ಸೋಮವಾರ, ಏಪ್ರಿಲ್ 28, 2025
HomeCinemaವಾಯುಪಡೆಯ ಪೈಲೆಟ್ ಆಗುವ ಕನಸು ಕಂಡಿದ್ದ ಸುಶಾಂತ್ ಸಿಂಗ್ ರಜಪೂತ್ !

ವಾಯುಪಡೆಯ ಪೈಲೆಟ್ ಆಗುವ ಕನಸು ಕಂಡಿದ್ದ ಸುಶಾಂತ್ ಸಿಂಗ್ ರಜಪೂತ್ !

- Advertisement -
  • ಅಂಚನ್ ಗೀತಾ

ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಲಕ್ಷಾಂತರ ಅಭಿಮಾನಿಗಳಿಗೆ ಆತಂಕವನ್ನು ತಂದಿದೆ. ಯುವನಟನ ಸಾವು ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಅದ್ರಲ್ಲೂ ನಟನಾಗಿ ಮಿಂಚುಹರಿಸಿರೋ ಸುಶಾಂತ್ ಗೆ ವಾಯುಪಡೆಯ ಪೈಲೆಟ್ ಕನಸು ಕೊನೆಗೂ ನನಸಾಗಲೇ ಇಲ್ಲ.

ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಬಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.34 ವರ್ಷದ ನಟ ನೇಣಿಗೆ ಕೊರಳೊಡ್ಡಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಯನ್ನು ಪಡೆದಿದ್ದ ಸುಶಾಂತ್ ಸಿಂಗ್ ರಜಪೂತ ಪವಿತ್ರ ರಿಷ್ತಾ ಧಾರವಾಹಿಯ ಮೂಲಕ ಪಯಣ ಆರಂಭವಾಗಿತ್ತು. ಕಿರುತೆರೆಯಿಂದ ಬಾಲಿವುಡ್ ಗೆ ಬಂದು ಮಿಂಚಿದ ನಟರಲ್ಲಿ ಸುಶಾಂತ್ ಸಿಂಗ್ ರಜಪೂತ್ ಒಬ್ಬರು.

ಸ್ಟಾರ್ ಪ್ಲಸ್ ನಲ್ಲಿ ಕಿಸ್ ದೇಶ್ ಮೆ ಹೈ ಮೇರಾ ದಿಲ್ ನಲ್ಲಿ ಕಿರುತೆರೆಗೆ ಕಾಲಿಟ್ಟಿದ್ದರೂ ಜೀ ಟಿವಿಯಲ್ಲಿ ಪ್ರಸಾರವಾಗಿದ್ದ ಪವಿತ್ರ ರಿಷ್ತಾ ಎಂಬ ಧಾರಾವಾಹಿಯ ಮಾನವ್ ದೇಶ್ ಮುಖ್ ಪಾತ್ರ ಸುಶಾಂತ್ ಸಿಂಗ್ ರಜಪೂತ್ ಗೆ ದೊಡ್ಡಮಟ್ಟ ಹೆಸರನ್ನು ತಂದುಕೊಟ್ಟಿತ್ತು. ಈ ಮೂಲಕ ಪ್ರತಿ ಹೆಣ್ಣಿಗೂ ಡ್ರೀಮ್ ಬಾಯ್ ಆಗಿದ್ದರು ಸುಶಾಂತ್.

ಅಂಖಿತ ಲೋಖಂಡೆ ಮತ್ತು ಸುಶಾಂತ್ ಸಿಂಗ್ ಜೋಡಿ ಧಾರವಾಹಿಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹತ್ತಿರವಾಗಿದ್ರು. ತದನಂತರ ಸಿನಿಮಾ ನಿರ್ಮಾಣದ ಬಗ್ಗೆ ವಿದ್ಯಾಬ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ ಸುಶಾಂತ್ ಪವಿತ್ರ ರಿಷ್ತಾದಿಂದ ಹೊರಗೆ ಬಂದಿದ್ರು. ಕಿರುತೆರೆ ನಟನೆ ಜೊತೆಗೆ ಝರಾ ನಚ್ ಕೆ ದಿಖಾ -2, ಝಲಕ್ ದಿಖ್ ಲಾಜಾ-4 ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು.

