ಕೋವಿಡ್‌ 19 ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದ ನಟಿ ಧನ್ಯಾ ರಾಮ್‌ಕುಮಾರ್‌

ಸ್ಯಾಂಡಲ್‌ವುಡ್‌ನಲ್ಲಿ ದೊಡ್ಮನೆ ಎಂದರೆ ವಿಶೇಷ ಮಾರ್ಯಾದೆ ಇರುತ್ತದೆ. ದೊಡ್ಮನೆಯ ಅಳಿಯ ರಾಮ್‌ಕುಮಾರ್‌ ಅವರ ಪುತ್ರಿ ಧನ್ಯಾ ರಾಮ್‌ಕುಮಾರ್‌ (Dhanya Ramkumar) ಇತ್ತೀಚೆಗೆಷ್ಟೇ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಸದ್ಯ ನಟಿ ಧನ್ಯಾ ರಾಮ್‌ಕುಮಾರ್‌ ಮಹಾಮಾರಿ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನಟಿ ಧನ್ಯಾ ರಾಮ್‌ಕುಮಾರ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ. ಹಾಗೆಯೇ ತಮ್ಮ ಮೆಚ್ಚಿನ ಅಭಿಮಾನಿಗಳಿಗೂ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.

ನಟಿ ಧನ್ಯಾ ರಾಮ್‌ಕುಮಾರ್‌ ಪೋಸ್ಟ್‌ನಲ್ಲಿ, ” ಎಲ್ಲರಿಗೂ ನಮಸ್ಕಾರ, ನನಗೆ ಕರೋನಾ ಪಾಸಿಟಿವ್‌ ಆಗಿದೆ. ಈವಿಚಾರವನ್ನು ತಿಳಿಸಲು ಪೋಸ್ಟ್‌ ಬರೆಯುತ್ತಿರುವೆ. ಸದ್ಯಕ್ಕೆ ನಾನು ಐಸೋಲೇಟ್‌ ಆಗಿರುವೆ ಹಾಗೂ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡಿರುತ್ತೇನೆ. ನೀವು ಮುನ್ನೆಚ್ಚೆರಿಕೆ ವಹಿಸಿ ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ. ಪ್ರತಿಯೊಬ್ಬರೂ ದಯವಿಟ್ಟು ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯವೇ ನಮ್ಮ ಭಾಗ್ಯ. ಸದ್ಯದಲ್ಲೇ ನನ್ನ ಆರೋಗ್ಯದ ಬಗ್ಗೆ ನಿಮ್ಮ ನಾನೇ ಮಾಹಿತಿ ಕೊಡುತ್ತೇನೆ. ದಯವಿಟ್ಟು ಈ ಸಮಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ” ಎಂದು ಧನ್ಯಾ ರಾಮ್‌ಕುಮಾರ್‌ ಬರೆದು ಹಂಚಿಕೊಂಡಿದ್ದಾರೆ. ದೇಶದಾದ್ಯಂತ ಮತ್ತೆ ಮಹಾಮಾರಿ ಕರೋನಾ ಉಲ್ಬಣಗೊಳ್ಳುತ್ತಿದ್ದು, ಈಗಾಗಲೇ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಸುತ್ತೋಲೆಗಳನ್ನು ಹೊರಡಿಸಿದೆ.

ಇದನ್ನೂ ಓದಿ : ಜನಪ್ರಿಯ ಕಿರುತೆರೆ ಶೋದಲ್ಲಿ ಭಾಗಿಯಾದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ಇದನ್ನೂ ಓದಿ : ಬಾಲಿವುಡ್‌ ನಟ ಅಜಯ್ ದೇವಗನ್ ಅಭಿನಯದ ‘ಸಿಂಗಮ್ 3’ ರಿಲೀಸ್‌ ಡೇಟ್‌ ಫಿಕ್ಸ್

ಇದನ್ನೂ ಓದಿ : ಹಿಂದುತ್ವವನ್ನು ಸುಳ್ಳಿನ ಮೇಲೆ ಕಟ್ಟಲಾಗಿದೆ ವಿವಾದಿತ ಟ್ವೀಟ್ ವೈರಲ್ : ನಟ ಚೇತನ್ ಕುಮಾರ್ ಅರೆಸ್ಟ್

ದೊಡ್ಮನೆ ಕುಡಿಯಾದ ನಟಿ ಧನ್ಯಾ ರಾಮ್‌ಕುಮಾರ್‌ “ನಿನ್ನ ಸನಿಹಕೆ” ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ನಟಿ ಧನ್ಯಾ ರಾಮ್‌ಕುಮಾರ್‌ “ಕಾಲಾಪತ್ಥರ್‌”, ಹೈಡ್‌ & ಸೀಕ್‌ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಸದ್ಯ ಕೋವಿಡ್‌ 19 ಸೋಂಕಿಗೆ ಒಳಗಾದ ನಟಿ ಧನ್ಯಾ ರಾಮ್‌ಕುಮಾರ್‌ ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಕಬ್ಜ ಸಿನಿಮಾದ ‘ನಮಾಮಿ ನಮಾಮಿ’ ಹಾಡಿನ ಶೂಟಿಂಗ್‌ ವೇಳೆ ಸೈನಸ್ ಅಟ್ಯಾಕ್‌ಗೆ ತುತ್ತಾಗಿದ ಶ್ರಿಯಾ ಶರಣ್

Take precautions against Covid-19, says actress Dhanya Ramkumar

Comments are closed.