ಜಿಮ್‌ನಿಂದ ಹೃದಯಾಘಾತವಾಯ್ತಾ? ಸುಶ್ಮಿತಾ ಸೇನ್ ಹೇಳಿದ್ದೇನು ಗೊತ್ತಾ ?

ಮಿಸ್ ಯುನಿವರ್ಸ್ ಸುಶ್ಮಿತಾ ಸೇನ್ ಹೃದಯಾಘಾತಕ್ಕೆ (Sushmita Sen’s heart attack) ಒಳಗಾಗಿದ್ದು ಹಾಗೂ ಚಿಕಿತ್ಸೆ ಪಡೆದುಕೊಂಡಿದ್ದು ಬಾಲಿವುಡ್ ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲೇ ಸಂಚಲನ ಮೂಡಿಸಿದ ಸಂಗತಿ ಆಗಿದೆ. ವರ್ಕೌಟ್, ಫಿಟನೆಸ್ ಬಳಿಕವೂ ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಈ ಎಲ್ಲಾ ಅನುಮಾನಗಳಿಗೆ ಸ್ವತಃ ಸುಶ್ಮಿತಾ ಸೇನ್ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಬಾಲಿವುಡ್ ಸುಂದರಿ ಹಾಗೂ ನಟಿ ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿದ್ದು ಹಾಗೂ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಸಂಗತಿ ಸಖತ್ ಸಂಚಲನ ಮೂಡಿಸಿತ್ತು.

ಸ್ವತಃ ಸುಶ್ಮಿತಾ ಸೇನ್ ಸೋಷಿಯಲ್ ಮೀಡಿಯಾದಲ್ಲಿ ಈ ಸಂಗತಿಯನ್ನು ರಿವೀಲ್ ಮಾಡಿದ್ದರು‌. ಅಲ್ಲದೇ ಚೇತರಿಸಿಕೊಳ್ಳುತ್ತಿರುವುದಾಗಿಯೂ ಹೇಳಿದ್ದರು. ಈಗ ಸುಶ್ಮಿತಾ ಸೇನ್ ಹೃದಯ ಸಮಸ್ಯೆಗೆ ಒಳಗಾದ ಬಳಿಕ ಮೊದಲ ಬಾರಿಗೆ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ನಿಮ್ಮಲ್ಲೀ ಬಹುತೇಕರು ನನ್ನ ಅನಾರೋಗ್ಯದ ಸಂಗತಿ ತಿಳಿಯುತ್ತಿದ್ದಂತೆ ಜಿಮ್ ಗೆ ಹೋಗೋದರಿಂದ ಪ್ರಯೋಜನವಿಲ್ಲ ಎಂಬ ಮಾತನ್ನಾಡುತ್ತೀರಿ. ಜಿಮ್ ನಿಂದ ದೂರ ಉಳಿಯುವ ಪ್ರಯತ್ನವನ್ನು ಮಾಡುತ್ತೀರಿ. ಅಷ್ಟೇ ಅಲ್ಲ ನೋಡು ಅವಳಿಗೆ ಜಿಮ್ ಗೆ ಹೋಗೋದು ಹಾಗೂ ವರ್ಕೌಟ್ ಮಾಡೋದು ಕೂಡ ಸಹಾಯಕ್ಕೆ ಬರಲಿಲ್ಲ ಎಂದು ಮಾತನಾಡುತ್ತೀರಿ.

ಆದರೆ‌ ಸತ್ಯ ಅದಲ್ಲ. ನಾನು ವರ್ಕೌಟ್ ಮಾಡಿದ್ದೇ ನನ್ನ ಜೀವ ಉಳಿಯೋದಿಕ್ಕೆ ಕಾರಣವಾಗಿದೆ ಎಂದು ಸುಶ್ಮಿತಾ ಸೇನ್ ಮಾಹಿತಿ ನೀಡಿದ್ದಾರೆ. ನನ್ನ ಹೃದಯ ಶೇಕಡಾ 95% ರಷ್ಟು ಬ್ಲಾಕೇಜ್ ನಿಂದ ತುಂಬಿತ್ತು. ಆದರೂ ನಾನು ಜಿಮ್ ಸೇರಿದಂತೆ ವರ್ಕೌಟ್ ಮಾಡುತ್ತಿದ್ದರಿಂದ , ಆಕ್ಟಿವ್ ಆಗಿದ್ದರಿಂದ ಈ ಹೃದಯಾಘಾತದಿಂದ ಹೊರಬರಲು ಸಾಧ್ಯವಾಯಿತು ಎಂದು ಸುಶ್ಮಿತಾ ಹೇಳಿದ್ದಾರೆ. ಸದ್ಯ ಶಸ್ತ್ರಚಿಕಿತ್ಸೆ ಬಳಿಕದ ವಿಶ್ರಾಂತಿಯಲ್ಲಿರೋ ಸುಶ್ಮಿತಾ ಸಾಕಷ್ಟು ಚೇತರಿಸಿಕೊಂಡಿದ್ದಾರಂತೆ. ಹೀಗಾಗಿ ಇನ್ ಸ್ಟಾಗ್ರಾಂ ಲೈವ್ ಬಂದಿರೋ ಸುಶ್ಮಿತಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ : ನಟ ರಿಷಬ್‌ ಶೆಟ್ಟಿ ಮಗಳು ರಾದ್ಯಾಗೆ ಮೊದಲ ವರ್ಷದ ಹುಟ್ಟುಹಬ್ಬ ಸಂಭ್ರಮ

ಇದನ್ನೂ ಓದಿ : “ಕಬ್ಜ” ಸಿನಿಮಾ ಟ್ರೈಲರ್‌ : ಡಬ್ಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ರಿಯಲ್‌ ಸ್ಟಾರ್

ಇದನ್ನೂ ಓದಿ : ಕಬ್ಜ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋದ್ಯಾರು ? ಕುತೂಹಲ ಹುಟ್ಟಿಸಿದ ಚಿತ್ರತಂಡ

ಕೇವಲ ಸುಶ್ಮಿತಾ ಸೇನ್ ಮಾತ್ರವಲ್ಲ ಕನ್ನಡದ ನಟರಾದ ಚಿರಂಜೀವಿ ಸರ್ಜಾ ಹಾಗೂ ಪುನೀತ್ ರಾಜ್‌ಕುಮಾರ್ ಕೂಡ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಅಭಿಮಾನಿಗಳನ್ನು ಅಗಲಿದ್ದಾರೆ. ಆದರೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಸುಶ್ಮಿತಾ ಸೇನ್ ಹೃದಯಾಘಾತದಿಂದ ಚೇತರಿಸಿಕೊಂಡು ಸಹಜ‌ಜೀವನಕ್ಕೆ ಮರಳಿದ್ದಾರೆ.

Sushmita Sen’s Heart Attack: Heart Heart from Gym? Do you know what Sushmita Sen said?

Comments are closed.