ಆನಂತರ ‘ಕೈ ಪೋ ಚೇ’ ಸಿನಿಮಾದಲ್ಲಿ ಕಾಣಿಸಿಕೊಂಡ ಸುಶಾಂತ್, ಪರಿಣಿತಿ ಚೋಪ್ರಾ ಜತೆ ‘ಶುದ್ಧ್ ದೇಸಿ ರೊಮ್ಯಾನ್ಸ್’, ಅಮಿರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ ಅನುಷ್ಕಾ ಶರ್ಮಾಳ ಪ್ರಿಯಕರನಾಗಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ ‘ಡಿಟೆಕ್ಟಿವ್ ಬ್ಯೋಮ್‌ಕೇಶ್ ಭಕ್ಷಿ’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.

ಇದಾದ ನಂತರ ಎಸ್ ಧೋನಿ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದರು. ಅಷ್ಟೆಅಲ್ಲ ಎಲ್ಲರ ಫೇವರೆಟ್ ಆಗಿದ್ರು. ಸುಶಾಂತ್ ಗೆ ವಾಯುಪಡೆಯಲ್ಲಿ ಪೈಲೆಟ್ ಆಗುವ ಕನಸಿತ್ತು. ಎಂಜಿನಿಯರ್, ವಕೀಲರ ಕುಟುಂಬದಿಂದ ಬಂದ ಈತ ಎಂಜಿನಿಯರ್ ಆಗಬೇಕೆಂದು ಹೆತ್ತವರ ಆಸೆಯಾಗಿತ್ತು. ಹಾಗಾಗಿ ದೆಹಲಿ ಎಂಜಿನಿಯರಿಂದ್ ಕಾಲೇಜಿಗೆ ಸೇರಿಸಲಾಯಿತು.

ಸುಶಾಂತ್ ಅವರು ಶಾರುಖ್ ಖಾನ್ ಅವರ ಅಭಿಮಾನಿ. ಮಾತು ಕಡಿಮೆ, ಕಾಲೇಜಿನಲ್ಲಿಯೂ ತನ್ನ ಪಾಡಿಗೆ ಇರುತ್ತಿದ್ದ ಆತನಿಗೆ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಸ್ಕಾಲರ್‌ಶಿಪ್ ಕೂಡಾ ಸಿಕ್ಕಿತ್ತು. ಆಮೇಲೆ ಶೈಮಾಕ್ ಧಾವರ್ ಅವರ ನೃತ್ಯ ಅಕಾಡೆಮಿಗೆ ಸೇರಿದ ಇವರು ಮುಂಬೈಗೆ ಬಂದರು. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಾಗ ಇಂಜಿನಿಯರ್ ಕಲಿಕೆಗೆ ಸಮಯ ಸಾಕಾಗುತ್ತಿರಲಿಲ್ಲ. ಹಾಗಾಗಿ ಅರ್ಧಕ್ಕೆ ಶಿಕ್ಷಣ ಕೈಬಿಡಬೇಕಾಗಿ ಬಂದಿತ್ತು. ತದನಂತರ ಸಿನಿಮಾಗಳಲ್ಲಿ ಯಶಸ್ಸು ಸಿಕ್ಕಿತ್ತಾದ್ರು ವೈಯಕ್ತಿಕ ಜೀವನದಲ್ಲಿ ಮಾತ್ರ ಆರು ವರ್ಷ ಜೊತೆಗಿದ್ದ ಅಂಕಿತಾ ಲೋಕಂಡೆ ಸುಶಾಂತ್ ನಿಂದ ದೂರವಾದ್ರು.

ಹೀಗೆ ಬದುಕಿನ ಬಂಡಿಯಲ್ಲಿ ಯಶಸ್ಸಿನ ಮೇಲೆ ಯಶಸ್ಸುಗಳಿಸಿದ್ದ ನಟ ವೈಯಕ್ತಿಕ ಜೀವನದಲ್ಲಿ ಇಂತಹ ನಿರ್ಧಾರಕ್ಕೆ ಯಾಕಾಗಿ ಬಂದ್ರು ಅನ್ನೊದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಹಮ್ ಬದುಕು ಮುಗಿಸಿಕೊಂಡು ಹೋಗಲು ಹೊರಟವನ ಒಳಗಿನ ತಳಮಳಗಳೆಷ್ಟಿದ್ದವೋ. ಯಾರಿಗೆ ಗೊತ್ತು…? ವಿದಾಯ..gone way too soon

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular