Pet Dog Attack : ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ದಾಳಿ ಮಾಡಿದ ಸಾಕು ನಾಯಿ

ನೋಯ್ಡಾ: ಗ್ರೇಟರ್ ನೋಯ್ಡಾ ಹೌಸಿಂಗ್ ಸೊಸೈಟಿಯ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ಸಾಕು ನಾಯಿ ದಾಳಿ (Pet Dog Attack) ಮಾಡಿರುವ ಘಟನೆ ಮಂಗಳವಾರ ನಡೆದಿದೆ. ಮಗು ತನ್ನ ತಾಯಿಯೊಂದಿಗೆ ಶಾಲೆಗೆ ಹೋಗುತ್ತಿತ್ತು. ಲಿಫ್ಟ್‌ನೊಳಗೆ ಒಬ್ಬ ವ್ಯಕ್ತಿ ಮತ್ತು ಅವನ ಸಾಕುನಾಯಿ ಸೇರಿಕೊಂಡರು. ಲಿಫ್ಟ್‌ನಲ್ಲಿ ಇದ್ದ ಸಿಸಿಟಿವಿಯಲ್ಲಿ ನಾಯಿಯು ಮಗುವಿನ ಮೇಲೆ ದಾಳಿ ಮಾಡುವುದನ್ನು ತೋರಿಸುತ್ತದೆ. ಅದರ ಮಾಲೀಕ ಹಿಡಿದುಕೊಳ್ಳುವ ಮೊದಲು ಬಾಲಕನ ಕೈಯನ್ನು ಕಚ್ಚಿದೆ.

ಶಾಲಾ ಬಾಲಕನಿಗೆ ನಾಲ್ಕು ಚುಚ್ಚುಮದ್ದುಗಳನ್ನು ನೀಡಬೇಕಾಗಿತ್ತು. ಲಾ ರೆಸಿಡೆನ್ಶಿಯಾ ಸೊಸೈಟಿಯಲ್ಲಿ ನಡೆದ ಈ ಘಟನೆ ಅಲ್ಲಿ ವಾಸಿಸುವ ಇತರ ಕುಟುಂಬಗಳಲ್ಲಿ ಭಯ ಮತ್ತು ಅಸಮಾಧಾನವನ್ನು ಹುಟ್ಟುಹಾಕಿದೆ. ನೋಯ್ಡಾ ಪ್ರಾಧಿಕಾರವು ಇತ್ತೀಚೆಗೆ ಸಾಕು ಪ್ರಾಣಿಗಳ ಬಗ್ಗೆ ನಿಯಮವನ್ನು ರೂಪಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ ಸಾಕುಪ್ರಾಣಿ ಮಾಲೀಕರು ತಮ್ಮ ನಾಯಿಗಳು ಅಥವಾ ಬೆಕ್ಕುಗಳನ್ನು ಜನವರಿ 31 2022 ರೊಳಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡದ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಸಾಕು ನಾಯಿ ಅಥವಾ ಬೆಕ್ಕುಗಳಿಂದ ಯಾರಿಗಾದರೂ ಗಾಯ ಉಂಟಾದರೆ ರೂ.10,000 ದಂಡ ವಿಧಿಸಲಾಗುತ್ತದೆ.

“ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿಯ ಸಭೆಯಲ್ಲಿ, ಬೀದಿನಾಯಿ, ಸಾಕು ನಾಯಿಗಳು ಅಥವಾ ಸಾಕು ಬೆಕ್ಕುಗಳಿಗೆ ನೋಯ್ಡಾ ಪ್ರಾಧಿಕಾರದ ನಿಯಮಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ನೋಯ್ಡಾ ಪ್ರದೇಶಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಾಧಿಕಾರವು ನೀತಿಯನ್ನು ನಿರ್ಧರಿಸಿದೆ.” ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಿತು ಮಹೇಶ್ವರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Cuts Womans Throat : ಪ್ರೇಯಸಿಯ ಗಂಟಲು ಸೀಳಿದ ಪ್ರಿಯತಮ : ಕಾರಣ ಕೇಳಿದ್ರೆ ದಂಗಾಗುವುದು ಗ್ಯಾರಂಟಿ

ಇದನ್ನೂ ಓದಿ : Hanged the dog: ನಾಯಿಯನ್ನು ನೇಣು ಹಾಕಿ ಕ್ರೌರ್ಯ ಮೆರೆದ ದುಷ್ಕರ್ಮಿಗಳು

ಇದನ್ನೂ ಓದಿ : Murder Case : ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ: ಮರಣದಂಡನೆ ವಿಧಿಸಲು ತಂದೆ ಅಗ್ರಹ

ಅಷ್ಟೇ ಅಲ್ಲದೇ “ಸಾಕು ನಾಯಿಗಳಿಗೆ ಕ್ರಿಮಿನಾಶಕ ಅಥವಾ ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ನಿಯಮದ ಉಲ್ಲಂಘನೆಯ ಸಂದರ್ಭದಲ್ಲಿ (ಮಾರ್ಚ್ 1, 2023 ರಿಂದ), ತಿಂಗಳಿಗೆ ರೂ. 2,000 ದಂಡವನ್ನು ವಿಧಿಸಲು ಅವಕಾಶವಿದೆ,” ಎಂದು ಶ್ರೀಮತಿ ಮಹೇಶ್ವರಿ ಮಾಹಿತಿ ನೀಡಿದರು.

Pet Dog Attack : A pet dog attacked a schoolboy in an apartment lift

Comments are closed.