Face ID Unlock with Mask: ಫೇಸ್‌ ಮಾಸ್ಕ್ ಇದ್ದರೂ ಫೋನ್ ಅನ್‌ಲಾಕ್ ಮಾಡಿ!

ಆಪಲ್ ಐಓಎಸ್ ತನ್ನ 15.4, ಐಪ್ಯಾಡ್ ಒಎಸ್ 15.4, ಮತ್ತು ಮಾಕ್ ಒಎಸ್ ಮೊಂಟೆರೇ 12.3(macOS Monterey 12.3 )ರ ಮೊದಲ ಬೀಟಾ ಡೆವಲಪರ್ ಬಿಡುಗಡೆ ಮಾಡಿದೆ. ಐಒಎಸ್ 15.4 ರ ಇತ್ತೀಚಿನ ಬೀಟಾ ಬಿಡುಗಡೆಯು ತರುವ ದೊಡ್ಡ ಬದಲಾವಣೆಗಳಲ್ಲಿ ಮುಖ್ಯವಾಗಿ ಏನೆಂದರೆ, ಫೇಸ್ ಮಾಸ್ಕ್ ಧರಿಸಿರುವಾಗ ಸಹ ಫೇಸ್ ಐಡಿಯನ್ನು ಬಳಸಿಕೊಂಡು ನಿಮ್ಮ ಐಫೋನ್ ಅನ್ನು ಅನ್‌ಲಾಕ್ ಮಾಡಬಹುದು. ಐಪಾಡ್ಒಎಸ್ 15.4 (iPadOS 15.4) ಮತ್ತು ಮಾಕ್ ಒಎಸ್ 12.3 ( macOS 12.3) ರ ಬೀಟಾ ಬಿಡುಗಡೆಗಳು, ಮತ್ತೊಂದೆಡೆ, ಐಪ್ಯಾಡ್ ಮತ್ತು ಮ್ಯಾಕ್ ಎರಡೂ ಡಿವೈಸ್ ಹೊಂದಿರುವ ಬಳಕೆದಾರರಿಗೆ ಅನುಭವವನ್ನು ಹೆಚ್ಚಿಸಲು ವಿಳಂಬಿತ ಯೂನಿವರ್ಸಲ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ. ಫೇಸ್ ಮಾಸ್ಕ್ ಜೊತೆಗೆ ಫೇಸ್ ಐಡಿ ಬಳಸಿಕೊಂಡು ಐಫೋನ್ಅನ್ನು ಅನ್‌ಲಾಕ್ ಮಾಡುವ ಸಾಮರ್ಥ್ಯದೊಂದಿಗೆ, ಆಪಲ್ ತನ್ನ ಸ್ವಾಮ್ಯದ ಫೇಸ್ ರಿಕಗ್ನೇಶನ್ ತಂತ್ರಜ್ಞಾನವನ್ನು ((Face ID Unlock with Mask)) ಅಪ್‌ಗ್ರೇಡ್ ಮಾಡಿದೆ. 2020 ರ ಆರಂಭದಲ್ಲಿ ಕೋವಿಡ್ 18 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಜನರು ಫೇಸ್ ಮಾಸ್ಕ್ ಧರಿಸಿರುವುದರಿಂದ ಇದು ಹೆಚ್ಚು ಬೇಡಿಕೆ ಪಡೆದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

ಆಪಲ್ ಈ ಹಿಂದೆಯೂ ಸಹ ಫೇಸ್ ಮಾಸ್ಕ್ ಧರಿಸಿರುವಾಗ ಫೇಸ್ ಐಡಿ ಮೂಲಕ ಜನರನ್ನು ಗುರುತಿಸದಿರುವ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದೆ. 2020 ರಲ್ಲಿ, ಫೇಸ್ ಐಡಿ ಬೆಂಬಲವನ್ನು ಹೊಂದಿರುವ ಡಿವೈಸ್ ಗಳಲ್ಲಿ ಮಾಸ್ಕ್‌ಗಳನ್ನು ಧರಿಸುವಾಗ ಪಾಸ್‌ಕೋಡ್‌ಗಳನ್ನು ಬಳಸಿಕೊಂಡು ಅನ್‌ಲಾಕ್ ಮಾಡಲು ಇದು ವೇಗವಾದ ಮಾರ್ಗವನ್ನು ಸಕ್ರಿಯಗೊಳಿಸಿದೆ. ಮಾಸ್ಕ್‌ಗಳನ್ನು ಧರಿಸಿದಾಗ ಆಪಲ್ ವಾಚ್ ಅನ್ನು ಬಳಸಿಕೊಂಡು ಫೇಸ್ ಐಡಿ ಐಫೋನ್ ಮಾದರಿಗಳನ್ನು ಅನ್‌ಲಾಕ್ ಮಾಡುವ ಸಾಮರ್ಥ್ಯವನ್ನು ಕಂಪನಿಯು ಕಳೆದ ವರ್ಷ ಒದಗಿಸಿದೆ.

