ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಸುಗಂಧಿ’

0

ಚಿತ್ರಗಳು : ಎ.ಕೆ.ಐತಾಳ್ ಸಾಲಿಗ್ರಾಮ

ಕರಾವಳಿಯ ಗಂಡು ಕಲೆ ಯಕ್ಷಗಾನದ ಆಕರ್ಷಿತವಾಗೋ ಹಿಂದುಳಿದ ವರ್ಗದ ಮಗುವೊಂದು ಯಕ್ಷಗಾನ ಕಲಿಕೆಗೆ ಪಡುವ ಪಾಡು, ಎದುರಾಗೋ ಸಂಕಷ್ಟ… ಕೊನೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರನ್ನು ಆದರ್ಶರನ್ನಾಗಿಸಿಕೊಂಡು ಯಕ್ಷಗಾನದಲ್ಲಿ ಆಕೆ ಮಾಡುವ ಸಾಧನೆಯ ಬಗ್ಗೆ ಬೆಳಕು ಚೆಲ್ಲುವ ವಿಭಿನ್ನ ಸಿನಿಮಾವೇ ‘ಸುಗಂಧಿ’.

ನೆನಪು ಮೂವೀಸ್ ಕೋಟ ಲಾಂಛನದಲ್ಲಿ ಮೂಡಿಬಂದಿರೋ ಸುಗಂಧಿ ಚಲನಚಿತ್ರ ಇದೀಗ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಸದಾ ಒಂದಿಲ್ಲೊಂದು ಪ್ರಯೋಗಗಳನ್ನು ನಡೆಸೋ ಖ್ಯಾತ ಸಾಹಿತಿ ನರೇಂದ್ರ ಕುಮಾರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಸುಗಂಧಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಸುಗಂಧಿಗೆ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶ ಜಿ. ಮೂರ್ತಿ ನಿರ್ದೇಶನ ಮಾಡಿದ್ದಾರೆ. ನಿಮಾರಂಗದ ಸಾಧಕ ಕಲಾವಿದರನ್ನ, ತಂತ್ರಜ್ಞರನ್ನು ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.

ಖ್ಯಾತ ಕೊಳಲು ವಾದ ಪ್ರವೀಣ್ ಗೋಡ್ಖಿಂಡಿ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದ ಹಾಡುಗಳು ಕಿವಿಗೆ ಇಂಪು ನೀಡುತ್ತಿವೆ. ಇನ್ನು ಪಿ.ಕೆ.ದಾಸ್ ಕ್ಯಾಮರಾ ಕೈಚಳಕದಲ್ಲಿ ಸುಗಂಧಿ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ.

ಸಂಜೀವ ರೆಡ್ಡಿ ಸಂಕಲದ ಹೊಣೆ ಹೊತ್ತಿದ್ರೆ, ರವಿ ಪೂಜಾರಿ, ಖಾನ್ ಸಂಗೀತ, ನರೇಂದ್ರ ಕುಮಾರ್ ಹಾಗೂ ಸತೀಶ್ ವಡ್ಡರ್ಸೆ ಅವರ ಸಂಭಾಷಣೆಯಲ್ಲಿ ಚಿತ್ರಪ್ರಿಯರಿಗೆ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲಾ.

ಸಿನಿಮಾದ ಮುಖ್ಯಭೂಮಿಕೆಯಲ್ಲಿ ಹಿರಿಯ ನಟಿ ವಿನಯ ಪ್ರಸಾದ್, ಯಕ್ಷಗುರು ಸಂಜೀವ ಸುವರ್ಣ ಹಾಗೂ ವೈಷ್ಣವಿ ಅಡಿಗ ಸಾಸ್ತಾನ ಅಭಿನಯಿಸಿದ್ದಾರೆ.

