ಭಾನುವಾರ, ಏಪ್ರಿಲ್ 27, 2025
HomeCinemaTaapsee Pannu : ಕಾಫಿ ವಿತ್ ಕರಣ್ ಗೆ ಹೋಗೋಕೆ ಸೆಕ್ಸ್ ಲೈಫ್ ಇಂಟ್ರಸ್ಟಿಂಗ್ ಆಗಿರಬೇಕು:...

Taapsee Pannu : ಕಾಫಿ ವಿತ್ ಕರಣ್ ಗೆ ಹೋಗೋಕೆ ಸೆಕ್ಸ್ ಲೈಫ್ ಇಂಟ್ರಸ್ಟಿಂಗ್ ಆಗಿರಬೇಕು: ತಾಪ್ಸೆ ಪನ್ನು ಹೊಸ ವಿವಾದ

- Advertisement -

ಬಾಲಿವುಡ್ ನಲ್ಲಿ ಸದ್ಯ ಸದ್ದು ಮಾಡ್ತಿರೋ ಶೋ ಕಾಫಿ ವಿತ್ ಕರಣ್. ಸದ್ಯ ಕಾಫಿ ವಿತ್ ಕರಣ್ ನ 7 ನೇ ಆವೃತ್ತಿ ನಡೆಯುತ್ತಿದ್ದು, ಸೆಲೆಬ್ರೆಟಿಗಳು ಒಬ್ಬರಾದ ಮೇಲೊಬ್ಬರು ಕಾಫಿ ವಿತ್ ಕರಣ್ ಮೂಲಕ ಸಖತ್ ಸುದ್ದಿಯಾಗ್ತಿದ್ದಾರೆ. ಅದರಲ್ಲೂ ಹಲವು ನಟ-ನಟಿಯರು ತಮ್ಮ ವೈಯಕ್ತಿಕ ಬದುಕಿನ ಇಂಟರ್ ಸ್ಟಿಂಗ್ ಸಂಗತಿಗಳನ್ನು ಹೊರಹಾಕುವ ಮೂಲಕವೇ ವಿವಾದ ಸೃಷ್ಟಿಸುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ತಾಪ್ಸೆ ಪನ್ನು (Taapsee Pannu) ಮಾತ್ರ ಕಾಫಿ ವಿತ್ ಕರಣ್ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು ತಾಪ್ಸೆ ಪನ್ನು ಹೇಳಿಕೆ ಸಖತ್ ವೈರಲ್ ಆಗಿದೆ.

ಹೌದು ನಟಿ ತಾಪ್ಸೆ‌ ಪನ್ನು ಕಾಫಿ ವಿತ್ ಕರಣ್ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ನೀವು ಯಾಕೆ ಇನ್ನೂ ಕಾಫಿ ವಿತ್ ಕರಣ್ ಕಾರ್ಯಕ್ರಮದ ಅತಿಥಿಯಾಗಿ ಬಂದಿಲ್ಲ ಎಂಬ ಪ್ರಶ್ನೆಗೆ ಹಾಸ್ಯಾತ್ಮಕವಾಗಿ ಉತ್ತರಿಸಿದ ನಟಿ ತಾಪ್ಸೆ ಪನ್ನು ನನ್ನ ಲೈಂಗಿಕ ಜೀವನ ಅಷ್ಟೊಂದು ಆಸಕ್ತಿದಾಯಕವಾಗಿಲ್ಲದ ಕಾರಣಕ್ಕೆ ನನಗೆ ಆಹ್ವಾನ ಬಂದಿಲ್ಲ ಎಂದಿದ್ದಾರೆ. ( My Sex life is not interesting enough to be invited to coffee with karan)

ತಾಪ್ಸೆ ಪನ್ನು ಈ ಹೇಳಿಕೆ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ತಾಪ್ಸೆ ಪನ್ನು ತಮ್ಮ ದೋಬಾರಾ ಸಿನಿಮಾ ಪ್ರಮೋಶನ್ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತ ಕಾಫಿ ವಿತ್ ಕರಣ್ ಬಗ್ಗೆ ಹೀಗೆ ಹೇಳಿಕೆ ನೀಡಿದ್ದು, ತಾಪ್ಸೆ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲೂ ಸಂಚಲನ ಮೂಡಿಸಿದೆ. ಕಾಫಿ ವಿತ್ ಕರಣ್ , ನಿರ್ದೇಶಕ ಕರಣ್ ಜೋಹರ್ ಅವರ ಅತ್ಯಂತ ವಿಶೇಷ ಹಾಗೂ ಫೇಮಸ್ ಶೋ ಆಗಿದ್ದು ಬಾಲಿವುಡ್ ಸೆಲೆಬ್ರೆಟಿಗಳು ಈ ಶೋದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಾಯುತ್ತಿರುತ್ತಾರೆ ಎನ್ನೋ ಮಾತಿದೆ.