ಫೇಸ್ ಮಾಸ್ಕ್ ಧರಿಸುವಾಗ ಅವರ ಕಣ್ಣಿನ ಪ್ರದೇಶವನ್ನು ಆಧರಿಸಿ ಬಳಕೆದಾರರನ್ನು ಗುರುತಿಸಲು ಆಪಲ್ ಹೊಸ ಅಲ್ಗಾರಿದಮ್‌ಗಳನ್ನು ತರಬೇತಿ ಮಾಡಿದೆ. ಇದು ಫೇಸ್ ಐಡಿಯನ್ನು ಬಳಸಿಕೊಂಡು ತಮ್ಮ ಐಫೋನ್ ಅನ್ನು ಅನ್‌ಲಾಕ್ ಮಾಡಲು ಬಳಕೆದಾರರನ್ನು ಸಕ್ರಿಯಗೊಳಿಸುತ್ತದೆ. ಬಳಕೆದಾರರು ಐಒಎಸ್ 15.4 ಚಾಲನೆಯಲ್ಲಿರುವ ತಮ್ಮ ಐಫೋನ್ ಅನ್ನು ಮೊದಲ ಬಾರಿಗೆ ಬೂಟ್ ಮಾಡಿದಾಗ ಫೇಸ್ ಮಾಸ್ಕ್ ಜೊತೆ ಫೇಸ್ ಐಡಿಯನ್ನು ಬಳಸಿಕೊಂಡು ಹೊಂದಿಸುವ ಆಯ್ಕೆಯನ್ನು ಪಡೆಯುತ್ತಾರೆ. ಇದಕ್ಕಾಗಿ, ಸೆಟ್ಟಿಂಗ್‌ > ಫೇಸ್ ಐಡಿ ಮತ್ತು ಪಾಸ್‌ಕೋಡ್ ಅಡಿಯಲ್ಲಿ ಲಭ್ಯವಿರುವ ‘ಮಾಸ್ಕ್ ಜೊತೆಗೆ ಫೇಸ್ ಐಡಿ ಬಳಸಿ’ ಎಂಬ ಆಯ್ಕೆಯನ್ನು ಟಾಗಲ್ ಮಾಡುವ ಮೂಲಕ ಐಓಎಸ್ 15.4 ನೊಂದಿಗೆ ಬೂಟ್ ಮಾಡಿದ ನಂತರ ವೈಶಿಷ್ಟ್ಯವನ್ನು ಆಕ್ಟಿವ್ ಮಾಡಬಹುದು.

ಸೆಟಪ್ ಮಾಡುವಾಗ ನೀವು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ.. ಆಪಲ್ ಕನ್ನಡಕದೊಂದಿಗೆ ಕೆಲಸ ಮಾಡಲು ವೈಶಿಷ್ಟ್ಯವನ್ನು ಸಹ ವಿನ್ಯಾಸಗೊಳಿಸಿದೆ. ಆದಾಗ್ಯೂ, ಮಾಸ್ಕ್‌ನೊಂದಿಗೆ ಫೇಸ್ ಐಡಿಯನ್ನು ಹೊಂದಿಸುವಾಗ ನಿಮ್ಮ ಕನ್ನಡಕಕ್ಕಾಗಿ ಪ್ರತ್ಯೇಕ ದಾಖಲಾತಿಯನ್ನು ಶಿಫಾರಸು ಮಾಡಲಾಗಿದೆ. ಪ್ರತಿ ದಾಖಲಾದ ನೋಟದೊಂದಿಗೆ ನೀವು ನಾಲ್ಕು ಜೋಡಿ ಕನ್ನಡಕಗಳನ್ನು ಬಳಸಬಹುದು. ಐಫೋನ್ ಎಕ್ಸ್(iPhone X )ಮತ್ತು ನಂತರದ ಮಾದರಿಗಳಲ್ಲಿ ಫೇಸ್ ಐಡಿ ಲಭ್ಯವಿದ್ದರೂ, ಫೇಸ್ ಮಾಸ್ಕ್ ಜೊತೆ ಫೇಸ್ ಐಡಿಯನ್ನು ಬಳಸುವ ವೈಶಿಷ್ಟ್ಯವು ಐಫೋನ್12 ಮತ್ತು ಐಫೋನ್ ನ ಹೊಸ ಆವೃತ್ತಿಗಳಿಗೆ ಸೀಮಿತವಾಗಿದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಈ ಕ್ಷಣದಲ್ಲಿ ಇದು ಐಪ್ಯಾಡ್ ಬಳಕೆದಾರರಿಗೆ ಲಭ್ಯವಿಲ್ಲ.

ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

(Face ID Unlock with Mask in iOS 15.4 Beta)

Comments are closed.