Sudeep invited by Ramya: ರಾಜಕೀಯಕ್ಕೆ ನಟ ಸುದೀಪ್‌ ಎಂಟ್ರಿ: ಕಾಂಗ್ರೆಸ್‌ ಗೆ ಬರುವಂತೆ ರಮ್ಯಾ ಮೂಲಕ ಆಹ್ವಾನ?

ಬೆಂಗಳೂರು: (Sudeep invited by Ramya) ಕರ್ನಾಟಕ ವಿಧಾನಸಭೆ ಚುನಾವಣೆಗಳು ಇನ್ನೇನು ಹತ್ತಿರವಾಗುತ್ತಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಇದೀಗ ನಟ ಸುದೀಪ್‌ ರಾಜಕೀಯಕ್ಕೆ ಎಂಟ್ರಿ ನೀಡುವ ಕುರಿತು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಮಾಜಿ ಸಂಸದೆ ನಟಿ ರಮ್ಯಾ ಮೂಲಕ ಸುದೀಪ್‌ ಗೆ ಕಾಂಗ್ರೆಸ್‌ ಗೆ ಸೇರುವಂತೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.

ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್‌ ಇದೀಗ ನಟ ಸುದೀಪ್‌ ರನ್ನು ಕಾಂಗ್ರೆಸ್‌ ಗೆ ಸೇರುವಂತೆ ರಮ್ಯಾ ಮೂಲಕ ಆಹ್ವಾನ ನೀಡಲಾಗಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಚಿತ್ರರಂಗದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದು, ರಮ್ಯಾ ಹಾಗೂ ಸುದೀಪ್‌ ಒಳ್ಳೆಯ ಸ್ನೇಹಿತರಾಗಿದ್ದರು. ಈ ಕಾರಣದಿಂದ ಸುದೀಪ್‌ ಅವರನ್ನು ಕಾಂಗ್ರೆಸ್‌ ಗೆ ಸೇರಿಸಿಕೊಳ್ಳಲು ಕೈಪಾಳಯ ರಮ್ಯಾ ಅವರ ಮೂಲಕ ಆಹ್ವಾನ ನೀಡುತ್ತಿದೆ.

ಇದಕ್ಕೂ ಮೊದಲು ಖಾಸಗಿ ಹೋಟೆಲ್‌ ನಲ್ಲಿ ಡಿಕೆ ಶಿವಕುಮಾರ್‌ ಹಾಗೂ ಕಿಚ್ಚ ಸುದೀಪ್‌ ಮಾತುಕತೆ ನಡೆಸಿದ್ದು, ಇಬ್ಬರು ಜೊತೆಗೆ ಊಟ ಮಾಡಿದ್ದಾರೆ. ಈ ವೇಳೆ ಚುನಾವಣಾ ಪ್ರಚಾರಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ಸಭೆಗಳಿಗೆ ಬರುವಂತೆ ಕಿಚ್ಚ ಸುದೀಪ್‌ ಗೆ ಡಿಕೆ ಶಿವಕುಮಾರ್‌ ಆಹ್ವಾನಿಸಿದ್ದಾರೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್‌ ಹಾಗೂ ಸುದೀಪ್‌ ಅವರ ಈ ಫೋಟೋ ಸಕತ್‌ ವೈರಲ್‌ ಆಗಿತ್ತು. ಇದೀಗ ಸುದೀಪ್‌ ಅವರನ್ನು ಕೈಪಾಳಯಕ್ಕೆ ಸೇರಿಸಿಕೊಳ್ಳಲು ರಮ್ಯಾ ಅವರನ್ನು ಮುಂದೆ ಬಿಡಲಾಗಿದ್ದು, ಅವರ ಮೂಲಕವೇ ಕಾಂಗ್ರೆಸ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಲು ಮುಂದಾಗಿದೆ.

ಉತ್ತರ ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯ ಬೃಹತ್‌ ಸಂಖ್ಯೆಯಲ್ಲಿದ್ದು, ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದಿಂದ ಶ್ರೀ ರಾಮುಲು ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಮೀಸಲಾತಿ ಪ್ರಮಾಣ ಹೆಚ್ಚಳದಿಂದಾಗಿ ಸಮುದಾಯದ ಮತಗಳು ಬಿಜೆಪಿಯತ್ತ ಧೃವೀಕರಣವಾಗಿದೆ. ಕಾಂಗ್ರೆಸ್‌ ಗೆ ಸುದೀಪ್‌ ಆಗಮಿಸಿದರೆ ವಾಲ್ಮೀಕಿ ಮತಗಳನ್ನು ತನ್ನತ್ತ ಸೆಳೆಯಲು ಸಹಕಾರವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಸುದೀಪ್‌ ಅವರನ್ನು ಕಾಂಗ್ರೆಸ್‌ ಗೆ ಆಹ್ವಾನಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ದಕ್ಷಿಣ ಕನ್ನಡ: ಕುಕ್ಕೆ, ಧರ್ಮಸ್ಥಳಕ್ಕೆ ರಾಜ್ಯಪಾಲರ ಭೇಟಿ

ಇದನ್ನೂ ಓದಿ : ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ 4 ವರ್ಷ ಜೈಲು ಶಿಕ್ಷೆ

ಇದನ್ನೂ ಓದಿ : Narenda Modi : ರಾಜಭವನದಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿದ ಅನಿಲ್ ಕುಂಬ್ಳೆ, ಮಯಾಂಕ್ ಅಗರ್ವಾಲ್

Sudeep invited by Ramya: Actor Sudeep’s entry into politics: Invitation by Ramya to come to Congress?

Comments are closed.