ತಮನ್ನಾ…ಮಿಲ್ಕಿ ಬ್ಯೂಟಿ ಅನಿಸಿಕೊಂಡಿರೋ ತಮನ್ನಾ ಈಗ ಪುಲ್ ಸ್ಲಿಮ್ ಆಗಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾಗಳು… ಲೆಕ್ಕವಿಲ್ಲದಷ್ಟು ಫೋಟೋಶೂಟ್ ಮಾಡ್ತಿದ್ದಾರೆ.

ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಪ್ರಿನ್ಸ್ ಜೊತೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದೇ ಹಾಕಿದ್ದು, ತಮ್ಮನ್ನಾ ಅದೃಷ್ಟಾನೆ ಬದಲಾಗಿ ಹೋಗಿದೆ. ಮಿಲ್ಕಿ ಬ್ಯೂಟಿ ತಮ್ಮನ್ನಾ ಇತ್ತೀಚೆಗೆ ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾಗಿದ್ದಾರೆ.

ತಮನ್ನಾ ಇತ್ತೀಚೆಗೆ ಸಿನಿಮಾಗಳಲ್ಲಿ ಹೆಚ್ಚಾಗಿ ಐಟಂ ಹಾಡುಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ತಮನ್ನಾ ಮಾಡಿದ್ದ ‘ವೆಡ್ಡಿಂಗ್ ವೋವ್ಸ್’ ನಿಯತಕಾಲಿಕೆಯ ಫೋಟೋಶೂಟ್ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ತಮ್ಮನ್ನಾ ಅವರ ಕುರಿತಾದ ಬಿಸಿ ಬಿಸಿ ಸುದ್ದಿಗಳು ಹರಿದಾಡುತ್ತಿವೆ. ತಮನ್ನಾ ಭಾಟಿಯಾಗೆ ರವಿತೇಜ ಜೊತೆ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆಯಂತೆ.

ಅಷ್ಟೇ ಅಲ್ಲ ತಮನ್ನಾ ನಟ ಬಾಲಕೃಷ್ಣ ಜೊತೆ ಅಭಿನಯಿಸೋಕೆ 3 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ.

ತಮನ್ನಾ ಇಷ್ಟು ಬೇಡಿಕೆ ಇಡಲು ಕಾರಣ ಇದೆಯಂತೆ. ಬಾಲಕೃಷ್ಣರಂತಹ ನಟರಿಗೆ ಜೋಡಿಯಾಗಲು ಸದ್ಯ ಹಳೇ ನಾಯಕಿಯರಿಗಾಗಿ ಹುಡುಕಾಟ ನಡೆಯುತ್ತಿದ್ದು, ಇದರಿಂದಾಗಿ ತಮನ್ನಾ 3 ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ.