Love Again Movie Trailer : ಗ್ಲೋಬಲ್‌ ಸ್ಟಾರ್‌ ಆದ ನಟಿ ಪ್ರಿಯಾಂಕ ಚೋಪ್ರಾ : “ಲವ್‌ ಅಗೇನ್‌” ಟ್ರೈಲರ್‌ ರಿಲೀಸ್‌

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಈಗ ಗ್ಲೋಬಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಬಾಲಿವುಡ್ ಬಿಟ್ಟು ಹಾಲಿವುಡ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ನಿಕ್ ಜೋನ್ಸ್ ಕೈ ಹಿಡಿದು ಲಾಸ್ ಎಂಜಲೀಸ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಸದ್ಯ ನಟಿ ಪ್ರಿಯಾಂಕ ಚೋಪ್ರಾ ನಟನೆಯ ‘ಲವ್ ಅಗೇನ್’ ಸಿನಿಮಾ (Love Again Movie Trailer) ಟ್ರೈಲರ್ ರಿಲೀಸ್ ಆಗಿದೆ.

ಮೇ 12ಕ್ಕೆ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ‘ಲವ್ ಅಗೇನ್’ ತೆರೆಗೆ ಬರಲಿದೆ. ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ಪ್ರಿಯಾಂಕ ಚೋಪ್ರಾ ಹಾಗೂ ಸಾಮ್ ಹೀಗನ್ ನಟನೆಯ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸಖತ್‌ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಮಿರ ರೇ ಎನ್ನುವ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಜೇಮ್ಸ್ ಸಿ. ಸ್ಟ್ರೂಸ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ಕ್ರೀನ್ ಜೆಮ್ಸ್, ಥಂಡರ್ ರೋಡ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸೋನಿ ಪಿಕ್ಷರ್ಸ್ ಸಂಸ್ಥೆ ಸಿನಿಮಾ ವಿತರಣೆ ಮಾಡುತ್ತಿದೆ.

ಪ್ರತಿಯೊಬ್ಬರ ಕನಸುಗಳು ಅಂತಿಮವಾಗಿ ಹೇಗೆ ಸಾಯುತ್ತವೆ ಎಂದು ಮಿರ ರೇ ಮಾತನಾಡುವ ಮೂಲಕ ‘ಲವ್ ಅಗೇನ್’ ಟ್ರೈಲರ್ ಶುರುವಾಗುತ್ತದೆ. ತನ್ನ ಮಾಜಿ ಪ್ರಿಯಕರನಿಗೆ ಮಿರ ರೇ ಮೆಸೇಜ್ ಮಾಡಲು ಆರಂಭಿಸುತ್ತಾಳೆ. ಆದರೆ ಆ ಫೋನ್ ನಂಬರ್ ಈಗ ರೊಬ್ ಬರ್ನ್ಸ್ ಎನ್ನುವ ಪತ್ರಕರ್ತ ಬಳಸುತ್ತಿರುತ್ತಾನೆ. ಮಿರ ಮೆಸೇಜ್‌ಗಳನ್ನು ಓದುತ್ತಾ ಆಕೆಯ ಪ್ರಾಮಾಣಿಕತೆಗೆ ನೋಡಿ ರೊಬ್ ಆಕೆಯ ಪ್ರೀತಿಯಲ್ಲಿ ಬೀಳುತ್ತಾನೆ. ಇನ್ನು ಸಿನಿಮಾದಲ್ಲಿ ಪ್ರಿಯಾಂಕ ಪತಿ ನಿಕ್ ಜೋನ್ಸ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಆತನ ಜೊತೆ ಡೇಟ್ ಹೋದಾಗ ಏನಾಗುತ್ತದೆ ಎನ್ನುವ ಸಣ್ಣ ಝಲಕ್ ಅನ್ನು ಟ್ರೈಲರ್‌ನಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : Actress Anushka Shetty : ನಟಿ ಅನುಷ್ಕಾ ಶೆಟ್ಟಿಗೆ ವಿಚಿತ್ರ ಸಮಸ್ಯೆ : ಆ ಬಗ್ಗೆ ಸ್ವೀಟಿ ಹೇಳಿದ್ದಿಷ್ಟು

ಇದನ್ನೂ ಓದಿ : Valentine’s Day : ವ್ಯಾಲಂಟೈನ್ಸ್ ಡೇ ಸ್ಪೆಷಲ್ : ಟೀಸರ್ ರಿಲೀಸ್ ಮಾಡಿದ ‘ಬಾನ ದಾರಿಯಲ್ಲಿ’ ಸಿನಿತಂಡ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ಲವ್‌ ಕಹಾನಿ ಬಗ್ಗೆ ನಿಮಗೆಷ್ಟು ಗೊತ್ತು ?

ಕಾರಣಾಂತರಗಳಿಂದ ‘ಲವ್ ಅಗೇನ್’ ಸಿನಿಮಾ ರಿಲೀಸ್ ಡೇಟ್ ಪದೇ ಪದೇ ಪೋಸ್ಟ್‌ಪೋನ್ ಆಗುತ್ತಿದೆ. ‘ಎಸ್‌ಎಂಎಸ್‌ ಪುರ್ ದಿಚ್’ ಎನ್ನುವ ಜರ್ಮನ್ ಸಿನಿಮಾದ ರೀಮೆಕ್ ಇದಾಗಿದೆ. ಪ್ರಿಯಕರನ ಹಠಾತ್ ಸಾವಿನ ನಂತರ ಜೀವನವೇ ನಡೆಸಲು ಹೆಣಗುತ್ತಿರುವ ಮಹಿಳೆಯ ಕಥೆ ಈ ಸಿನಿಮಾದಲ್ಲಿದೆ. ಮತ್ತೊಬ್ಬ ವ್ಯಕ್ತಿ ಬಳಸುತ್ತಿರುವ ಪ್ರಿಯಕರನ ಹಳೇಯ ನಂಬರ್‌ಗೆ ಆಕೆ ಮೆಸೇಜ್‌ಗಳನ್ನು ಕಳುಹಿಸುತ್ತಿರುತ್ತಾಳೆ. ಮುಂದೇನಾಗುತ್ತದೆ ಎನ್ನುವುದು ‘ಲವ್ ಅಗೇನ್’ ಸಿನಿಮಾದ ಒನ್‌ಲೈನ್‌ ಸ್ಟೋರಿ ಆಗಿದೆ.

ಇದನ್ನೂ ಓದಿ : Deepika Das : ದುಬೈ ಟ್ರಿಪ್‌ನಲ್ಲಿ ಕ್ರಿಸ್ ಗೇಲ್ ಜತೆಗಿನ ಫೋಟೊ ಹಂಚಿಕೊಂಡ ದೀಪಿಕಾ ದಾಸ್ : ವೈರಲ್‌ ಆಯ್ತು ಪೋಟೋ

Global Star Actress Priyanka Chopra: Love Again Movie Trailer Released

Comments are closed.