India Women Cricket Team : 5 ವರ್ಷ 3 ಫೈನಲ್ 3 ಸೋಲು… ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಾಡುತ್ತಿದೆ “ಫೈನಲ್ ಫೋಬಿಯಾ”

ಬರ್ಮಿಂಗ್’ಹ್ಯಾಮ್: ಭಾರತ ಮಹಿಳಾ ಕ್ರಿಕೆಟ್ ತಂಡ (Indian Women Cricket Team) ಕಾಮನ್ವೆಲ್ತ್ ಗೇಮ್ಸ್ (Commonwealth Games-2022) ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ. ಬರ್ಮಿಂಗ್’ಹ್ಯಾಮ್’ನಲ್ಲಿ ಭಾನುವಾರ ನಡೆದ ಕಾಮನ್ವೆಲ್ಸ್ ಗೇಮ್ಸ್ ಟಿ20 ಫೈನಲ್ ಪಂದ್ಯದಲ್ಲಿ ಹರ್ಮನ್’ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಕೇವಲ 9 ರನ್’ಗಳಿಂದ ಸೋಲು ಕಂಡು ನಿರಾಸೆ ಅನುಭವಿಸಿತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ವನಿತೆಯರು ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿದರು.

ನಂತರ ಗುರಿ ಬೆನ್ನಟ್ಟಿದ ಭಾರತ ಮಹಿಳಾ ತಂಡ 19.3 ಓವರ್’ಗಳಲ್ಲಿ 152 ರನ್’ಗಳಿಗೆ ಆಲೌಟಾಗಿ ವೀರೋಚಿತ ಸೋಲು ಅನುಭವಿಸಿತು. ನಾಯಕಿ ಹರ್ಮನ್’ಪ್ರೀತ್ ಕೌರ್ 43 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್’ಗಳನ್ನೊಳಗೊಂಡ ಸ್ಫೋಟಕ 65 ರನ್ ಸಿಡಿಸಿದ್ರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. 16ನೇ ಓವರ್’ನಲ್ಲಿ ತಂಡದ ಮೊತ್ತ 121 ರನ್’ಗಳಾಗಿದ್ದ ಹರ್ಮನ್’ಪ್ರೀತ್ ಕೌರ್ ಔಟಾದಾಗಲೂ ಭಾರತಕ್ಕೆ ಗೆಲುವಿನ ಅವಕಾಶವಿತ್ತು. ಆದರೆ ಕೆಳ ಕ್ರಮಾಂಕದ ಆಟಗಾರ್ತಿಯರ ಬೇಜವಾಬ್ದಾರಿ ಆಟದಿಂದಾಗಿ ಭಾರತದ ಕೈಯಲ್ಲಿದ್ದ ಗೆಲುವು ಕೈ ಜಾರಿತು. 9 ರನ್’ಗಳಿಂದ ಪಂದ್ಯ ಗೆದ್ದ ಆಸ್ಟ್ರೇಲಿಯಾ ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿತು.

ಭಾರತ ಮಹಿಳಾ ತಂಡ ಹೀಗೆ ಫೈನಲ್’ನಲ್ಲಿ ಸೋಲು ನಿರಾಸೆಗೊಳಲಾಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ 5 ವರ್ಷಗಳಲ್ಲಿ ಭಾರತದ ವನಿತೆಯರು 3 ಫೈನಲ್’ಗಳಲ್ಲಿ ಸೋಲು ಕಂಡದ್ದಾರೆ. 2017ರ ಐಸಿಸಿ ಮಹಿಳಾ ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ಭಾರತ ತಂಡ, 2020ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇದೀಗ ಇದೇ ಮೊದಲ ಬಾರಿ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಆಡಿದ ಭಾರತೀಯ ಮಹಿಳೆಯರು ಫೈನಲ್ ಹಣಾಹಣಿಯಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧವೇ ಸೋತು ನಿರಾಸೆಗೊಳಗಾಗಿದ್ದಾರೆ.

ಇದನ್ನೂ ಓದಿ : KL Rahul offers special Pooja ಘಾಟಿ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಕೆ.ಎಲ್.ರಾಹುಲ್

ಇದನ್ನೂ ಓದಿ : CWG 2022 India Women : ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋಲು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟ ಟೀಂ ಇಂಡಿಯಾ

Commonwealth Games-2022 5 Years 3 Finals 3 Defeats, Finals Phobia Haunts Indian Women Cricket Team

Comments are closed.