Story of Saujanya movie : ಸ್ಟೋರಿ ಆಫ್ ಸೌಜನ್ಯ, ತೆರೆಗೆ ಬರಲಿಗೆ ಧರ್ಮಸ್ಥಳ ಸೌಜನ್ಯ ಸಾವಿನ ಸ್ಟೋರಿ

ಬೆಂಗಳೂರು : ಕರಾವಳಿ ಮಾತ್ರವಲ್ಲದೇ ದೇಶದಾದ್ಯಂತ ಸುದ್ದಿಯಾಗಿದ್ದ ಧರ್ಮಸ್ಥಳದ ಸೌಜನ್ಯ ಸಾವಿನ ಪ್ರಕರಣ (Sowjanya Murder case) ಇದೀಗ ತೆರೆಗೆ ಬರಲು ಸಿದ್ದವಾಗಿದೆ. ಸೌಜನ್ಯ ಜೀವಾಧಾರಿತ ಸಿನಿಮಾ ಮಾಡಲು ಜಿಕೆ ವೆಂಚರ್ಸ್‌ ಸಂಸ್ಥೆ ಮುಂದೆ ಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗಾಗಲೇ ಸ್ಟೋರಿ ಆಫ್‌ ಸೌಜನ್ಯ ಸಿನಿಮಾದ (Story of Saujanya movie) ಟೈಟಲ್‌ ನೋಂದಣಿ ಮಾಡಲಾಗಿದೆ.

ಸಾಮಾಜಿಕ ಕಥಾ ಹಂದರವನ್ನು ಹೊಂದಿರುವ ಸಿನಿಮಾವನ್ನು ವಿ.ಲವ ಅವರು ನಿರ್ದೇಶಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅವರನ್ನು 2012 ರ ಅಕ್ಟೋಬರ್‌ 9 ರಂದು ಅಪಹರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೌಜನ್ಯ ಪೋಷಕರು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಮರು ದಿನ ಧರ್ಮಸ್ಥಳ ಸಮೀಪದಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಆಕೆಯನ್ನು ಅಪಹರಿಸಿ ಅತ್ಯಾಚಾರಗೈದು ನಂತರ ಕೊಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು.

ಆರಂಭದಲ್ಲಿ ಪೊಲೀಸರು, ಸಿಐಡಿ ತನಿಖೆ ನಡೆಸಿದ್ದು, ಅಂತಿಮವಾಗಿ ಸಿಬಿಐ ತನಿಖೆಯನ್ನು ನಡೆಸಿತ್ತು. ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಂತೋಷ್‌ ರಾವ್‌ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿತ್ತು. ಆದರೆ ನ್ಯಾಯಾಲಯ ಆರೋಪ ಸಂತೋಷ್‌ ರಾವ್‌ ಅವರನ್ನು ನಿರ್ದೋಷಿ ಎಂದು ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ಪ್ರಕರಣದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ : Sapta Sagaradaache Yello : ಸಿಂಪಲ್‌ ಸ್ಟಾರ್‌ ರಕ್ಷಿತ್‌ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೊದಲ ಸಾಂಗ್ ರಿಲೀಸ್‌

ಇದನ್ನೂ ಓದಿ : Hostel hudugaru bekagiddare : ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿತಂಡಕ್ಕೆ ಶಾಕ್‌ ಕೊಟ್ಟ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಸಂತೋಷ್‌ ರಾವ್‌ ನಿರ್ದೋಷಿ ಎಂದು ಘೋಷಣೆಯಾದ ಬೆನ್ನಲ್ಲೇ ಸೌಜನ್ಯ ಕೊಲೆ ಆರೋಪಿ ಯಾರು ಅನ್ನೋ ಕುರಿತು ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಇದೀಗ ಸೌಜನ್ಯ ಸಾವಿನ ಕುರಿತು ಸಿನಿಮಾವೊಂದು ಸಿದ್ದವಾಗುತ್ತಿರುವುದು ಹಲವು ಕುತೂಹಲ ಮೂಡಿಸಿದೆ. ಸಿನಿಮಾ ಕೇವಲ ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಲಿದ್ಯಾ ಅಥವಾ ಇತರ ಭಾಷೆಗಳಲ್ಲಿಯೂ ನಿರ್ಮಾಣವಾಗಲಿದ್ಯಾ ಅನ್ನೋದು ಕುತೂಹಲ ಮೂಡಿಸಿದೆ.

Story of Saujanya movie : Story of Soujanya, the story of the death of Dharmasthala Soujanya to come to the screen

Comments are closed.