Metro train : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕಹಿ ಸುದ್ದಿ: ಮಾರ್ಚ್ 26 ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು : ನಾಳೆ ವೀಕೆಂಡ್ ಇದೆ. ಹಾಯಾಗಿ ಸಿಟಿ ಸುತ್ತಾಡಿ ಲಾಸ್ಟ್ ಬಸ್ ತರ, ಲಾಸ್ಟ್ ಮೆಟ್ರೋ ಹತ್ಕೊಂಡು ಮನೆಗೆ ಹೋಗೋಣ ಅಂತ ನೀವೇನಾದ್ರೂ ಪ್ಲ್ಯಾನ್ ಮಾಡಿದ್ರೇ, ಆ ಪ್ಲ್ಯಾನ್ ಬದಲಾಯಿಸಿಕೊಳ್ಳಿ ಯಾಕಂದ್ರೆ ನಾಳೆ ನಮ್ಮ ಮೆಟ್ರೋದ ನೆರಳೆ (Metro train) ಮಾರ್ಗ ರಾತ್ರಿ 9.30 ರ ಬಳಿಕ ಸ್ಥಗಿತಗೊಳ್ಳಲಿದೆ. ಹೌದು ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳಿಸಲು ನಮ್ಮ ಮೆಟ್ರೋ ನಿರ್ಧರಿಸಿದೆ.

ಮಾರ್ಚ್ 26ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗೂ ಮಾ.26ರಂದು ರಾತ್ರಿ 9.30 ರಿಂದ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. ಎಂ.ಜಿ.ರಸ್ತೆ, ಕೆಂಗೇರಿ ನಡುವೆ ನಮ್ಮ ಮೆಟ್ರೋ (Metro train) ಸಂಚರಿಸಲಿದೆ. ಕೆಂಗೇರಿ-ಬೈಯಪ್ಪನಹಳ್ಳಿ ಕಡೆಗೆ 9 ಗಂಟೆಗೆ ಕೊನೇ ರೈಲು ಹೊರಡುತ್ತೆ. ಆದರೆ ಎಂ.ಜಿ.ರಸ್ತೆಯಿಂದ ಬೈಯ್ಯಪ್ಪನಳ್ಳಿಯವರೆಗೆ ಮಾತ್ರ ಈ ಆದೇಶ ಜಾರಿಯಾಗಿರಲಿದೆ.

ಭಾನುವಾರದಿಂದ ನೇರಳೆ ಮಾರ್ಗದಲ್ಲಿ ಬೆಳಗ್ಗೆ 7 ರಿಂದ ಆರಂಭವಾಗಲಿದೆ. ಹಸಿರು ಮಾರ್ಗದ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕುರಿತು ಬಿಎಂಆರ್ಸಿಎಲ್ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಮಾರ್ಚ್ 26ರ ಶನಿವಾರ ರಾತ್ರಿ 9.30 ಗಂಟೆಯಿಂದ, ಇಂದಿರಾನಗರ ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಈ‌ ಮಾರ್ಗ ದಲ್ಲಿ ಕೊನೆಯ ಮೆಟ್ರೋ ರಾತ್ರಿ 9.30 ಕ್ಕೆ‌ಸಂಚರಿಸಲಿದೆ.

ಈ ಹಿನ್ನಲೆಯಲ್ಲಿ ನೇರಳೆ ಮಾರ್ಗದ ಎಂಜಿ ರಸ್ತೆ, ಮೆಟ್ರೋ ನಿಲ್ದಾಣದಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆ ಶನಿವಾರದಿಂದ ಭಾನುವಾರ ಬೆಳಿಗ್ಗೆ 7 ಗಂಟೆಯವರೆಗೆ ಸ್ಥಗಿತಗೊಳ್ಳಲಿದೆ. ಭಾನುವರ ಬೆಳಿಗ್ಗೆ 7 ಗಂಟೆಯ ನಂತ್ರ, ಎಂದಿನಂತೆ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ (Metro train) ಸಂಚಾರ ಸೇವೆ ಎಂದಿನಂತೆ ಅರಂಭವಾಗಲಿದೆ.

ಇತ್ತೀಚಿಗೆ ಎಂಜಿ ರಸ್ತೆ ಭಾಗದ ಮೆಟ್ರೋ ದಲ್ಲಿ ಆಗಾಗ ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ‌ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ವೀಕೆಂಡ್ ವೇಳೆಯಲ್ಲೇ ಬಿಎಂಆರ್ಸಿಎಲ್ ಈ ರಿಪೇರಿ ಕಾರ್ಯ‌ ನಡೆಸುತ್ತಿದೆ. ಕೊರೋನಾ ಬಳಿಕ ಮೆಟ್ರೋ (Metro train) ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮೆಟ್ರೋ ನಷ್ಟದಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ : ಸಂಬಳಕ್ಕಾಗಿ ಸಾಲ, ಬಸ್‌ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ

ಇದನ್ನೂ ಓದಿ : ಕೆಎಎಸ್‌ ಅಧಿಕಾರಿ ಕೆ.ರಂಗನಾಥ್‌ ಮನೆ ಮೇಲೆ ಎಸಿಬಿ ದಾಳಿ

( Metro train breakdown on purple route)

Comments are closed.