ವಿದೇಶದಿಂದ ಬರುವ ವಿದ್ಯಾವಂತರೇ ನೀವು ಮಾಡುತ್ತಿರುವುದು ದೇಶದ್ರೋಹವಲ್ಲವೇ ?

0

ವಿದೇಶದಿಂದ ಬರುತ್ತಿರುವ ದೇಶದ ವಿದ್ಯಾವಂತ ಜನರು ಕೊರೊನಾ ವಿಷಯದಲ್ಲಿ ಮಾಡುತ್ತಿರುವ ಕೃತ್ಯವನ್ನು ಕಂಡಾಗ ನಮಗೆ ಮಾರಕವಾಗುತ್ತಿದೆ. ಸೋಂಕು ಇದೆ ಎನ್ನುವುದು ಗೊತ್ತಾದಾಗ ತಮ್ಮ ಪ್ರಭಾವವನ್ನು ಬಳಸಿ ಅದನ್ನು ಮುಚ್ಚಿಡುವ ಹಲವಾರು ಪ್ರಕರಣಗಳು ವರದಿಯಾಗುತ್ತಿರುವುದು ದೇಶದ ಜನರನ್ನು ಆತಂಕಕ್ಕೀಡು ಮಾಡಿದೆ.

ವಿದೇಶದಿಂದ ಬರುತ್ತಿರುವ ವ್ಯಕ್ತಿಗಳು ದೇಶದ ಜನರಿಗೆ ಸಾರ್ವಜನಿಕರಿಗೆ ಕೊರೊನಾ ಹಂಚಲು ತರುವ ರೀತಿ ವರ್ತಿಸುತ್ತಿರುವುದು ದೇಶದ ಜನರನ್ನು ಕಳವಳಕ್ಕೀಡು ಮಾಡಿದೆ. ವಿದ್ಯಾವಂತ ಜನರು ಈ ರೀತಿಯಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಎಷ್ಟು ಸರಿ ಅನ್ನುವುದು ಸಾರ್ವಜನಿಕರ ಪ್ರಶ್ನೆ.

ವಿದೇಶಕ್ಕೆ ಹೋಗುವ ಬಹುತೇಕ ಮಂದಿ ಶ್ರೀಮಂತ ವರ್ಗದವರಾಗಿದ್ದು, ಸಹಜವಾಗಿ ಪ್ರಭಾವಿ ಅಧಿಕಾರಿ ರಾಜಕಾರಣಿಗಳ ಪರಿಚಯ ಇರುತ್ತದೆ. ಈ ಪರಿಚಯ, ಪ್ರಭಾವವನ್ನು ಬಳಸಿ ಕೆಲವು ಕಡೆ ಕಣ್ತಪ್ಪಿಸಿ ಸಾರ್ವಜನಿಕವಾಗಿ ವೈರಸ್ ಹಂಚಿಕೆ ಮಾಡುತ್ತಿದ್ದಾರೆನ್ನುವುದು ಇತ್ತೀಚಿಗೆ ವರದಿಯಾಗುತ್ತಿರುವ ಘಟನೆಗಳು ಸಾಕ್ಷಿ ನುಡಿಯುತ್ತಿವೆ.

ಹಲವಾರು ಬಾರಿ ಈ ದೇಶದ ವ್ಯವಸ್ಥೆಯನ್ನು ಕಂಡು ವಿದೇಶದಲ್ಲಿರುವ ನಿಮಗೆ ಅಸಹ್ಯ ಹುಟ್ಟಿರಬಹುದು. ಆದರೆ ಈ ಗ ನಿಮಗೆ ಸುರಕ್ಷಿತ ಎಂದು ಅನಿಸಿರುವುದು ಭಾರತದ ಭೂಮಿಯೇ. ಖಂಡಿಯವಾಗಿ ಇಲ್ಲಿ ಬರಲು ಜೀವಿಸಲು ಈ ದೇಶದ ಪ್ರಜೆಗಳಾದ ನಿಮಗೆ ಹಕ್ಕು ಇದೆ. ಆದರೆ ನೀವು ವಿದೇಶಕ್ಕೆ ಹೋಗಿ ಹಿಂದೆ ಬರುವಾಗ ಭಾರತಕ್ಕೆ ಗಿಫ್ಟ್ ರೂಪದಲ್ಲಿ ಕೊರೊನಾ ವೈರಸ್ ತಂದು ಹಂಚ ಬೇಡಿ.

ದೇಶದ ಕಾನೂನಿಗೆ ಮಾನ್ಯತೆ ನೀಡಿ, ಅಧಿಕಾರಿಗಳ ಹಾಗೂ ಸರಕಾರ ನಿರ್ದೇಶನದಂತೆ ನೀವು ತಪಾಸಣೆಗೆ ಒಳಗಾಗಿ ದೇಶದ 130 ಕೋಟಿ ಜನರನ್ನು ಉಳಿಸಿ ಎಂಬುದು ನಿಮ್ಮಲ್ಲಿ ನಮ್ಮ ಕಳಕಳಿಯ ಮನವಿ., ಸರಕಾರದೊಂದಿಗೆ ಸಹಕರಿಸುವುದು, ಸಾರ್ವಜನಿಕವಾಗಿ ಬೇಜವಾಬ್ದಾರಿ ಯುತವಾಗಿ ವರ್ತಿಸುವುದು ದೇಶದ ಪ್ರೇಮವೇ ಹೊರತು ಬೇರಾವುದೂ ಅಲ್ಲ. ನೀವು ನಿಮ್ಮ ಕೊರೊನಾ ಸೋಂಕನ್ನು ಪ್ರಭಾವ ಬಳಸಿ ಮಚ್ಚಿಟ್ಟರೆ ಅದು ದೇಶದ್ರೋಹವಾಗುತ್ತದೆ. ದೇಶದ ಆರೋಗ್ಯವನ್ನು ಸಮಸ್ಯೆಗೆ ಸಿಲುಕಿಸಿದಂತಾಗುತ್ತದೆ ಇನ್ನಾದರೂ ಅರ್ಥ ಮಾಡಿಕೊಳ್ಳಿ

  • ಪ್ರಜ್ಞಾವಂತ ನಾಗರೀಕ
Leave A Reply

Your email address will not be published.