2004 ರಲ್ಲಿ ಆರಂಭವಾದ ಶೋದ ಏಳನೇ ಆವೃತ್ತಿಯನ್ನು ಕೆಲ ವಾರಗಳ ಹಿಂದೆ ಕರಣ್ ಜೋಹರ್ ಆರಂಭಿಸಿದ್ದಾರೆ. ಶೋದ ಪಬ್ಲಿಸಿಟಿ ಒಂದು ಕಡೆಯಾದರೇ ಪ್ರತಿ ಎಪಿಸೋಡ್ ನಲ್ಲೂ ಕರಣ್ ಸೆಲೆಬ್ರೆಟಿಗಳ ಸೆಕ್ಸ್ ಲೈಫ್ ಬಗ್ಗೆ ಮುಜುಗರವಿಲ್ಲದೇ ಪ್ರಶ್ನೆ ಕೇಳೋ ಪರಿಪಾಟ ಬೆಳೆಸಿಕೊಂಡಿದ್ದು ಇದು ತೀವ್ರ ಟೀಕೆಗೆ ಗುರಿಯಾಗಿದೆ.

ಇತ್ತೀಚಿಗಷ್ಟೇ ಶೋದಲ್ಲಿ ಭಾಗವಹಿಸಿದ್ದ ಕರೀನಾ ಕಪೂರ್ ಗೆ ಕರಣ್ ಇಬ್ಬರು ಮಕ್ಕಳ ಬಳಿಕ ಸೆಕ್ಸ್ ಅನುಭವ ಹೇಗನ್ನಿಸುತ್ತಿದೆ ಎಂದು ಪ್ರಶ್ನಿಸಿದ್ದರು. ಮಾತ್ರವಲ್ಲ ವಿಜಯ್ ದೇವರ್ ಕೊಂಡ ಅವರು ಪಾಲ್ಗೊಂಡ ವೇಳೆಯೂ ನೀವು ಕೊನೆಯ ಭಾರಿ ಲೈಂಗಿಕ ಸಂಪರ್ಕ ಹೊಂದಿದ್ದು ಯಾವಾಗ ಎಂಬ ಪ್ರಶ್ನೆ ಹಾಕಿದ್ದರು. ಇಷ್ಟೇ ಅಲ್ಲ ನಟಿ ಜಾಹ್ನವಿ ಕಪೂರ್, ಸಾರಾ ಅಲಿಖಾನ್ ಸೇರಿದಂತೆ ಹಲವು ನಟ-ನಟಿಯರಿಗೆ ಕರಣ್ ಈ ರೀತಿಯ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಮುಜುಗರ ಸೃಷ್ಟಿಸಿದ್ದರು. ಇದೇ ಹೊತ್ತಿನಲ್ಲಿ ತಾಪ್ಸೆ ಪನ್ನು ಕರಣ್ ಜೋಹರ್ ಶೋ ಬಗ್ಗೆ ನೀಡಿರೋ ಹೇಳಿಕೆ ಸಂಚಲನ ಮೂಡಿಸಿದೆ.

ಇದನ್ನೂ ಓದಿ : Ravi Bopanna : ಈ ಶರೀರ ಯಾಕೆ ಹಿಂಗೇ….! ಮಾದಕ‌ ಹಾಡಿನೊಂದಿಗೆ ಮತ್ತೆ ಬಂದ‌ ರವಿಚಂದ್ರನ್

ಇದನ್ನೂ ಓದಿ : Radhika Pandit Celebration : ಯಶ್- ರಾಧಿಕಾ ಮನೆಯಲ್ಲಿ ಹೇಗಿತ್ತು ವರಮಹಾಲಕ್ಷ್ಮೀ ? ಇಲ್ಲಿದೆ ಪೋಟೋಸ್

Taapsee Pannu not interesting enough to be invited to coffee with karan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular