Lok Sabha Elections : ಕಾಂಗ್ರೆಸ್ ಅಧ್ಯಕ್ಷರ ಗೆಲುವಿಗೆ ಮಾಸ್ಟರ್ ಪ್ಲ್ಯಾನ್: ಲೋಕಸಭೆಯಲ್ಲಿ ಕಲ್ಬುರ್ಗಿ ಬದಲು ಕೋಲಾರದಿಂದ ಖರ್ಗೆ ಸ್ಪರ್ಧೆ

ಬೆಂಗಳೂರು : Lok Sabha Elections : ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರ ಹೈಟೆನ್ಸನ್ ಕ್ಷೇತ್ರವಾಗಿ ಮಾರ್ಪಟ್ಟಿತ್ತು.‌ಇದಕ್ಕೆ ಕಾರಣ ಹಾಲಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆ ವಿಚಾರ. ಇದೀಗ ವಿಧಾನಸಭಾ ಚುನಾವಣೆ ಬಳಿಕ ಲೋಕಸಭಾ ಚುನಾವಣೆಯಲ್ಲೂ ಕೋಲಾರ ದೇಶದ ಹಾಗೂ ರಾಜ್ಯದ ಗಮನ ಸೆಳೆಯೋ ಸಾಧ್ಯತೆ ಇದ್ದು, ಸಿದ್ಧು ಬಳಿಕ ಖರ್ಗೆ ಕೋಲಾರದಿಂದ ಸ್ಪರ್ಧಿಸೋ ಚರ್ಚೆ ಆರಂಭವಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಕಣಕ್ಕಿಳಿಯುವಂತೆ ಹಾಲಿ ಸಿಎಂ ಸಿದ್ಧರಾಮಯ್ಯನವರಿಗೆ ತೀವ್ರ ಒತ್ತಡ ವ್ಯಕ್ತವಾಗಿತ್ತು. ಆದರೆ‌ ಕೊನೆ ಕ್ಷಣದವರೆಗೂ ಕೋಲಾರದಿಂದಲೇ‌‌ ಕಣಕ್ಕಿಳಿಯುವುದಾಗಿ ಹೇಳುತ್ತ ಬಂದಿದ್ದ ಸಿದ್ಧರಾಮಯ್ಯನವರು ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಾಯಿಸಿದ್ದರು. ಈಗ ಮತ್ತೊಮ್ಮೆ ಕೋಲಾರ ಸ್ಪರ್ಧೆ ವಿಚಾರ ಮುನ್ನಲೆಗೆ ಬಂದಿದ್ದು, ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಅವರಿಗೆ ಸ್ಥಳೀಯ ನಾಯಕರು ಮನವಿ ಮಾಡಿದ್ದಾರಂತೆ.

ಕೋಲಾರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಜಿಲ್ಲೆಯ ಕೈ ಶಾಸಕರ ಒತ್ತಾಯ ಹೇರಿದ್ದು ಬಂಗಾರಪೇಟೆ ಕೈ ಶಾಸಕ S.N ನಾರಾಯಣಸ್ವಾಮಿ ರಿಂದ ಸ್ವತಃ ಖರ್ಗೆ ಭೇಟಿ ಮಾಡಿ ಆಹ್ವಾನಿಸಿದ್ದಾರಂತೆ. ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಕೋಲಾರ ಅಖಾಡದಿಂದ ಲೋಕಸಭೆಗೆ ಸ್ಪರ್ಧೆಗೆ ಒತ್ತಾಯಿಸಿದ್ದು, ಜಿಲ್ಲೆಯ ದಲಿತ ನಾಯಕರು‌ ಸೇರಿದಂತೆ ಕಾಂಗ್ರೆಸ್ ಮುಖಂಡರು ಖರ್ಗೆ ಗೆಲುವಿಗೆ ಶ್ರಮಿಸಲಿದ್ದಾರೆ ಎಂಬ ಅಭಯ ನೀಡಿದ್ದಾರಂತೆ. ಹಾಲಿ ಬಿಜೆಪಿ ಸಂಸದ, ರಾಜಕೀಯ ವಿರೋಧಿಯಾಗಿರೋ, ಎಸ್,ಮುನಿಸ್ವಾಮಿ ಸೋಲಿಸಲು ಶಾಸಕ ನಾರಾಯಣಸ್ವಾಮಿ ಪ್ಲಾನ್ ಮಾಡಿದ್ದು ಇದಕ್ಕಾಗಿಯೇ ಖರ್ಗೆಯವರನ್ನು ಆಹ್ವಾನಿಸಿ ಸ್ಪರ್ಧೆ ಮಾಡಿಸಲು ಪ್ಲ್ಯಾನ್ ಮಾಡಿದಂತಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ K.H ಮುನಿಯಪ್ಪ ಸ್ಪರ್ಧೆಗೆ ಶಾಸಕ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು.ಆದರೆ ಈ ಭಾರಿ ಕೋಲಾರದಿಂದ ಲೋಕಸಭೆ ಚುನಾವಣೆಗೆ ನಿಲ್ಲೋ ವಿಚಾರದಲ್ಲಿ ಆಹಾರ ಸಚಿವ K.H ಮುನಿಯಪ್ಪ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗ್ತಿದೆ‌. ಕಳೆದ ಭಾರಿ ಕಲ್ಬುರ್ಗಿಯಲ್ಲಿ ಖರ್ಗೆಯವರ ವಿರುದ್ಧ ಅವರ ಅಪ್ಪಟ ಶಿಷ್ಯ ಉಮೇಶ್ ಜಾಧವರನ್ನು ಬಿಜೆಪಿ ಅವರ ವಿರುದ್ಧವೇ ಕಣಕ್ಕಿಳಿಸಿತ್ತು.‌ಇದರಿಂದ ಖರ್ಗೆ ಹೀನಾಯವಾಗಿ ಸೋಲುಂಡಿದ್ದರು‌. ಇದು ರಾಜಕೀಯದ ಸಂಧ್ಯಾಕಾಲದಲ್ಲಿರೋ ಖರ್ಗೆಯವರಿಗೆ ತೀವ್ರ ಮುಖಭಂಗ ಉಂಟು ಮಾಡಿತ್ತು. ಇದನ್ನೂ ಓದಿ : Lok Sabha Elections : ಲೋಕಸಭಾ ಅಭ್ಯರ್ಥಿ ಆಯ್ಕೆ ಸುನೀಲ್ ಹೆಗಲಿಗೆ : ಗೆಲುವಿಗಾಗಿ ಕೈಪಡೆ ಹೊಸ ತಂತ್ರ

ಹೀಗಾಗಿ ಈ ಭಾರಿ ಖರ್ಗೆ ಗೆಲ್ಲುವ ಕ್ಷೇತ್ರವೊಂದರ ಹುಡುಕಾಟದಲ್ಲಿದ್ದಾರೆ ಎನ್ನಲಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾರಾಯಣಸ್ವಾಮಿ ಖರ್ಗೆಯವರನ್ನು ಕೋಲಾರಕ್ಕೆ ಆಹ್ವಾನಿಸಿದ್ದಾರಂತೆ. ಆದರೇ ಖರ್ಗೆ ಮಾತ್ರ ಈ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ ಎನ್ನಲಾಗ್ತಿದೆ.‌ಒಂದೊಮ್ಮೆ ಖರ್ಗೆ ತಮ್ಮ ಗೆಲುವಿಗಾಗಿ ಕೋಲಾರ ಆಯ್ದುಕೊಂಡಲ್ಲಿ ಕೋಲಾರ ಮತ್ತೊಮ್ಮೆ ಹೈಟೆನ್ಸನ್ ಕ್ಷೇತ್ರವಾಗೋದರಲ್ಲಿ ಸಂಶಯವೇ ಇಲ್ಲ.

Lok Sabha Elections: Master plan for Congress President’s victory: Kharge to contest from Kolar instead of Kalburgi in Lok Sabha

Comments are closed.