ಸ್ಯಾಂಡಲ್ ವುಡ್ ನಲ್ಲಿ ಸ್ನೇಹ ಅನ್ನೋ ಮಾತು ಬಂದಾಗ ನೆನಪಾಗೋದೇ ಕಿಚ್ಚ ಸುದೀಪ್. ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಕಿಚ್ಚನ ಸ್ನೇಹದ ಹಾದಿ ಸಾಗಿದೆ. ಹಲವು ಬಾಲಿವುಡ್ ನಟರು, ಸೆಲೆಬ್ರೆಟಿಗಳು, ಕ್ರಿಕೆಟಿಗರು ಹೀಗೆ ಸುದೀಪ್ ನ ಸ್ನೇಹ ಲೋಕದಲ್ಲಿ ಎಲ್ಲರೂ ಇದ್ದಾರೆ. ಕೇವಲ ಸ್ನೇಹ ಮಾತ್ರವಲ್ಲ ಸ್ನೇಹಿತರಿಗೆ ಪ್ರೀತಿಯ ಗಿಫ್ಟ್ ಕೊಡೋದರಲ್ಲೂ ಸುದೀಪ್ ಎತ್ತಿದ ಕೈ. ಅಂತಸ್ತು ನೋಡದೇ ಸ್ನೇಹ ಬೆಳೆಸೋ ಸುದೀಪ್ (Sudeep), ಪ್ರೇಂಡ್ ಒಬ್ಬರಿಗೆ ಸುಂದರವಾದ ಗಿಫ್ಟ್ (Mahindra Thar ) ನೀಡಿ ಗಮನ ಸೆಳೆದಿದ್ದಾರೆ.

ಸುದೀಪ್ ಒಂಥರಾ ಕೊಡುಗೈ ದಾನಿಯಿದ್ದಂತೆ ಅದರಲ್ಲೂ ಸ್ನೇಹಿತರಿಗಾಗಿ ಸುದೀಪ್‌ಸದಾ ಮಿಡಿಯುತ್ತಾರೆ. ಈಗಲೂ ಅಷ್ಟೇ ತಮಗೆ ತುಂಬ ಅತ್ಮೀಯವಾದ ಸ್ನೇಹಿತರೊಬ್ಬರಿಗೆ ಸುದೀಪ್ ಬೆಲೆ ಬಾಳುವ ಗಿಫ್ಟ್ ನೀಡಿದ್ದಾರೆ. ವಿಕ್ರಾಂತ್ ರೋಣ’ ಚಿತ್ರದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ಗೆ ಸುದೀಪ್ ಮಹಿಂದ್ರಾ ಥಾರ್ ಗಿಫ್ಟ್ ನೀಡಿದ್ದಾರೆ. ಈ ಫೋಟೋವನ್ನು ಸ್ವತಃ ಜಾನಿ ಮಾಸ್ಟರ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಅವರು ಕಿಚ್ಚನಿಗೆ ಮನಃತುಂಬಿದ ಧನ್ಯವಾದವನ್ನು ಹೇಳಿದ್ದಾರೆ.

ಈ ಪೋಸ್ಟ್ ನೋಡಿದ ಸುದೀಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್‌ಮಾಡಿಕೊಂಡು ಕಿಚ್ಚನ ದೊಡ್ಡತನವನ್ನು ಕೊಂಡಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಜಾನಿ ಮಾಸ್ಟರ್ ಚಿರಪರಿಚಿತರು. ಅವರಿಗೆ ಕನ್ನಡ ಚಿತ್ರರಂಗದ ಜತೆ ಒಳ್ಳೆಯ ನಂಟಿದೆ. ಪುನೀತ್ ನಟನೆಯ ‘ರಾಜಕುಮಾರ’, ‘ನಟಸಾರ್ವಭೌಮ’, ‘ಯುವರತ್ನ’ ಸಿನಿಮಾದ ಕೆಲ ಹಾಡುಗಳಿಗೆ ಜಾನಿ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಟಾಲಿವುಡ್ನ ಹಿಟ್ ಹಾಡುಗಳಲ್ಲೂ ಜಾನಿ ಮಾಸ್ಟರ್ ಕೈ ಚಳಕವಿದೆ. ಇಂತಿಪ್ಪ ಜಾನಿ ಮಾಸ್ಟರ್ ಸುದೀಪ್ ನಟನೆಯ ಬಹುನೀರಿಕ್ಷಿತ ವಿಕ್ರಾಂತ್ ರೋಣ ಸಿನಿಮಾಗೆ ಸಖತ್ ಕೊರಿಯೋಗ್ರಫಿ ಮಾಡಿದ್ದಾರೆ. ಅಲ್ಲದೇ ನಟ ಸುದೀಪ್ ಹಾಗೂ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ಅವರನ್ನು ಕುಣಿಸಿದ್ದಾರೆ.

ಇದೇ ಪ್ರೀತಿಗೆ, ಸ್ನೇಹಕ್ಕೆ ಮಾರುಹೋದ ನಟ ಸುದೀಪ್, ಜಾನಿಗೆ ಪ್ರೀತಿಯಿಂದ ಕಾರು ಗಿಫ್ಟ್ ಮಾಡಿದ್ದಾರೆ. ಇದಕ್ಕೆ ಧನ್ಯವಾದ ಹೇಳಿರೋ ಜಾನಿಮಾಸ್ಟರ್, ‘ಕಿಚ್ಚ ಸುದೀಪ್ ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಖುಷಿ ನೀಡಿದೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ. ಈ ಹಿಂದೆ ಸುದೀಪ್ ತಮ್ಮ ಆಪ್ತ ಸಹಾಯಕನಿಗೆ ಹುಟ್ಟುಹಬ್ಬದ ವೇಳೆ ಅವರ ಕನಸಿನ ಬುಲೆಟ್ ಬೈಕ್ ಕೊಡಿಸಿ ಸಪ್ರೈಸ್ ಮಾಡಿದ್ದರು. ಸದ್ಯ ಸುದೀಪ್ ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ, ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ರಿಲೀಸ್ ಗೆ ಕಾದಿದ್ದಾರೆ.
Thank You for the Gift @KicchaSudeep sir & family ❤
— Jani Master (@AlwaysJani) March 25, 2022
The way you Treat me & Take care of me make me feel blessed 😇
Will always love you Sir, Happy to have you in my life 🙏🏼 pic.twitter.com/0U2Ldpv32A
ಇದನ್ನೂ ಓದಿ : ಕೊನೆಗೂ ರಟ್ಟಾಯ್ತು ಖ್ಯಾತ ನಟಿಯ ಗುಟ್ಟು : ಕಮಲ್ ಪುತ್ರಿ ಕೈಹಿಡಿದಿದ್ದ್ಯಾರು ಗೊತ್ತಾ
#VikrantRonaInEnglish @KicchaSudeep sir completes dubbing for the English version. First Kannada superstar & one of the few from India to dub for a full fledged commercial movie in English #VikrantRоna pic.twitter.com/xXAvJgAmts
— Anup Bhandari (@anupsbhandari) March 2, 2022
ಇದನ್ನೂ ಓದಿ : ಆರ್‌ಆರ್‌ಆರ್‌ಗಾಗಿ ಬಲಿಯಾಗುತ್ತಾ ಜೇಮ್ಸ್ ಚಿತ್ರ : ಖಡಕ್ ಎಚ್ಚರಿಕೆ ಕೊಟ್ಟ ಕರವೇ
( Sudeep Mahindra Thar Gift to dance master)