Spam calls : ಅಪರಿಚಿತ ಕರೆಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ? ಈ ರೀತಿ ಮಾಡಿದರೆ ಅಪರಿಚಿತ ಕರೆಗಳಿಂದ ದೂರವಿರಬಹುದು

ದಿನದಿಂದ ದಿನಕ್ಕೆ ಸ್ಮಾರ್ಟ್‌ಫೋನ್‌ಗೆ ಬರುವ ಅಪರಿಚಿತ ಕರೆಗಳು(Spam calls ) ಬಹುಷಃ ಅತ್ಯಂತ ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತವೆ. ಈ ಅಪರಿಚಿತ ಕರೆಗಳು ನಿಮ್ಮ ಮೂಡ್‌ ಅಷ್ಟೇ ಅಲ್ಲ ವೈಯಕ್ತಿಕ ಸಮಯವನ್ನೂ ಹಾಳುಮಾಡುತ್ತವೆ. ಸ್ಮಾರ್ಟ್‌ಫೋನ್‌ ಹೊಂದಿರುವವರು ನಿಯಮಿತವಾಗಿ ಅಪರಿಚಿತ ಕರೆಗಳನ್ನು ಸ್ವೀಕರಿಸುತ್ತಿದ್ದರೂ ಅದರಿಂದ ಪಾರಾಗುವ ಮಾರ್ಗಗಳು ಎಷ್ಟೋ ಜನರಿಗೆ ತಿಳಿದಿರಲಿಕ್ಕಿಲ್ಲ. ಹಾಗಾದರೆ ಇಲ್ಲಿ ಹೇಳಿರುವ ಟಿಪ್ಸ್‌ ಅನುಸರಿಸಿ ಅಪರಿಚಿತ ಕರೆಗಳಿಂದ ದೂರವಿರಿ.

ಅಪರಿಚಿತ ಕರೆಗಳು ಹೆಚ್ಚು ಕಡಿಮೆ ಅಪರಿಚಿತ ಇಮೆಲ್‌ಗಳಂತೆಯೇ ಇರುತ್ತವೆ. ಅವೆರಡೂ ಅನಗತ್ಯ ಸಂವಹನಗಳಾಗಿವೆ. ಎಲ್ಲಾ ಸಂದರ್ಭಗಳಲ್ಲಿಯೂ ಅವುಗಳಿಂದ ದೂರವಿರಲೇಕು. ಆದರೆ ಕೆಲವೊಮ್ಮ ಈ ಅಪರಿಚಿತ ಕರೆಗಳು ಅಥವಾ ಇಮೇಲ್‌ಗಳು ಆಗಾಗ ಅಡಚಣೆಯನ್ನು ನಿರಂತರವಾಗಿ ಮಾಡಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ಸೆಟ್ಟಿಂಗ್ಸ್‌ ಮಾಡಿಕೊಳ್ಳುವುದರಿಂದ ಈ ಅಪರಿಚಿತ ಕರೆಗಳಿಂದ ದೂರವಿರಬಹುದು.

ಕಾಲ್‌ ಫಾರ್ವರ್ಡಿಂಗ್‌ ವೈಶಿಷ್ಟ್ಯ ಉಪಯೋಗಿಸಿ:
ಅಪರಿಚಿತ ಕರೆಗಳಿಂದ ನಿಮಗೆ ಕೋಪ ಬರುತ್ತಿದ್ದರೆ ಅದಕ್ಕೆ ಉತ್ತಮ ಮಾರ್ಗ ಕಾಲ್‌ ಫಾರ್ವರ್ಡಿಂಗ್‌ ವೈಶಿಷ್ಟ್ಯ. ಇದನ್ನು ಸಕ್ರಿಯಗೊಳಿಸುವುದರ ಮೂಲಕ ಅಪರಿಚಿತ ಕರೆಗಳ ತೊಂದರೆಯಿಂದ ದೂರವಿರಬಹುದು.

