drugs case : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಇನ್ನೂ ನಿಗೂಢವಾಗಿಯೇ ಇದೆ. ಮುಂಬೈ ಎನ್ಸಿಬಿ ಈಗಾಗಲೇ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದು ಸಾಕಷ್ಟು ಸೆಲೆಬ್ರಿಟಿಗಳ ಡ್ರಗ್ ದಂಧೆಯನ್ನೂ ಬಟಾಬಯಲಾಗಿಸಿದೆ. ಇದೀಗ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯಲ್ಲಿ ಮಹತ್ವದ ಬದಲಾವಣೆ ಎಂಬಂತೆ ತಲೆಮರೆಸಿಕೊಂಡಿದ್ದ ಸುಶಾಂತ್ ಸಿಂಗ್ ರಜಪೂತ್ರ ನೆರೆಮನೆಯವನಾಗಿದ್ದ ಸಾಹಿಲ್ ಶಾ ಅಲಿಯಾಸ್ ಫ್ಲಾಕೋವನ್ನು ಡ್ರಗ್ ಕೇಸ್ನಲ್ಲಿ ಎನ್ಸಿಬಿ ಬಂಧಿಸಿದೆ.
ಎನ್ಸಿಬಿ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಸಾಹಿಲ್ ಶಾ ತಾನೇ ಎನ್ಸಿಬಿ ಎದುರು ಶರಣಾಗಿದ್ದಾರೆ ಎನ್ನಲಾಗಿದೆ. ಡ್ರಗ್ ರಾಕೆಟ್ನಲ್ಲಿ ಸಾಹಿಲ್ ಶಾ ಹೆಸರು ಕೇಳಿ ಬಂದ ಬಳಿಕ ಬರೋಬ್ಬರಿ ಆರು ತಿಂಗಳುಗಳ ಕಾಲ ಈತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಸಂಶಯಾಸ್ಪದ ಸಾವು ಪ್ರಕರಣದ ತನಿಖೆಯ ವೇಳೆ ಸಾಹಿಲ್ ಶಾ ಹೆಸರು ಮೊದಲು ಕೇಳಿ ಬಂದಿತ್ತು. ಮುಂಬೈ ಮಲಾಡ್ ಏರಿಯಾದಲ್ಲಿ ಸುಶಾಂತ್ ವಾಸವಾಗಿದ್ದ ವೇಳೆಯಲ್ಲಿ ಸಾಹಿಲ್ ಸುಶಾಂತ್ರ ನೆರೆಮನೆಯವರಾಗಿದ್ದರು ಎನ್ನಲಾಗಿದೆ.
ಸಾಹಿಲ್ ಶಾ ಸಾಕಷ್ಟು ಡ್ರಗ್ ಪೆಡ್ಲರ್ಗಳ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಬಾಲಿವುಡ್ನ ಸಾಕಷ್ಟು ಜನಪ್ರಿಯ ತಾರೆಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಎನ್ನಲಾಗಿದೆ. ನಟ ಸುಶಾಂತ್ ಸಿಂಗ್ ರಜಪೂತ್ರಿಗೂ ಈತನೇ ಡ್ರಗ್ ಸಪ್ಲೈ ಮಾಡಿದ್ದ ಎನ್ನಲಾಗಿದೆ.
ಎನ್ಸಿಬಿ ಈಗಾಗಲೇ ವಿಚಾರಣೆಗೆ ಒಳಪಡಿಸಿರುವ ಡ್ರಗ್ ಪೆಡ್ಲರ್ಗಳು ಸಾಹಿಲ್ ಶಾ ಅಲಿಯಾಸ್ ಫ್ಲಾಕೋ ಹೆಸರನ್ನು ಬಾಯ್ಬಿಟ್ಟಿದ್ದಾರೆ. ಈತ ವಿಡಿಯೋ ಕಾಲ್ ಮೂಲಕ ಡ್ರಗ್ ಪೆಡ್ಲರ್ಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದ ಹಾಗೂ ಎಂದಿಗೂ ಮುಖವನ್ನು ಮುಚ್ಚಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಎನ್ಸಿಬಿ ಎದುರು ಸಾಹಿಲ್ ಶಾ ಶರಣಾಗುತ್ತಿದ್ದಂತೆಯೇ ಆತನನ್ನ ಬಂಧಿಸಲಾಗಿದೆ. ಪ್ರಸ್ತುತ ಸಾಹಿಲ್ ಶಾ ನ್ಯಾಯಾಂಗ ಬಂಧನಲ್ಲಿದ್ದು ಎನ್ಸಿಬಿಗೆ ಒಂದು ದಿನದ ಕಸ್ಟಡಿ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ
ಇದನ್ನೂ ಓದಿ : Yadiyurappa grand daughter suicide : ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು
NCB arrests Sushant Singh Rajput’s absconding neighbour in drugs case