Sunny Leone in UI Movie : ಸದ್ದಿಲ್ಲದೇ ಉಪೇಂದ್ರ ಸಿನಿಮಾಕ್ಕೆ ಕಾಲಿಟ್ಟ ಹಾಟ್‌ ತಾರೆ ಸನ್ನಿ ಲಿಯೋನ್‌

ಸ್ಯಾಂಡಲ್‌ವುಡ್‌ನ ರಿಯಲ್‌ ಸ್ಟಾರ್‌ ಉಪೇಂದ್ರ “ಕಬ್ಜ” ಹಾಗೂ “ಯುಐ” ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ (Sunny Leone in UI Movie ) ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ “ಯುಐ” ಸಿನಿಮಾಕ್ಕೆ ಸದ್ದಿಲ್ಲದೇ ಬಾಲಿವುಡ್‌ನ ಹಾಟ್‌ ಬೆಡಗಿ ಸನ್ನಿ ಲಿಯೋನ್‌ ಎಂಟ್ರಿ ಕೊಟ್ಟಿದ್ದಾರೆ. ಸನ್ನಿ ಲಿಯೋನ್‌ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಅದರ ಶೂಟಿಂಗ್‌ ಕೂಡ ಮುಗಿದಿದೆ ಎಂದು ತಿಳಿಸಿದ್ದಾರೆ.

ಪಡ್ಡೆ ಹುಡುಗರ ನಿದ್ದೆಗೆಡಿಸಲೆಂದು ಈ ಸಿನಿಮಾದ ಮೂಲಕ ಮತ್ತೊಮ್ಮೆ ಸನ್ನಿ ಲಿಯೋನ್‌ ಕನ್ನಡ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ನಟಿ ಸನ್ನಿ ಲಿಯೋನ್‌ ಸಿನಿಮಾದಲ್ಲಿ ನಟಿಸಿದ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆದಿದೆ. ಯುಐ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ತೆರೆ ಮೇಲೆ ತುಂಬಾ ಹೊತ್ತು ಇರುತ್ತಾರೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೂ ಸನ್ನಿ ಲಿಯೋನ್‌ ಕನ್ನಡ ಸಿನಿರಂಗದಲ್ಲಿ ಕೇವಲ ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಸಿನಿಮಾತಂಡವು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿರುವುದಿಲ್ಲ.

ತುಂಬಾ ವರ್ಷದ ಬಳಿಕ ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಕ್ಕಾಗಿ ಅಪರೂಪದ ಕಥೆಯನ್ನು ಹಣೆದಿದ್ದಾರೆ. ಇನ್ನೂ ಸಿನಿಮಾದಲ್ಲಿ ಉಪೇಂದ್ರ ಪಾತ್ರ ಹೊಸ ರೀತಿಯಲ್ಲಿ ಇದ್ದು, ಅಷ್ಟೇ ಅಲ್ಲದೇ ಹೆಸರಾಂತ ಬಹು ತಾರಾಗಣವಿದೆ. ಇನ್ನೂ ಈ ಸಿನಿಮಾದಲ್ಲಿ ನೂರಕ್ಕೂ ಅಧಿಕ ಕಲಾವಿದರು ನಟಿಸುತ್ತಾ ಇರುವುದು ಮತ್ತೊಂದು ವಿಶೇಷವಾಗಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್‌ ಹಾಗೂ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು ಸಿನಿಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲವನ್ನು ಮೂಡಿಸಿದೆ.

ಇದನ್ನೂ ಓದಿ : Sapthami Gowda Abhishek Ambareesh : ಅಭಿಷೇಕ್‌ ಅಂಬರೀಶ್‌ ಕಾಳಿ ಸಿನಿಮಾಗೆ ಕಾಂತಾರ ಬೆಡಗಿ ಸಪ್ತಮಿ ನಾಯಕಿ

ಇದನ್ನೂ ಓದಿ : Vikram Gokhale Passes Away : ಬಾಲಿವುಡ್‌ನ ಹಿರಿಯ ನಟ ವಿಕ್ರಮ್ ಗೋಖಲೆ 77 ನೇ ವಯಸ್ಸಿನಲ್ಲಿ ವಿಧಿವಶ

ಇದನ್ನೂ ಓದಿ : Aditi Prabhudeva : ಅದಿತಿ ಪ್ರಭುದೇವ ಅರಶಿನ ಶಾಸ್ತ್ರ : ಪೋಟೋ ವೈರಲ್

ಇದನ್ನೂ ಓದಿ : “Mary” First Look poster: “ಆನ” ನಿರ್ದೇಶಕರ ಹೊಸ ಪ್ರಯತ್ನ: “ಮೇರಿ” ಫಸ್ಟ್‌ ಲುಕ್‌ ಪೋಸ್ಟರ್ ಬಿಡುಗಡೆ

ಸ್ಯಾಂಡಲ್‌ವುಡ್‌ನ ಹಲವಾರು ಹಾಡುಗಳಲ್ಲಿ ಸನ್ನಿ ಲಿಯೋನ್‌ ಕಾಣಿಸಿಕೊಂಡಿದ್ದರೂ, ಜೋಗಿ ಪ್ರೇಮ್‌ ಸಿನಿಮಾದ ಶೇಷಮ್ಮ ಹಾಡಿನ ಮೂಲಕ ಸಖತ್‌ ಫೇಮಸ್‌ ಆಗಿದ್ದಾರೆ. ಯುಐ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತಷ್ಟು ಕನ್ನಡ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಖಚಿತ. ಈಗಾಗಲೇ ಶೂಟಿಂಗ್‌ ಮುಗಿಸಿಕೊಂಡಿರುವ ಸನ್ನಿ ಲಿಯೋನ್‌ ಅಭಿಮಾನಿಗಳಗೆ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದಾರೆ.

Sunny Leone in UI Movie : Hot star Sunny Leone entered Upendra’s movie quietly

Comments are closed.