Swathi Muttina Male Haniye: ರಮ್ಯಾ ನಿರ್ಮಾಣದ ಮೊದಲ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ಶೂಟಿಂಗ್‌ ಕಂಪ್ಲೀಟ್‌

(Swathi Muttina Male Haniye) ನಟಿ ರಮ್ಯಾ ಅವರ ನಿರ್ಮಾಣದಲ್ಲಿ ಆರಂಭವಾದ ಸಿನಿಮಾ “ಸ್ವಾತಿ ಮುತ್ತಿನ ಮಳೆಹನಿಯೇ” ಚಿತ್ರದ ಶೂಟಿಂಗ್‌ ಇದೀಗ ಪೂರ್ಣಗೊಂಡಿದ್ದು, ಮಂಗಳವಾರ ಕುಂಬಳಕಾಯಿ ಪೂಜೆಯನ್ನು ಚಿತ್ರತಂಡ ನೆರವೇರಿಸಿದ್ದಾರೆ. ಈ ಚಿತ್ರಕ್ಕೆ ರಾಜ್‌ ಬಿ ಶೆಟ್ಟಿ ನಿರ್ದೇಶನ ಮಾಡಿದ್ದಲ್ಲದೇ ನಾಯಕ ನಟನಾಗಿಯೂ ನಟಿಸಿದ್ದು, ಇವರಿಗೆ ಸಿರಿ ರವಿಕುಮಾರ್‌ ಅವರು ಜೋಡಿಯಾಗಿದ್ದಾರೆ.

ಅಕ್ಟೋಬರ್‌ 5 ರಂದು ದಸರಾ ಹಬ್ಬದ ಸಂಭ್ರಮದಲ್ಲಿ ರಮ್ಯಾ ಅವರ ನಿರ್ಮಾಣದ ತಮ್ಮ ಮೊದಲ ಚಿತ್ರ ʼಸ್ವಾತಿ ಮುತ್ತಿನ ಮಳೆ ಹನಿಯೇʼ(Swathi Muttina Male Haniye) ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಘೋಷಣೆ ಮಾಡಿದ್ದರು.ಅದರ ನಂತರದಲ್ಲಿ ಸಮಯ ವ್ಯರ್ಥ ಮಾಡದೇ ಒಂದೇ ಶೆಡ್ಯುಲ್‌ ನಲ್ಲಿ ಚಿತ್ರೀಕರಣವನ್ನು ನಡೆಸಿದ್ದು, ಮಂಗಳವಾರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಚಿತ್ರ ಘೋಷಣೆಯಾದ ಸಂದರ್ಭದಲ್ಲಿ ಮೋಹಕ ತಾರೆ ನಟಿ ರಮ್ಯಾ ಅವರು ತಾವು ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಕಾರಣಾಂತರದಿಂದ ಅವರು ಈ ಚಿತ್ರದ ನಟನೆಯಿಂದ ದೂರ ಉಳಿದಿದ್ದು, ಅವರ ಸ್ಥಾನಕ್ಕೆ ಸಿರಿ ರವಿಕುಮಾರ್‌ ಬಂದು ಸೇರಿದ್ದಾರೆ. ಈ ಹಿಂದೆ ಸಿರಿ ರವಿಕುಮಾರ್‌ ಅವರು “ಸಕುಟುಂಬ ಸಮೇತ” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.

ಇದೀಗ ಡಾಲಿ ಧನಂಜಯ್‌ ಅವರು ನಾಯಕನಾಗಿ ನಟಿಸುತ್ತಿರುವ ʼಉತ್ತರಾಕಾಂಡʼ ಚಿತ್ರದ ಮೂಲಕ ಸತತ ಏಳು ವರ್ಷಗಳ ನಂತರ ರಮ್ಯಾ ಅವರು ಚಿತ್ರರಂಗಕ್ಕೆ ಮರುಪ್ರವೇಶ ಮಾಡಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಚಿತ್ರದ ಮುಹೂರ್ತ ನೆರವೇರಿದ್ದು, ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದರ ಜೊತೆ ಜೊತೆಗೆ ಇನ್ನೂ ಮೂರು ಸಿನಿಮಾಗಳಲ್ಲಿ ರಮ್ಯಾ ನಟಿಸಲಿದ್ದು, ಮುಂದಿನ ದಿನಗಳಲ್ಲಿ ಇದರ ಕುರಿತಾಗಿ ಘೋಷಣೆ ಮಾಡಲಿದ್ದಾರೆ.

ಇದನ್ನೂ ಓದಿ : Aishwarya Rai Bachchan : ಮಗಳ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ ಐಶ್ವರ್ಯಾ ರೈ

ಇದನ್ನೂ ಓದಿ : Ponniyin Selvan 2: ಏಪ್ರಿಲ್‌ ನಲ್ಲಿ ಬಿಡುಗಡೆಗೆ ಸಜ್ಜಾದ ಮಣಿರತ್ನಂ ಪೊನ್ನಿಯಿನ್ ಸೆಲ್ವನ್ 2

ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ನಿರ್ಮಾಣವಾದ ನಂತರದಲ್ಲಿ ರಮ್ಯಾ ಅವರು ಇನ್ನೊಂದು ಕ್ರೀಡಾ ಪ್ರಧಾನವಾದ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ ಎಂಬ ಮಾಹಿತಿಗಳು ಕೂಡ ಕೇಳಿ ಬರುತ್ತಿವೆ.

(Swathi Muttina Male Haniye) The shooting of the movie “Swathi Muttina Male Haniye” started under the production of actress Ramya has now been completed and the film team performed Pumpkin Puja on Tuesday. This film is directed by Raj B Shetty and also plays the lead actor, paired with Siri Ravikumar.

Comments are closed.