Tatsama-Tadbhava’s teaser : ಪ್ರಜ್ವಲ್‌ ದೇವರಾಜ್‌, ಮೇಘನಾ ಸರ್ಜಾ ಅಭಿನಯದ ತತ್ಸಮ ತದ್ಭವ ಟೀಸರ್‌ ಔಟ್‌

ಕನ್ನಡ ಸಿನಿರಂಗಕ್ಕೆ ನಟಿ ಮೇಘನಾ ಸರ್ಜಾ ತತ್ಸಮ ತದ್ಭವ ಸಿನಿಮಾ (Tatsama-Tadbhava’s teaser) ಮೂಲಕ ಕಂಬ್ಯಾಕ್‌ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಮೇಘನಾ ಸರ್ಜಾ ಹಾಗೂ ಪ್ರಜ್ವಲ್‌ ದೇವರಾಜ್ ಸ್ನೇಹಿತರಿಬ್ಬರು ಒಟ್ಟಿಗೆ ಅಭಿನಯಿಸಿದ್ದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ. ಸದ್ಯ ಈ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲು ಈ ಸಿನಿಮಾದ ಟೀಸರ್‌ ಬಿಡುಗಡೆ ಆಗಿದೆ.

ಪತಿ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನಟಿ ಮೇಘನಾ ಸರ್ಜಾ ಪ್ರತಿದಿನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು. ಆದರೆ ಮಗ ರಾಯನ್‌ ಸರ್ಜಾಗೆ ಜನ್ಮ ನೀಡಿದ ಮೇಲೆ ಮತ್ತೆ ಖುಷಿ ಎನ್ನುವುದು ಅವರ ಜೀವನದಲ್ಲಿ ಮರುಜೀವ ಪಡೆದುಕೊಂಡಿದೆ ಎಂದರೆ ತಪ್ಪಾಗಲ್ಲ. ಇದೀಗ ಸ್ನೇಹಿತ ಪ್ರಜ್ವಲ್‌ ದೇವರಾಜ್‌ರೊಂದಿಗೆ ಬಣ್ಣದಲೋಕಕ್ಕೆ ಮತ್ತೆ ಮರಳಿದ್ದು, ಅಭಿಮಾನಿಗಳಿಗೆ ಸಂತಸ ನೀಡಿದೆ.

ತತ್ಸಮ ತದ್ಭವ ಸಿನಿಮಾವು ಸಸ್ಪೆನ್ಸ್‌ ಥ್ರೀಲ್ಲರ್‌ ಶೈಲಿಯಲ್ಲಿ ಈ ಟೀಸರ್‌ ಇರುವುದರಿಂದ ಪ್ರೇಕ್ಷಕರಿಗೆ ಸಿನಿಮಾ ನೋಡಲು ಇನ್ನಷ್ಟು ಆಸಕ್ತಿ ನೀಡಿದೆ. ಹಾಗೆ ನಟಿ ಮೇಘನಾ ಸರ್ಜಾ ನಟನೆ ಎಲ್ಲರ ಗಮನ ಸೆಳೆದಿದೆ. ಇನ್ನು ಈ ಸಿನಿಮಾ ಶ್ರಾವಣ ಮಾಸ ಅಂದರೆ ಆಗಸ್ಟ್‌ ರಿಲೀಸ್‌ ಆಗಲಿದೆ ಎಂದು ಟೀಸರ್‌ ಮೂಲಕ ಮಾಹಿತಿ ನೀಡಿದ್ದಾರೆ.

ಈ ಸಿನಿಮಾ ಮಿಸ್ಸಿಂಗ್‌ ಕೇಸ್‌ನ ಕಥಾಹಂದರವನ್ನು ಒಳಗೊಂಡಿದ್ದು, ಇದರಲ್ಲಿ ನಟಿ ಮೇಘನಾ ಆರಿಕಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಯಾದ ಟೀಸರ್‌ನಲ್ಲಿ, ” ನನ್ನ ಹೆಸರು ಆರಿಕಾ. ನನ್ನ ಪತಿ ಕಾಣೆ ಆಗಿದ್ದಾರೆ” ಎಂದು ದೂರು ನೀಡುವುದನ್ನು ಕಾಣಬಹುದು. ಈ ಕೇಸ್‌ಮ ಕೈ ಗೆತ್ತಿಕೊಳ್ಳುವುದು ಪ್ರಜ್ವಲ್‌ ದೇವರಾಜ್‌, ಹೀಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್‌ ಮತ್ತೊಮ್ಮೆ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೀಸರ್‌ ಉದ್ದಕ್ಕೂ ಸಸ್ಪೆನ್ಸ್‌ ಅಡಗಿದ್ದು, ಕಾಣೆಯಾದವರ ಪತ್ತೆ ಮಾಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ : Kendada Seragu Movie : ನಟಿ ಮಾಲಾಶ್ರೀ ನಟನೆಯ ಕೆಂಡದ ಸೆರಗು ಸಿನಿಮಾದ ಎರಡನೇ ಹಾಡು ರಿಲೀಸ್

ಈ ಸಿನಿಮಾವನ್ನು ವಿಶಾಲ್‌ ಆತ್ರೇಯ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾ ನಟ ಚಿರಂಜೀವ ಸರ್ಜಾ ಆತ್ಮೀಯ ಗೆಳೆಯ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್‌ ಅವರು ನಿರ್ಮಾಣ ಹೊಣೆ ಹೊತ್ತಿದ್ದಾರೆ. ಪ್ರಜ್ವಲ್‌ ದೇವರಾಜ್‌ ಹಾಗೂ ಮೇಘನಾ ಸರ್ಜಾ ಅಭಿನಯದ ಈ ಸಿನಿಮಾದಲ್ಲಿ ಅನೇಕ ಸಹ ಕಲಾವಿದರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ವಾಸುಕಿ ವೈಭವ್‌ ಸಂಗೀತ ನಿರ್ದೇಶನ ನೀಡಿದ್ದಾರೆ.

Tatsama-Tadbhava’s Teaser : Prajwal Devaraj, Meghana Sarja Starrer Tatsama Tadbhava Teaser Out

Comments are closed.