ಬಾಡಿಗೆ ನೀಡದಿದ್ದಕ್ಕೆ ಬಾಡಿಗೆದಾರನ ಮೇಲೆ ಗುಂಡು ಹಾರಿಸಿದ ಮಾಲೀಕ !

0

ಚಿಕ್ಕೋಡಿ : ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಮಾಲೀಕನೋರ್ವ ಬಾಡಿಗೆದಾರನ ಮೇಲೆ ಗುಂಡು ಹಾರಿಸಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ನೂರ್ ಮಹಮ್ಮದ್ ಎಂಬಾತನೇ ಗುಂಡು ಹಾರಿಸಿದ ಮನೆ ಮಾಲೀಕ. ನೂರ್ ಮಹಮ್ಮದ್ ಮನೆಯಲ್ಲಿ ಕಳೆದೇಳು ತಿಂಗಳಿನಿಂದಲೂ ಬಾಡಿಗೆದಾರ ದೀಕ್ಷಿತ್ ವಾಸವಾಗಿದ್ರು. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ಎಲೆಯಲ್ಲಿ ಎದುರಾದ ಲಾಕ್ ಡೌನ್ ನಿಂದ ದುಡ್ಡಿಲ್ಲದೇ ಕಳೆದ ಎರಡು ತಿಂಗಳಿನಿಂದ ಮನೆ ಬಾಡಿಗೆ ನೀಡಿರಲಿಲ್ಲ. ಇದರಿಂದ ಕೆರಳಿದ್ದ ಮನೆ ಮಾಲೀಕ ನೂರ್ ಮಹಮ್ಮದ್ ಮನೆಯ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯನ್ನು ಕಟ್ ಮಾಡಿದ್ದರು. ಇಂದು ಬಾಡಿಗೆ ಕೊಡಲೇ ಬೇಕು ಅಂತಾ ಪಟ್ಟು ಹಿಡಿದಿದ್ದ. ಬಾಡಿಗೆ ನೀಡದೇ ಇದ್ರೆ ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದ್ರು.

ಈ ವೇಳೆಯಲ್ಲಿ ದೀಕ್ಷಿತ್ ಹಾಗೂ ಮನೆ ಮಾಲೀಕ ನೂರ್ ಮಹಮ್ಮದ್ ನಡುವೆ ಗಲಾಟೆ ಏರ್ಪಟ್ಟಿತ್ತು, ಗಲಾಟೆ ವಿಕೋಪಕ್ಕೆ ತೆರಳುತ್ತಿದ್ದಂತೆಯೇ ನೂರ್ ಮಹಮ್ಮದ್ ಮನೆಯಲ್ಲಿದ್ದ ಡಬ್ಬಲ್ ಬ್ಯಾರ್ ಗನ್ ನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾಕಿಸಿ ದರ್ಪ ಮೆರೆದಿದ್ದಾರೆ. ಈ ಕುರಿತು ಬಾಡಿಗೆದಾರ ದೀಕ್ಷಿತ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

Leave A Reply

Your email address will not be published.