Tatsama Tadbhava Movie : ತತ್ಸಮ ತದ್ಬವದಲ್ಲಿ ಚಿರು ಪ್ರೆಂಡ್ಸ್: ಮೇಘನಾ ಶೇರ್ ಮಾಡಿದ್ರು ಸ್ಪೆಶಲ್ ವಿಡಿಯೋ

ಮತ್ತೊಮ್ಮೆ ಬೆಳ್ಳಿತೆರೆಗೆ ಪೂರ್ಣಪ್ರಮಾಣದಲ್ಲಿ ಕಮ್ ಬ್ಯಾಕ್ ಮಾಡಿರೋ ಬಹುಭಾಷಾ ನಟಿ ಮೇಘನಾ ರಾಜ್ ಸದ್ಯ ತಮ್ಮ ಹೊಸ ಸಿನಿಮಾ ತತ್ಸಮ ತದ್ಬವದ (Tatsama Tadbhava Movie) ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮ ಸ್ನೇಹಲೋಕದಲ್ಲಿ ಖುಷಿ ಖುಷಿಯಾಗಿ ಎಂಜಾಯ್ ಮಾಡ್ತಿದ್ದು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಹಲವು ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಅಭಿರುಚಿಯ ಪಾತ್ರಗಳನ್ನು ಮಾಡಿದ ನಟಿ ಮೇಘನಾ ರಾಜ್ ಸರ್ಜಾ ಮದುವೆಯ ಬಳಿಕ ವೃತ್ತಿ ಬದುಕಿನಿಂದ ಚಿಕ್ಕ ಬ್ರೇಕ್ ಪಡೆದುಕೊಂಡಿದ್ದರು. ಪ್ರೀತಿಸಿ ಮದುವೆಯಾದ ಚಿರು ಜೊತೆ ಹೊಸ ಬದುಕು ಕಟ್ಟುತ್ತಿರುವಾಗಲೇ ಮೇಘನಾ ಬದುಕಿನಲ್ಲಿ ದುಃಖದ ಸುನಾಮಿ ಬಂದಪ್ಪಳಿಸಿತ್ತು. ಚಿರು ಅಕಾಲಿಕ ನಿಧನ ಮೇಘನಾ ಬದುಕನ್ನೇ ನೋವಿನ ಕೂಪಕ್ಕೆ ತಳ್ಳಿತ್ತು. ಆದರೆ ಹೊಟ್ಟೆಯಲ್ಲಿದ್ದ ಪುಟ್ಟ ಕಂದನಿಗಾಗಿ ಮೇಘನಾ ರಾಜ್ ಸರ್ಜಾ ತಮ್ಮೆಲ್ಲ ನೋವು ಮರೆತು ಹೊಸ ಬದುಕು ಆರಂಭಿಸಿದ್ದರು.

ರಾಯನ್ ರಾಜ್ ಸರ್ಜಾ ಜನನದ ಬಳಿಕ ಫುಲ್ ಟೈಂ ತಾಯಿಯಾಗಿ ಆತನ ಆರೈಕೆಯಲ್ಲೇ ಬ್ಯುಸಿಯಾಗಿದ್ದ ಮೇಘನಾಗೇ ವೃತ್ತಿ ಬದುಕು ಮರೆತೇ ಹೋಗಿತ್ತು. ಆದರೆ ಆಕೆಯ ಸ್ನೇಹಲೋಕ ಮೇಘನಾರನ್ನು ತಮ್ಮ ಪ್ರೀತಿಯ ಕೆಲಸದ ಕಡೆಗೆ ಆಕೆಯನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗಿದೆ. ಇದರ ಫಲವಾಗಿ ನಟಿ ಮೇಘನಾ ಮತ್ತೆ ಬಣ್ಣ ಹಚ್ಚಿದ್ದಾರೆ. ಪನ್ನಗ ನಿರ್ದೇಶಿಸಿ, ನಿರ್ಮಿಸುತ್ತಿರುವ ತತ್ಸಮ ತದ್ಬವ ಸಿನಿಮಾದ ಮೂಲಕ ಮತ್ತೆ ಕನ್ನಡ ಸಿನಿಮಾ ಲೋಕಕ್ಕೆ ರ್ರೀ ಎಂಟ್ರಿಯಾಗಿದ್ದಾರೆ. ಇದನ್ನೂ ಓದಿ : Jailer Box Office Collection : ಜೈಲರ್ ಬಾಕ್ಸ್ ಆಫೀಸ್ ಕಲೆಕ್ಷನ್: 9 ದಿನಗಳಲ್ಲಿ ವಿಶ್ವಾದ್ಯಂತ 468 ಕೋಟಿ ರೂ. ಗಳಿಸಿದ ನಟ ರಜನಿಕಾಂತ್ ಸಿನಿಮಾ

ಮೇಘನಾ ಹಲವು ಸಂದರ್ಶನಗಳಲ್ಲಿ ಎರಡು ಸಂಗತಿಗಳನ್ನು ಹೇಳಿಕೊಂಡಿದ್ದರು, ಚಿರುಗೆ ನಾನು ನಟನೆಯನ್ನು ಬಿಡಬಾರದು ಎಂಬ ಆಸೆಯಿತ್ತು ಅನ್ನೋದು, ಅಲ್ಲದೇ ಚಿರು ನನಗಾಗಿ ಸ್ನೇಹಲೋಕವನ್ನೇ ಬಿಟ್ಟು ಹೋಗಿದ್ದಾರೆ. ಅವರೆಲ್ಲರೂ ನನಗೆ ಚಿರು ಅಗಲಿಕೆಯ ನೋವಿನ ಜೊತೆಗೆ ಬದುಕುವದನ್ನು ಕಲಿಸುತ್ತಿದ್ದಾರೆ ಎಂದು‌. ಈ ಮಾತು ಸದಾ ಸತ್ಯ ಎಂಬಂತೆ ಚಿರು ಹಾಗೂ ಮೇಘನಾ ಗೆಳೆಯ ಪನ್ನಗಾಭರಣ ತಮ್ಮ ಸಿನಿಮಾದಲ್ಲಿ ವಿಭಿನ್ನ ಪ್ರಮುಖ ಪಾತ್ರದ ಮೂಲಕ ಮೇಘನಾರನ್ನು ಮತ್ತೆ ಸ್ಯಾಂಡಲ್ ವುಡ್ ಸ್ಕ್ರಿನ್ ಗೆ ತರ್ತಿದ್ದಾರೆ.

ಇನ್ನೂ ಇವರ ಈ ಜರ್ನಿಯಲ್ಲಿ ಮತ್ತೊಬ್ಬ ಕುಚಿಕು ಗೆಳೆಯ ಪ್ರಜ್ವಲ್ ದೇವರಾಜ್ ಜೊತೆಯಾಗಿದ್ದು, ಪ್ರಜ್ವಲ್ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ಸಿನಿಮಾ ಶೂಟಿಂಗ್,ಪ್ರಮೋಶನ್ ಸೇರಿದಂತೆ ಎಲ್ಲಾ ಸಂದರ್ಭದಲ್ಲೂ ಮೇಘನಾ ಪ್ರೆಂಡ್ಸ್ ಟೀಂ ಜೊತೆ ಸಖತ್ ಖುಷಿಯಾಗಿ ಎಂಜಾಯ್ ಮಾಡಿದ್ದು, ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ಟೈಟಲ್ ಗಳ ಮೂಲಕ ಹಂಚಿಕೊಂಡಿದ್ದಾರೆ.

Tatsama Tadbhava Movie: Chiru Friends in Tatsama Tadbhava: Meghana Shares Special Video

Comments are closed.