Tabassum no more: ಎರಡೆರಡು ಬಾರಿ ಹೃದಯಾಘಾತಕ್ಕೆ ತುತ್ತಾದ ಬಾಲಿವುಡ್ ಹಿರಿಯ ನಟಿ ತಬಸ್ಸುಮ್ ಇನ್ನಿಲ್ಲ..

ಮುಂಬೈ: Tabassum no more: ಫೂಲ್ ಖಿಲೆ ಗುಲ್ಶನ್ ಗುಲ್ಶನ್ ಖ್ಯಾತಿಯ ಬಾಲಿವುಡ್ ನಟಿ ತಬಸ್ಸುಮ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಶುಕ್ರವಾರ (ನ.18)ರಂದು ಅವರಿಗೆ ಹೃದಯಾಘಾತವಾಗಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: Vedha Poster: ಶಿವಣ್ಣನ ಮುಂದೆ ಕೈಯಲ್ಲಿ ಕಲ್ಲನ್ನೆತ್ತಿ ಅದೃಷ್ಟ ಪರೀಕ್ಷೆಗೆ ಇಳಿದ ಅರುಣ್ ಸಾಗರ್ ಪುತ್ರಿ

ಬಾಲಕಲಾವಿದೆಯಾಗಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೂರದರ್ಶನದ ಫೂಲ್ ಖಿಲೆ ಗುಲ್ಶನ್ ಗುಲ್ಶನ್ ಟಾಕ್ ಶೋ ಮೂಲಕ ಅವರು ಜನಪ್ರಿಯರಾಗಿದ್ದರು.

1944ರಲ್ಲಿ ಜನಿಸಿದ್ದ ತಬಸ್ಸುಮ್ ತಮ್ಮ 3ನೇ ವಯಸ್ಸಿನಲ್ಲಿ ಅಂದರೆ 1947ರಲ್ಲಿ ನರ್ಗೀಸ್ ಸಿನಿಮಾದ ಮೂಲಕ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದರು. ಬಾರಿ ಬೆಹೆನ್, ಮೇರಾ ಸುಹಾಗ್, ಸರ್ಗಮ್, ದೀದಾರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದ್ದ ಅವರು ಬೇಬಿ ತಬಸ್ಸುಮ್ ಎಂದೇ ಖ್ಯಾತಿ ಪಡೆದಿದ್ದರು.

1960ರಲ್ಲಿ ಬಿಡುಗಡೆ ಆದ ಐತಿಹಾಸಿಕ ಮುಘಲ್ ಎ ಆಜಂ ಚಿತ್ರದಲ್ಲಿನ ನಟನೆ ಅವರಿಗೆ ಇನ್ನಷ್ಟು ಖ್ಯಾತಿಯನ್ನೂ ತಂದುಕೊಟ್ಟಿತ್ತು. ಹಲವು ಸಿನಿಮಾಗಳ ಬಳಿಕ ಕಿರುತೆರೆಗೂ ಕಾಲಿಟ್ಟಿದ್ದ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಫೂಲ್ ಖಿಲೆ ಗುಲ್ಶನ್ ಗುಲ್ಶನ್ ಟಾಕ್ ಶೋ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದರು. 1972ರಿಂದ 1993ರವರೆಗೆ ಈ ಶೋವನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. 1990ರಲ್ಲಿ ರಾಜೇಶ್ ಖನ್ನಾ ಹಾಗೂ ಗೋವಿಂದ್ ಜೊತೆಗೆ ಸ್ವರ್ಗ್ ಸಿನಿಮಾದಲ್ಲಿ ಅವರು ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ: Indian Army : ಭಾರತೀಯ ಸೇನೆಯನ್ನು ಮದುವೆಗೆ ಆಮಂತ್ರಿಸಿದ ಕೇರಳ ವಧು : ನವ ವಿವಾಹಿತರಿಗೆ ಶುಭ ಹಾರೈಸಿದ ಸೇನೆ

‘ನನ್ನ ತಾಯಿಗೆ ಹಲವು ದಿನಗಳಿಂದ ಅನಾರೋಗ್ಯ ಭಾದಿಸುತ್ತಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖರಾಗಿರಲಿಲ್ಲ. ಶುಕ್ರವಾರ ರಾತ್ರಿ 2 ಬಾರಿ ಹೃದಯಾಘಾತ ಉಂಟಾಗಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತಿಮ ವಿಧಿ ಮುಗಿಯುವವರೆಗೂ ಅವರ ಸಾವಿನ ವಿಚಾರ ಯಾರಿಗೂ ತಿಳಿಯಬಾರದು ಅನ್ನೋದು ತಾಯಿಯ ಆಶಯವಾಗಿತ್ತು ‘ಎಂದು ತಬಸ್ಸುಮ್ ಅವರ ಪುತ್ರ ಹೊಶಾಂಗ್ ಗೊವಿಲ್ ತಿಳಿಸಿದ್ದಾರೆ.

Tabassum no more: Tabassum passes away at 78 due to cardiac arrest

Comments are closed.