ಅಂಬಲಪಾಡಿಯ ಡಾ.ವಿಜಯಬಲ್ಲಾಳ್, ಉದ್ಯಮಿ ಆನಂದ ಕುಂದರ್ ಕೋಟ, ಸಾಹಿತಿ ನೀಲಾವರ ಸುರೇಂದ್ರ ಅಡಿಗ ಸೇರಿದಂತೆ ಹಲವರು ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಕರಾವಳಿ ನಿಸರ್ಗ ಸೌಂದರ್ಯ, ಕಲೆ, ಸಂಸ್ಕೃತಿ, ಆಚಾರ ವಿಚಾರವನ್ನು ಒಳಗೊಂಡಿರೋ ಸುಗಂಧಿ ಚಲನಚಿತ್ರದಲ್ಲಿ ಬಹುತೇಕ ಸ್ಥಳೀಯ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಕಾರ್ಯಕಾರಿ ನಿರ್ಮಾಪಕರಾಗಿ ಪ್ರಶಾಂತ್ ಕುಂದರ್, ಸಹ ನಿರ್ಮಾಪಕರಾಗಿ ಪ್ರಕಾಶ್ ಪೂಜಾರಿ, ಮಾಧವ ಪೂಜಾರಿ, ಕಲ್ಪನಾ ಭಾಸ್ಕರ್, ಬಸವ ಪೂಜಾರಿ, ರಾಜಶೇಖರ್ ಕೋಟ, ರಾಘವೇಂದ್ರ ರಾಜ್, ಸುಬ್ರಾಯ ಆಚಾರ್ಯ, ಅಲೆನ್ ರೋಹನ್ ವಾಜ್, ಸುಬ್ರಹ್ಮಣ್ಯ ಶೆಟ್ಟಿ, ಬಾಲಕೃಷ್ಣ ಕೊಡವೂರು ಸಹಕರಿಸಿದ್ದಾರೆ.

ಚಿತ್ರವನ್ನು ಸಂಪೂರ್ಣವಾಗಿ ಉಡುಪಿ, ಉತ್ತರಕನ್ನಡ ಜಿಲ್ಲೆಯ ಕರಾವಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.

ಯಕ್ಷಗಾನಕ್ಕೆ ಸಾಹಿತಿ ಡಾ.ಶಿವರಾಮ ಕಾರಂತರ ಕೊಡುಗೆ ಅಪಾರ. ಯಕ್ಷಗುರುವಾಗಿ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಶಿವರಾಮ ಕಾರಂತರು ಹಗಲಿರುಳು ಪ್ರಯತ್ನಿಸಿದ್ದಾರೆ.

ಅನೇಕ ಕಲಾವಿದರನ್ನು ಯಕ್ಷರಂಗಕ್ಕೆ ಪರಿಚಯಿಸಿದ ಕಾರಂತರು, ಜಾತಿ ಬೇಧವಿಲ್ಲದೇ ಯಕ್ಷಕಲೆಯನ್ನು ಧಾರೆಯೆರೆದಿದ್ದಾರೆ.

ಯಕ್ಷ ಗುರುಗಳಾದ ಸಂಜೀವ ಸುವರ್ಣ ಅವರು ಯಕ್ಷಗಾನ ಕಲೆಯನ್ನು ಕಲಿಸುವ ಬಗೆ, ನೃತ್ಯ, ಭಾವನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನೆನಪು ಮೂವೀಸ್ ನಿರ್ಮಾಣ ಮಾಡಿರೋ ಮೊದಲ ಚಿತ್ರವೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರೋದಕ್ಕೆ ಚಲಚಿತ್ರದ ನಿರ್ಮಾಪಕರಾದ ನರೇಂದ್ರ ಕುಮಾರ್ ಹಾಗೂ ಚಿತ್ರತಂಡಕ್ಕೆ ಖುಷಿಯನ್ನು ನೀಡಿದೆ.

ಸದ್ಯದಲ್ಲಿಯೇ ಸುಗಂಧಿ ತೆರಕಾಣಲಿದ್ದು, ಪ್ರೇಕ್ಷಕರು ಕೂಡ ಚಲನಚಿತ್ರ ನೋಡಲು ಕಾತರರಾಗಿದ್ದಾರೆ.

Leave A Reply

Your email address will not be published.