Credit to Original Source

ತಂಡದ ಬ್ರ್ಯಾಂಡ್ ಮತ್ತು ತಂಡಕ್ಕೆ ವಿರಾಟ್ ಕೊಹ್ಲಿ ಕಮರ್ಷಿಯಲ್ ಮೌಲ್ಯಗಳನ್ನು ತಂದುಕೊಡುತ್ತಿರುವುದನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ವಿರಾಟ್ ಕೊಹ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಅರ್ಹನಾಗಿದ್ದಾನೆ. ಟ್ರೋಫಿ ಗೆಲ್ಲುವ ತಂಡದ ಪರ ಆಡಲು ಆತ ಅರ್ಹ. ನನ್ನ ಪ್ರಕಾರ ವಿರಾಟ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳಬೇಕು. ಆತ ದೆಹಲಿಯಿಂದಲೇ ಬಂದವನು. ಆತ ಡೆಲ್ಲಿ ಬಾಯ್. ಯಾಕೆ ಡೆಲ್ಲಿ ತಂಡ ಸೇರಿಕೊಳ್ಳಬಾರದು. ಆರ್’ಸಿಬಿಯಂತೆ ಅವರೂ ಕೂಡ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿದ್ದಾರೆ” ಎಂದು ಕೆವಿನ್ ಪೀಟರ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಪೀಟರ್ಸನ್ 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು.

ಇದನ್ನೂ ಓದಿ : CSK Honoured Dinesh Karthik : ವಿಶೇಷ ಪೋಸ್ಟರ್’ನೊಂದಿಗೆ ದಿನೇಶ್ ಕಾರ್ತಿಕ್’ಗೆ ವಿದಾಯದ ಗೌರವ ಸಲ್ಲಿಸಿದ ಸಿಎಸ್’ಕೆ!

ಈ ಬಾರಿಯ ಐಪಿಎಲ್’ನಲ್ಲಿ ಅದ್ಭುತ ಆಟವಾಡಿರುವ ವಿರಾಟ್ ಕೊಹ್ಲಿ, ಆಡಿದ 15 ಪಂದ್ಯಗಳಲ್ಲಿ 154.69ರ ಅತ್ಯುತ್ತಮ ಸ್ಟ್ರೈಕ್’ರೇಟ್’ನಲ್ಲಿ 741 ರನ್ ಬಾರಿಸಿದ್ದಾರೆ. 61.75ರ ಅತ್ಯಮೋಘ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಕಿಂಗ್ ಕೊಹ್ಲಿ, ಒಂದು ಶತಕ ಹಾಗೂ 5 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಕೊಹ್ಲಿ ಅವರ ಬ್ಯಾಟ್’ನಿಂದ 62 ಬೌಂಡರಿ ಹಾಗೂ 38 ಸಿಕ್ಸರ್’ಗಳು ಸಿಡಿದಿವೆ.

Virat Kohli wants IPL Cup, he has to leave RCB

Comments are closed.