ಕಾಲ್ ಫಾರ್ವರ್ಡಿಂಗ್‌ ವೈಶಿಷ್ಟ್ಯ ಸಕ್ರಿಯಗೊಳಿಸಲು ಹೀಗೆ ಮಾಡಿ–

  • ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ ಅದರಲ್ಲಿ ಕಾಲ್‌ ಫಾರ್ವರ್ಡಿಂಗ್‌ ಎಂದು ಸರ್ಚ್‌ ಮಾಡಿ.
  • ಅದರಲ್ಲಿ ನಿಮಗೆ ಮೂರು ಹೆಚ್ಚುವರಿ ಆಪ್ಷನ್‌ಗಳು ಕಾಣಿಸುತ್ತವೆ.
  • ಆಲವೇಸ್‌ ಫಾರ್ವರ್ಡ್‌, ಫಾರ್ವರ್ಡ್ ವೆನ್‌ ಬೀಸಿ ಮತ್ತು ಫಾರ್ವರ್ಡ್‌ ವೆನ್‌ ಅನ್‌ಅಟೆಂಡ್‌ ಅನ್ನುವ ಮೂರು ಆಪ್ಷನ್‌ಗಳಲ್ಲಿ ಆಲವೇಸ್‌ ಫಾರ್ವರ್ಡ್‌ ಆಪ್ಷನ್‌ ಆಯ್ದುಕೊಳ್ಳಿ.
  • ಮೊಬೈಲ್‌ ಸಂಖ್ಯೆ ನಮೂದಿಸಿ.
  • ನಂತರ ಆಲವೇಸ್‌ ಫಾರ್ವರ್ಡ್‌ ಆಪ್ಷನ್‌ ಸಕ್ರಿಯಗೊಳಿಸಿ.

ಇದನ್ನೂ ಓದಿ: WhatsApp ನಲ್ಲಿ ಈಗ ನೀವೇ ಸ್ಟಿಕ್ಕರ್‌ ಕ್ರಿಯೇಟ್‌ ಮಾಡಬಹುದು! ಹೇಗೆ ಅನ್ನುತ್ತೀರಾ

ಕಾಲ್‌ ಬಾರಿಂಗ್‌ ವೈಶಿಷ್ಟ್ಯ ಉಪಯೋಗಿಸಿ:
ತೊಂದರೆ ಕೊಡುವ ಅಪರಿಚಿತ ಕರೆಗಳನ್ನು ಸ್ಥಗಿತಗೊಳಿಸಲು ಇರುವ ಮತ್ತೊಂದು ವೈಶಿಷ್ಟ್ಯವೆಂದರೆ ಕಾಲ್‌ ಬಾರಿಂಗ್‌ ಆಪ್ಷನ್‌.

ಕಾಲ್‌ ಬಾರಿಂಗ್‌ ವೈಶಿಷ್ಟ್ಯ ಸಕ್ರಿಯಗೊಳಿಸಲು ಹೀಗೆ ಮಾಡಿ–

  • ನಿಮ್ಮ ಸ್ಮಾರ್ಟ್‌ಫೋನ್‌ನ ಕಾಲ್‌ ಸೆಟ್ಟಿಂಗ್ಸ್‌ ತೆರೆಯಿರಿ.
  • ಅದರಲ್ಲಿ ಕಾಲ್‌ ಬಾರಿಂಗ್‌ ಆಪ್ಷನ್‌ ಆಯ್ದುಕೊಳ್ಳಿ.
  • ಅಲ್ಲಿ ಆಲ್‌ ಇನ್‌ಕಮಿಂಗ್‌ ಕಾಲ್‌ ಆಯ್ದುಕೊಳ್ಳಿ ಮತ್ತು ಕಾಲ್‌ ಬಾರಿಂಗ್‌ ಪಾಸವರ್ಡ್‌ ಉಪಯೋಗಿಸಿ.
  • ಸಾಮಾನ್ಯವಾಗಿ ಆ ಪಾಸವರ್ಡ್‌ 0000 ಅಥವಾ 1234 ಅನ್ನೇ ತೆಗೆದುಕೊಳ್ಳಿ.
  • ಕಡೆಯದಾಗಿ ಆ ವೈಶಿಷ್ಟ್ಯವನ್ನು ಆನ್‌ ಮಾಡಿ.
    ಕಾಲ್‌ ಬಾರಿಂಗ್‌ನಲ್ಲಿ ಇನ್ನೂ ಹಲವು ಆಪ್ಷನ್‌ಗಳಿವೆ. ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ಉಪಯೋಗಿಸಿಕೊಳ್ಳಿ. ಅದರ ಮಾಹಿತಿಯನ್ನು ಸೆಟ್ಟಿಂಗ್ಸ್‌ಗಳಿಲ್ಲಿ ಓದಿ ತಿಳಿಯಿರಿ.

ಇದನ್ನೂ ಓದಿ: WhatsApp Payments : ವಾಟ್ಸಾಪ್ ಪೇಮೆಂಟ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸೋದು ಹೇಗಂತಿರ;ಇಲ್ಲಿದೆ ಸಂಪೂರ್ಣ ಮಾಹಿತಿ

(Spam Calls some tricks to avoid unnecessary calls)

Comments are closed.